ಕಿಚ್ಚ ಸುದೀಪ್ ಅಭಿನಯದ “ಮ್ಯಾಕ್ಸ್” ಮಾಸ್ ಟೀಸರ್ ಬಿಡುಗಡೆ : ಕುತೂಹಲ ಹೆಚ್ಚಳ
ಬಹು ನಿರೀಕ್ಷಿತ ಚಿತ್ರ “ಮ್ಯಾಕ್ಸ್” ಇಂದು ಟೀಸರ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ. ಮಾಸ್- ಗಾಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಟೀಸರ್ ನಲ್ಲಿನ ಆಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ.
ಪ್ಯಾನ್-ಇಂಡಿಯಾ ಚಿತ್ರವಾದ “ಮ್ಯಾಕ್ಸ್” ಒಂದು “ಮಾಸ್” ಚಿತ್ರವಾಗಿದ್ದು, ಟೀಸರ್ ನಲ್ಲಿರುವ ಡೈಲಾಗ್ ತುಣುಕುಗಳು ಈಗಾಗಲೇ ಭರ್ಜರಿ ಸದ್ದು ಮಾಡಿ, ಸಿನಿ ಪ್ರೇಕ್ಷಕರು ಚಿತ್ರದ ಬರುವಿಕೆಯನ್ನು ಎದುರು ನೋಡುವಂತೆ ಮಾಡಿದೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ “ಮ್ಯಾಕ್ಸ್” ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.