Colors Kannada's 'Decade Celebration' today and tomorrow

ಇಂದು ಮತ್ತು ನಾಳೆ ‘ಕಲರ್ಸ್ ಕನ್ನಡದ ‘ದಶಕದ ಮಹೋತ್ಸವ’ - CineNewsKannada.com

ಇಂದು ಮತ್ತು ನಾಳೆ ‘ಕಲರ್ಸ್ ಕನ್ನಡದ ‘ದಶಕದ ಮಹೋತ್ಸವ’

‘ಕಲರ್ಸ್ ಕನ್ನಡ’ದ ಕಾರ್ಯಕ್ರಮ ‘ದಶಕದ ಮಹೋತ್ಸವ’ದಲ್ಲಿ ಮನರಂಜನೆ ಮುಗಿಲು ಮುಟ್ಟಿದೆ, ಜೂನ್ 7 ಮತ್ತು 8 ರಂದು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು ರಾತ್ರಿ 10:30 ರ ವರೆಗೆ ಕನ್ನಡದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ.

ಇಪ್ಪತ್ತೈದು ವರ್ಷಗಳ ಹಿಂದೆ ಆರಂಭವಾದ ‘ಈ ಟಿವಿ ಕನ್ನಡ’ ‘ಕಲರ್ಸ್ ಕನ್ನಡ’ವಾಗಿ ಮಾರ್ಪಾಡುಗೊಂಡು ಇಂದಿಗೆ10ನೇ ವರ್ಷದ ಮೈಲಿಗಲ್ಲನ್ನು ಮುಟ್ಟಿದೆ. ಕಳೆದ ಒಂದು ದಶಕದಿಂದ ಈ ವಾಹಿನಿ ತನ್ನ ವಿಭಿನ್ನ ಕತೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ರಂಜಿಸುತ್ತಾ ಬಂದಿದೆ.

ಇಂತಹ ಸಿಹಿ ಗಳಿಗೆಯಲ್ಲಿ ಹಲವು ಕಲಾವಿದರು ಮತ್ತು ಮಹನೀಯರನ್ನು ಸ್ಮರಿಸಿ ಗೌರವಿಸುವ ಮಹೋನ್ನತ ಪರಂಪರೆ ಸಂಭ್ರಮಿಸುವ ಕಾರ್ಯಕ್ರಮವೇ ‘ದಶಕದ ಮಹೋತ್ಸವ’. ‘ಅದೇ ಬೇರು, ಹೊಸ ಚಿಗುರು’ ಹೆಸರಿನಲ್ಲಿ ಹೊಸ ಆರಂಭಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಆಳವಾಗಿ ಬೇರೂರಿರುವ ಪರಂಪರೆಯನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ.

ಈ ವೈಭವದ ಕಾರ್ಯಕ್ರಮ ಚಾನೆಲ್‍ನ ಪಯಣಕ್ಕೆ ಹೃತ್ಪೂರ್ವಕ ಕಾಣಿಕೆಯಾಗಿದೆ. ಈ ಆಚರಣೆಯು ಸವಿನೆನಪು ಮತ್ತು ಉತ್ಸಾಹದ ಸುಂದರವಾದ ಮಿಶ್ರಣವಾಗಿದೆ. ಜನಪ್ರಿಯ ಧಾರಾವಾಹಿ ಮತ್ತು ಸೆಲೆಬ್ರಿಟಿ ಕಲಾವಿದರ ಬೆರಗುಗೊಳಿಸುವ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಚಾನೆಲ್‍ನ ಮೆರುಗನ್ನು ಈ ದಶಕದಲ್ಲಿ ಹೆಚ್ಚಿಸಿದ ಹಳೆಯ ಕಲಾವಿದರು ಭರಪೂರ ಮನರಂಜನೆಯನ್ನು ನೀಡಲಿರುವುದು ವಿಶೇಷ.

ಹಿರಿಯ ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿದೆ. ಸಂಭ್ರಮವನ್ನು ‘ಶಿವಣ್ಣ 40’ ಎಂದು ಕಲರ್ಸ್ ಕನ್ನಡ ವಾಹಿನಿ ಆಚರಿಸುತ್ತಿದ್ದು ಅವರನ್ನು ಆದರದಿಂದ ಗೌರವಿಸಲಿದೆ. ಈ ಮಹೋನ್ನತ ಕಾರ್ಯಕ್ರಮದಲ್ಲಿ ಶಿವಣ್ಣನವರಿಗೆ ಅವರ ಕುಟುಂಬ, ಸ್ನೇಹಿತರು ಮತ್ತು ಚಿತ್ರರಂಗದ ಮಹನೀಯರಿಂದ ಹಲವಾರು ಅಚ್ಚರಿಗಳಿವೆ.

ಈ ಸಂಭ್ರಮದಲ್ಲಿ ಚಾನೆಲ್‍ನ ಹೊಸ ಕಾರ್ಯಕ್ರಮಗಳ ಘೋಷಣೆಯು ಆಗಲಿದೆ. 10 ವರ್ಷಗಳ ವಾಹಿನಿಯ ಪಯಣದ ಮೈಲುಗಲ್ಲುಗಳನ್ನು ಅತ್ಯಂತ ಎಚ್ಚರಿಕೆಯಿಂದ ಕಾರ್ಯಕ್ರಮವನ್ನು ಹೆಣೆಯಲಾಗಿದ್ದು, ‘ದಶಕದ ಮಹೋತ್ಸವ’ ಕೌಟುಂಬಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದ ಕಲರ್ಸ್ ಕನ್ನಡದ ವಿಶೇಷ ಸಂಭ್ರಮದ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಗೆಲುವಿನ ಹಾದಿಯಲ್ಲಿ ಸಾಗಿ ಬರುತ್ತಿರುವ ಕಲರ್ಸ್ ಕನ್ನಡ ಈ ದಶಕದ ಹಬ್ಬದಲ್ಲಿ ಅದೇ ಬೇರಿನ ಜೊತೆ ಹೊಸ ಚಿಗುರನ್ನು ಆಚರಿಸಲು ಸಂಭ್ರಮಿಸುತ್ತಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಬ್ಲಾಕ್ ಕೋಬ್ರಾ ವಿಜಯ ಕುಮಾರ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ಅನು ಪ್ರಭಾಕರ್, ಶ್ರುತಿ, ತಾರಾ ಅನೂರಾಧಾ, ಸೃಜನ್ ಲೋಕೇಶ್, ಟಿ ಎನ್ ಸೀತಾರಾಮ್, ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು ಮತ್ತು ಕಿರುತೆರೆಯ ಜನಪ್ರಿಯ ಕಲಾವಿದರಾದ ಶ್ವೇತಾ ಪ್ರಸಾದ್, ರಂಜನಿ ರಾಘವನ್, ಧನುಷ್, ಸುಷ್ಮಾ ನಾಣಯ್ಯ ಮುಂತಾದವರು ‘ದಶಕದ ಮಹೋತ್ಸವ’ದ ಸಂಭ್ರಮ ಹೆಚ್ಚಿಸಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin