‘ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಬೆಂಬಲ: ಮರಳಿ ಬಂದ ನಟಿ ಸಂಗೀತ ಮಾಧವನ್
ಗೌರಿ ಆರ್ಟ್ಸ್. ನಿರ್ಮಾಣ ಸಂಸ್ಥೆಯ ಚೊಚ್ಚಲ ನಿರ್ಮಾಣದ “ಸೆಲೆಬ್ರಿಟಿ” ಚಿತ್ರದ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರ, ಈ ಚಿತ್ರದ ಮೂಲಕ ಯುವ ಪ್ರತಿಭೆ ಅಶ್ವಿನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ, ಜೊತೆಗೆ ಯಾರೆ ನೀ ಚೆಲುವ ಚಿತ್ರದಲ್ಲಿ ನಾಯಕಿಯಾಗಿದ್ದ ಸಂಗೀತ ಮಾಧವನ್ 25 ವರ್ಷಗಳ ಬಳಿಕ ಕನ್ನಡ ಚಿತ್ರಕ್ಕೆ ಮರಳಿ ಬಂದಿದ್ದಾರೆ.

ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್, ಚಿತ್ರದ ಟೀಸರ್ ತುಂಬಾ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಬ್ಯೂಟಿಫುಲ್ ಆಗಿದೆ. ವಿಜಯ್ ಮ್ಯೂಸಿಕ್ ಚೆನ್ನಾಗಿದೆ. ಇವ್ರು ಅರ್ಜುನ್ ಜನ್ಯ ಶಿಷ್ಯ. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಮಾತಾಡೋ ತಾರೆಯ ಕಂಡ ಹಾಗೇ ಹಾಡು ಹಾಡಿರುವುದು ಇವರೇ. ಇವ್ರ ವಾಯ್ಸ್ ಬ್ಯೂಟಿಫುಲ್ ಆಗಿದೆ. ಟೀಸರ್ ಚೆನ್ನಾಗಿ ತೆಗೆದಿದ್ದಾರೆ. ಹೀರೋ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ನಿರ್ಮಾಪಕ ಸಾರಾ ಮಹೇಶ್ ಬಹಳ ವರ್ಷಗಳ ಪರಿಚಯ ಅವರ ಮೊದಲ ಪ್ರಯತ್ನ ಯಶಸ್ವಿಯಾಗಲಿ ಎಂದರು
ನಾಯಕ ಅಶ್ವಿನ್ ಮಾತನಾಡಿ, ಚಿಕ್ಕ ವಯಸ್ಸಿನಿಂದ ಕನಸು ಇಟ್ಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ ಎಂದರು.

ಹಿರಿಯ ನಟಿ ಸಂಗೀತ ಮಾಧವನ್ ಮಾತನಾಡಿ ನಮಸ್ಕಾರ ಕರ್ನಾಟಕ ಚೆನ್ನಾಗಿ ಇದ್ದೀರಾ ಎಂದು ಕನ್ನಡದಲ್ಲಿಯೇ ಮಾತು ಶುರು ಮಾಡಿ, ನನಗೆ ತುಂಬಾ ಸಂತೋಷವಾಗ್ತಿದೆ. ಇಷ್ಟು ವರ್ಷವಾದ್ಮೇಲೆ ಸೆಲೆಬ್ರಿಟಿ ಸಿನಿಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದೇನೆ. ನಿರ್ದೇಶಕ ಕಿರಣ್ , ಸಾರಾ ಮಹೇಶ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು. ಸುದೀಪ್ ಅಭಿಮಾನಿ ನಾನು. ಹೀರೋ ತುಂಬಾ ಹಾರ್ಡ್ ವರ್ಕ್ ಮಾಡ್ತಾರೆ. ಈ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದರು.
ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಮೂಲಕ ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಕಿರಣ್ ವಿಶ್ವನಾಥ್ ಸೆಲೆಬ್ರಿಟಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾಯಕಿಯಾಗಿ ನಟಿ ಪ್ರಿಯಾಂಕಾ ಆಚಾರ್ ಅಭಿನಯಿಸುತ್ತಿದ್ದು, ಯಾರೇ ನೀನು ಚೆಲುವೆ ಖ್ಯಾತಿಯ ಸಂಗೀತ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ

ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ, ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿದೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಿದೆ

