“ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರದ ಟ್ರೈಲರ್ ಗೆ ಕಿಚ್ಚ ಸುದೀಪ್ ಬೆಂಬಲ
ಕನ್ನಡ ಚಿತ್ರರಂಗದ ಮುದ್ದಾದ ನಟರಲ್ಲಿ ಒಬ್ಬರಾದ ದಿಗಂತ್ ನಟನೆಯ “ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಟ ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿರುವಿದು ಚಿತ್ರತಂಡಕ್ಕೆ ಮತ್ತಷ್ಟು ಆನೆ ಬಲಂದಿದೆ. ಇದೇ ಖುಷಿಯಲ್ಲಿ ಚಿತ್ರ ಜೂನ್ 13 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ

ಸಮರ್ಥ್ ಕಡ್ಕೊಳ್ ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಅನೇಕ ಕಾರಣಗಳಿಂದ ರಿಲೀಸ್ ಮುಂದಕ್ಕೆ ಹೋಗುತ್ತಿತ್ತು. ಕೊನೆಗೂ ಸಿನಿಮಾ ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ
.
ಟೈಟಲ್ ಹೇಳುವ ಹಾಗೆ ಎಡಗೈ ಹೆಚ್ಚಾಗಿ ಬಳಸುವ ವ್ಯಕ್ತಿಗಳ ಕಷ್ಟದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಡಾರ್ಕ್ ಕಾಮಿಡಿ ಮೂಲಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಮರ್ಥ್. ಈ ಸಿನಿಮಾದಲ್ಲಿ ದಿಗಂತ್ ಜೊತೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಇಬ್ಬರೂ ನಟಿಯರು ಮಿಂಚಿದ್ದಾರೆ. ಪಂಚರಂಗಿ ಸೂಪರ್ ಹಿಟ್ ಸಿನಿಮಾದ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ದಿಗಂತ್ಗೆ ಜೋಡಿ ಯಾರು ಎನ್ನುವುದು ಕೂಡ ಕುತೂಹಲ ಮೂಡಿಸಿದೆ.
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬ್ಲಿಂಕ್ ಮತ್ತು ಶಾಖಹಾರಿ ಸಿನಿಮಾದ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಇಬ್ಬರು ಒಟ್ಟಿಗೆ ಸೇರಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಶಾಖಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಮತ್ತು ಬ್ಲಿಂಕ್ ನಿರ್ಮಾಪಕ ರವಿಚಂದ್ರ ಅವರು ಸಿನಿಮಾ ನೋಡಿ ತುಂಬಾ ಇಷ್ಟ ಪಟ್ಟು ರಿಲೀಸ್ ಮಾಡಲು ಕೈ ಜೋಡಿಸಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ ನಿರ್ದೇಶಕ ಸಮರ್ಥ್ ಕಡ್ಕೋಳ್ ನಿರ್ದೇಶನದ ಚೊಚ್ಚಲ ಸಿನಿಮಾ. ವಿಭಿನ್ನ ಕಾನ್ಸೆಪ್ಟ್ನ ಸಿನಿಮಾ ಇದಾಗಿದ್ದು ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ನಟ ದಿಗಂತ್ ಯಾವಾಗಲು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಟ ದಿಗಂತ್ ಮತ್ತೆ ಗೆದ್ದೇ ಗೆಲ್ತಾರೆ ಎನ್ನುವ ಬರವಸೆ ಕೂಡ ಮೂಡಿದೆ. ಎಡಗೈಯೇ ಅಪಘಾತಕ್ಕೆ ಕಾರಣ ಹೇಗಿರಲಿದೆ ಎನ್ನುವುದು ಜೂನ್ 13ಕ್ಕೆ ರಿಲೀಸ್ ಆದಮೇಲೆ ಗೊತ್ತಾಗಲಿದೆ.

