Muhurat for Upendra's new film "Bhargava"

ಉಪೇಂದ್ರ ನಟನೆಯ ಹೊಸ ಚಿತ್ರ “ ಭಾರ್ಗವ”ಕ್ಕೆ ಮುಹೂರ್ತ - CineNewsKannada.com

ಉಪೇಂದ್ರ ನಟನೆಯ ಹೊಸ ಚಿತ್ರ “ ಭಾರ್ಗವ”ಕ್ಕೆ ಮುಹೂರ್ತ

ಕನ್ನಡ ಚಿತ್ರರಂಗಕ್ಕೆ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ಎಸ್ ನಾಗಣ್ಣ ಮತ್ತು ನಿರ್ಮಾಪಕ ಸೂರಪ್ಪ ಬಾಬು ಹಾಗು ರಿಯಲ್ ಸ್ಟಾರ್ ಉಪೇಂದ್ರ ಜೊತೆಯಾಗಿದ್ದಾರೆ. ಅದುವೇ “ಭಾರ್ಗವ” ಚಿತ್ರದ ಮೂಲಕ.

ಎಸ್ ನಾಗಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಭಾರ್ಗವ” ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲಸೂರಿನ ಸೋಮೇಶ್ವರ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಅಂದಾನಪ್ಪ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ

ನಟ ಉಪೇಂದ್ರ ಅವರ ಜೊತೆ ಕನ್ನಡದ ಪ್ರತಿಭಾನ್ವಿತ ಹಾಗು ಭರವಸೆಯ ನಾಯಕಿ ಅಂಕಿತ ಅಮರ್ ನಟಿಸುತ್ತಿದ್ದಾರೆ. ಇದು ಚಿತ್ರದ ಬಗೆಗಿನ ಕುತೂಹಲ ಮತ್ತು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಜೂನ್ 23ರಿಂದ ಭಾರ್ಗವ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ ಜೊತೆಗೆ ಚಿತ್ರದಲ್ಲಿ ಯಾರೆಲ್ಲಾ ಕಲಾವಿದರು ಇದ್ದಾರೆ ಎನ್ನುವುದನ್ನು ಹಂತ ಹಂತವಾಗಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ನಟ ಉಪೇಂದ್ರ ಅಭಿನಯದಲ್ಲಿ ಇತ್ತೀಚೆಗೆ ತೆರೆಗೆ ಬಂದಿದ್ದ “ಯುಐ” ಚಿತ್ರ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಭರವಸೆ ಮೂಡಿಸಿತ್ತು. ಅದೇ ರೀತಿ ನಟಿ ಅಂಕಿತಾ ಅಮರ್ ನಟನೆಯ “ ಇಬ್ಬನಿ ತಬ್ಬಿಬ ಇಳೆಯಲಿ” ಚಿತ್ರದ ಮನೋಜ್ಞ ನಟನೆಗಾಗಿ ಮೆಚ್ಚುಗೆ ಪಡೆದಿದ್ದರು.ಲ ಇದರ ಬೆನ್ನಲ್ಲೇ ಉಪೇಂದ್ರ ಅವರ ಜೊತೆ ನಟಿಸುವ ಅವಕಾಶ ಪಡೆಸಿದ್ಧಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin