Kannada organizations blast against "Pushpa-2" at Chitradurga: Midnight show canceled in Bengaluru

ಚಿತ್ರದುರ್ಗದಲ್ಲಿ ” ಪುಷ್ಪ – 2 “ವಿರುದ್ದ ಸಿಡಿದೆಡ್ಡ ಕನ್ನಡ ಸಂಘಟನೆಗಳು: ಬೆಂಗಳೂರಿನಲ್ಲಿ ಮಿಡ್ ನೈಟ್ ಶೋ ರದ್ದು - CineNewsKannada.com

ಚಿತ್ರದುರ್ಗದಲ್ಲಿ ” ಪುಷ್ಪ – 2 “ವಿರುದ್ದ ಸಿಡಿದೆಡ್ಡ ಕನ್ನಡ ಸಂಘಟನೆಗಳು: ಬೆಂಗಳೂರಿನಲ್ಲಿ ಮಿಡ್ ನೈಟ್ ಶೋ ರದ್ದು

ಕನ್ನಡ ಕಲಾಭಿಮಾನಿಗಳು, ಕಲಾವಿದರಿಗೆ, ಕನ್ನಡಕ್ಕೆ ಅವಮಾನಿಸಿ ತೆಲುಗಿನ ಪುಷ್ಪ-2 ಪ್ರದರ್ಶನಕ್ಕೆ ಮುಂದಾದ ಚಿತ್ರದುರ್ಗದ ಚಿತ್ರಮಂದಿರಗಳ‌ ಮಾಲೀಕರ ನಡೆ‌ ಖಂಡಿಸಿ ಕನ್ನಡ ಚಿತ್ರಕ್ಕೆ ಅವಕಾಶ ಮಾಡಿಕೊಡುವಂತೆ ಕನ್ನಡ ಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದೇ ಡಿಸೆಂಬರ್‌ 6ಕ್ಕೆ ಕನ್ನಡದ “ಧೀರ ಭಗತ್ ರಾಯ್” ಚಿತ್ರ ಆಗ್ತಿದ್ದು, ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಇಲ್ಲದ್ದನ್ನು ಖಂಡಿಸಿ ಕನ್ನಡ ಚಿತ್ರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ

ಧೀರ ಭಗತ್ ರಾಯ್ ನಮ್ಮ‌ ಕನ್ನಡದ ಸಿನಿಮಾ, ಅದಕ್ಕೆ ಹೆಚ್ಚಿನ‌ ಸಂಖ್ಯೆಯಲ್ಲಿ ಚಿತ್ರ ನೀಡಬೇಕು ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಎಸ್.ಕರಿಯಪ್ಪರವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಚಿತ್ರದುರ್ಗದಲ್ಲಿ ಗುಡುಗಿದ ಕರುನಾಡ ವಿಜಯಸೇನೆ ಮತ್ತು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಸಹ ನಿರ್ಮಾಪಕ ಕರಿಯಪ್ಪ ಎಸ್ ಬಿನ್ ಶಿವಪ್ಪ ಮನವಿ ಪತ್ರ ಸಲ್ಲಿಸಿದ್ದಾರೆ

ದುರ್ಗದ ಪ್ರಸನ್ನ, ಛೋಟಾ ಮಹಾರಾಜ್, ಮತ್ತು ವೆಂಕಟೇಶ್ವರ ಪ್ರಸಿದ್ಧ ಚಿತ್ರಮಂದಿರಗಳಲ್ಲಿ ಪುಷ್ಪ-2 ಪ್ರದರ್ಶನಕ್ಕೆ ಅವಕಾಶ ಮಾಡಿದ್ದು ರದ್ದು ಮಾಡಿ ಕನ್ನಡಕ್ಕೆ ಅವಕಾಶ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ.

ಪುಷ್ಪ -2 ಬಿಡುಗಡೆಗೆ ತಡೆ

ಧೀರ ಭಗತ್ ರಾಯ್ ಸಹ ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರರ ಮನವಿಗೆ ಸ್ಪಂದಿಸಿದ ‌ಜಿಲ್ಲಾಧಿಕಾರಿಗಳು ವಿತರಕರಿಗೆ ನೋಟೀಸ್ ನೀಡಿ ಚಿತ್ರದುರ್ಗದಲ್ಲಿ ಪುಷ್ಪ-2 ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದಾರೆ.

ಕರ್ನಾಟಕದಲ್ಲಿ ‘ಪುಷ್ಪ-2’ ಸಿನಿಮಾದ ಮಧ್ಯರಾತ್ರಿ ಹಾಗೂ ಬೆಳಗಿನ ಪ್ರದರ್ಶನ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

ಮಧ್ಯರಾತ್ರಿ 12 ಗಂಟೆ ಹಾಗೂ ಬೆಳಗ್ಗೆ 3 ಗಂಟೆ ಪ್ರದರ್ಶನ ರದ್ದಾಗಿದ್ದು ಪುಷ್ಪ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ನೀಡಲಾಗಿದೆ.

ಜಿಲ್ಲಾಧಿಕಾರಿ ಆದೇಶದಂತೆ ಮಿಡ್ ನೈಟ್ ಹಾಗೂ ಮಾರ್ನಿಂಗ್ ಶೋ ರದ್ದಾಗಿದ್ದು ಎಂದಿನಂತೆ ಇರಲಿದೆ ಬೆಳಗ್ಗೆ ಆರು ಗಂಟೆ ಪುಷ್ಪ‌-2 ಸಿನಿಮಾ ಪ್ರದರ್ಶನ ನಡೆಯಲಿದೆ. ರದ್ದಾಗಿರುವ ಶೋಗಳ ಅಮೌಂಟ್ ಅನ್ನು ಮಾಲೀಕರು ಇಲ್ಲ ಮುಂದಿನ ಶೋಗೂ ಕಂಟಿನ್ಯೂ ಮಾಡಬಹುದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin