ಪ್ರತಿಭಾನ್ವಿತರ ತಂಡದ” ಕರಿಕಾಡ” ಚಿತ್ರದ ಟೀಸರ್ ಬಿಡುಗಡೆ ಮಾಡಿದ ಸಂತೋಷ್ ಆನಂದ್ ರಾಮ್
ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಅನೇಕ ಕನಸು ಕಂಡು ವಿವಿಧ ಕ್ಷೇತ್ರಗಳ ಮಂದಿ ಬಣ್ಣದ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಇದೀಗ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಪ್ರತಿಭಾನ್ವಿತರ ತಂಡ ಆಗಮಿಸಿದೆ. ಅದುವೇ ” ಕರಿಕಾಡ” ಚಿತ್ರದ ಮೂಲಕ.ಅದರಲ್ಲಿ ಕಾಡ ನಟರಾಜ್ ಕೂಡ ಒಬ್ಬರು.

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಚಿತ್ರ ಮೂಡಿ ಬರಲಿದೆ.
‘ಕರಿಕಾಡ’ ಸಂಗೀತಮಯ ಮತ್ತು ಸಾಹಸ ಪ್ರವೃತ್ತಿಯ ಕಥಾಹಂದರ ಹೊಂದಿರುವ ಚಿತ್ರ, ಐಟಿ ವಲಯದಲ್ಲಿ
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡುತ್ತಿರುವ ಕಾಡ ನಟರಾಜ್ ವಾರದ ಐದು ದಿನ ಕೆಲಸ ಮಾಡಿ ಇನ್ನೆರಡು ದಿನ ಸಿನಿಮಾ ಶೂಟಿಂಗ್ ನ ಕನಸಿನ ಗುರಿಯ ಕಡೆ ಧ್ಯಾನ ಮಾಡಿದ್ದಾರೆ
ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಟೀಸರ್ ಬಿಡುಗಡೆ ಹೊಸ ತಂಡಕ್ಕೆ ಶುಭ ಹಾರೈಸಿದ್ದಾರೆ.
ಕರಿಕಾಡ ಚಿತ್ರದ ಸಂಗೀತ ಮೆಚ್ಚಿ ಆಡಿಯೋ ಹಕ್ಕ ಅತ್ಯುತ್ತಮ ಮೊತ್ತ ಕೊಟ್ಟು ಖರೀದಿಸಿದ ಲಹರಿ ವೇಲು ಖರೀದಿ ಮಾಡಿದ್ದು ಆರಂಭದಲ್ಲಿ ಚಿತ್ರತಂಡಕ್ಕೆ ಶುಭ ಸೂಚನೆ ಸಿಕ್ಕಂತಾಗಿದೆ.
ಕಳೆದ ವರ್ಷ ಆಗಸ್ಟ್ 15ರಿಂದ ಚಿತ್ರೀಕರಣ ಆರಂಭಿಸಿ ಕೆಲಸಕ್ಕೆ ರಜೆ ಸಿಕ್ಕಾಗೆಲ್ಲ ಅಭಿನಯ ಮಾಡಿ ಕಳೆದ ವರ್ಷವೇ ಸಿನಿಮಾದ ಮಾತಿನ ಭಾಗ ಮುಗಿಸಿದ್ದಾರೆ ನಟ ಕಾಡ ನಟರಾಜ್ ಚಿತ್ರಕ್ಕೆ ಕಥೆ ಕೂಡ ಬರೆದಿರುವುದು ವಿಶೇಷ.

ನಟ ಕಾಡ ನಟರಾಜ್ ಪತ್ನಿ ದೀಪ್ತಿ ದಾಮೋದರ್ ಗಂಡನ ಕನಸಿನ ಗುರಿಗೆ ದಾರಿ ಬೆನ್ನೆಲುಬಾಗಿ ನಿಂತಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ
ನಿರ್ದೇಶಕ ಗಿಲ್ಲಿ ವೆಂಕಟೇಶ್ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಹುಲಿಬೇಟೆ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್ ಕೂಡ ಮಾಡಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್ ಅವರ ಮಹತ್ವಕಾಂಕ್ಷೆಯ ಸಿನಿಮಾ ಕರಿಕಾಡ. ಚಿತ್ರಕತೆ , ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಚಿತ್ರವನ್ನು ಚಿಕ್ಕಮಗಳೂರು , ಕಳಸ , ಕುದುರೆ ಮುಖ , ಮಂಡ್ಯ , ಚೆನ್ನರಾಯ ಪಟ್ನ ಸೇರಿದಂತೆ ರಾಜ್ಯದ ಅನೇಕ ರಮಣಿ ಸ್ಥಳಗಳಲ್ಲಿ ‘ಕರಿಕಾಡ’ ಚಿತ್ರೀಕರಣವಾಗಿದೆ.

ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ರಾಗ ಸಂಯೋಜನೆ ಇದೆ. ಶಶಾಂಕ್ ಶೇಷಾಗರಿ ರಾಗ ಸಂಯೋಜನೆ ಜೊತೆಗೆ ಹಿನ್ನಲೆ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ. .
ಚಿತ್ರದಲ್ಲಿ ಕಾಡ ನಟರಾಜ್ , ನಿರೀಕ್ಷಾ ಶೆಟ್ಟಿ , ರಿದ್ಧಿ
ಮಂಜು ಸ್ವಾಮಿ , ಯಶ್ ಶೆಟ್ಟಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಬಾಲರಾಜವಾಡಿ , ಮಾಸ್ಟರ್ ಆರ್ಯನ್ ಹಾಗೂ ಮುಂತಾದವರು ನಟಿಸಿದ್ದಾರೆ.


