“ಗುರಿ” ಚಿತ್ರದ ಟೀಸರ್,ಹಾಡುಗಳ ಬಿಡುಗಡೆ: ಹೆಚ್ಚಿದ ಕುತೂಹಲ
80ರ ದಶಕದಲ್ಲಿ ಡಾ.ರಾಜ್‍ಕುಮಾರ್ ಅಭಿನಯಸಿದ್ದ “ಗುರಿ” ಚಿತ್ರ ಸೂಪರ್ ಹಿಟ್ ಆಗಿತ್ತು. 4 ದಶಕದ ತರುವಾಯ ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಸಿದ್ದಗೊಂಡಿದೆ. ‘ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಇಂಗ್ಲೀಷ್‍ನಲ್ಲಿ ಹೇಳಿಕೊಂಡಿದೆ.

ವಿಷ್ಣುದುರ್ಗಾ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ಸೆಲ್ವಂ ಮಾದಪ್ಪನ್ ಸಿನಿಮಾಕ್ಕೆ ಕಥೆ,ಚಿತ್ರಕತೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ.
ಲಹರಿವೇಲು ಹೊಸದಾಗಿ ಸ್ಥಾಪನೆ ಮಾಡಿರುವ ‘ಎಂ ಆರ್ ಟಿ ಮ್ಯೂಸಿಕ್’ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಪ್ರಚಾರದ ಮೊದಲ ಹಂತವಾಗಿ ಪಳನಿ.ಡಿ.ಸೇನಾಪತಿ ಸಂಗೀತ ಸಂಂಯೋಜನೆಯ ಎರಡು ಹಾಡುಗಳು ಹಾಗೂ ಟೀಸರ್ ಅನಾವರಣವಾಗಿದ್ದು ಕುತೂಹಲ ಕೆರಳಿಸಿದೆ
ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಚಿಣ್ಣರುಗಳಾದ ಮಹಾನಿಧಿ, ಜೀವಿತ್‍ಭೂಷಣ್ ಉಳಿದಂತೆ ಅಚ್ಯುತಕುಮಾರ್, ಜಯಶ್ರೀ, ಉಗ್ರಂಮಂಜು, ಸಂದೀಪ್‍ಮಲಾನಿ, ಮನೋಹರ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ನಿರ್ದೇಶಕ ಸೆಲ್ವಂ ಮಾದಪ್ಪನ್ ಮಾತನಡಿ ಸಿನಿಮಾ ನೈಜ ಘಟನೆ ಆಧರಿಸಿದೆ. ಒಮ್ಮೆ ಕೋಲಾರದ ತೇರಳ್ಳಿ ಬೆಟ್ಟದ ಕಡೆ ಹೋಗಿದ್ದಾಗ, ಅಲ್ಲಿ ಸರ್ಕಾರಿ ಶಾಲೆ ಮುಚ್ಚಲಾಗಿತ್ತು. ಮಕ್ಕಳು ಶಿಕ್ಷಕರೊಂದಿಗೆ ಕೆರೆಯಲ್ಲಿ ಆಟವಾಡುತ್ತಿದ್ದರು. ಸ್ಥಳೀಯರೊಂದಿಗೆ ವಿಚಾರಣೆ ನಡೆಸಿದಾಗ, ಒಂದಷ್ಟು ಅಂಶಗಳು ಸಿಕ್ಕಿತ್ತು. ಅದನ್ನೇ ಚಿತ್ರಕತೆಗೆ ಬಳಸಲಾಗಿದೆ. ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂದವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷಗಳು. ಒಂದು ಹಂತದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪುತ್ತದೆ. ವಿಷಯ ತಿಳಿದ 3ನೇ ತರಗತಿಯ ಇಬ್ಬರು ಬುದ್ದಿವಂತ, ಧೈರ್ಯಶಾಲಿ ವಿದ್ಯಾರ್ಥಿಗಳು ಇದರ ವಿರುದ್ದ ಹೋರಾಟ ನಡೆಸಿ, ಹೇಗೆ ಸಪಲರಾಗುತ್ತಾರೆ ಎಂಬುದು ಒಂದು ಏಳೆಯ ಸಾರಾಂಶ. ಹವಮಾನ, ಮಕ್ಕಳಿಂದ ಸಿನಿಮಾ ಮುಗಿಯುವುದು ತಡವಾಯಿತು. ನಮ್ಮ ಕೆಲಸ ಮುಗಿದಿದೆ ಎಂದು ಕೇಳಿಕೊಂಡರು

ಲಹರಿವೇಲು ಮಾತನಾಡಿ ಚಿತ್ರದ ಶೀರ್ಷಿಕೆ ನೋಡಿದರೆ ಅಣ್ಣಾವ್ರ ಸಿನಿಮಾದ ಹೆಸರು ಕಣ್ಣ ಮುಂದೆ ಬರುತ್ತದೆ. ಸೆಲ್ವಂ ಛಾಯಾಗ್ರಾಹಕರಾಗಿ ಹದಿನೈದು ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರತಿ ದೃಶ್ಯದಲ್ಲಿ ಅವರ ಚಾಕಚಕ್ಯತೆ ಕಂಡು ಬರುತ್ತದೆ. ಖಂಡಿತ ಚಿತ್ರ ಯಶಸ್ಸು ಕಾಣುವುದಲ್ಲದೆ ಪ್ರಶಸ್ತಿ ಬರುತ್ತದೆ. ಪಳನಿ ಸೇನಾಪತಿ ಗೀತೆಗಳು ಚೆನ್ನಾಗಿದೆ. ಅವರಿಗೆ ಸರಸ್ವತಿ ಒಲಿದು, ಲಕ್ಷೀ ಹತ್ತಿರ ಬರುತ್ತಿಲ್ಲ. ಮುಂದೊಂದು ದಿನ ಎ.ಆರ್.ರೆಹಮಾನ್‍ರಂತೆ ಪ್ರಸಿದ್ದಿಯಾಗುತ್ತಾರೆಂದು ಹೇಳಿದರು.
ತಾರಾಗಣದಲ್ಲಿ ಟಿ.ಎಸ್.ನಾಗಾಭರಣ, ಅವಿನಾಶ್, ಪವನ್‍ಕುಮಾರ್, ಚಂದ್ರಪ್ರಭಾ ಮುಂತಾದವರು ನಟಿಸಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್, ಸಾಹಿತ್ಯ ವಿ.ಮನೋಹರ್-ಮಧುಸೂದನ್, ನೃತ್ಯ ಅರವಿಂದ್, ಸಾಹಸ ಚಿನ್ನಯ್ಯ, ಕಲೆ ಮಂಜು ಅವರದಾಗಿದೆ. ಬೆಂಗಳೂರು, ಕೋಲಾರ, ತೇರಳ್ಳಿ ಬೆಟ್ಟ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.


