Muhurat for the film “Chhoo Bana”, which revolves around hatred and enmity

ದ್ವೇಷ, ವೈಷಮ್ಯದ ಸುತ್ತ ಸಾಗುವ “ಛೂ ಬಾಣ” ಚಿತ್ರಕ್ಕೆ ಮುಹೂರ್ತ - CineNewsKannada.com

ದ್ವೇಷ, ವೈಷಮ್ಯದ ಸುತ್ತ ಸಾಗುವ “ಛೂ ಬಾಣ” ಚಿತ್ರಕ್ಕೆ ಮುಹೂರ್ತ

ದ್ವೇಷ, ವೈಶಮ್ಯದ ಸುತ್ತ ಸಾಗುವ ಕತೆ ಒಳಗೊಂಡಿರುವ “ಛೂ ಬಾಣ: ಚಿತ್ರಕ್ಕೆ ಮಹೂರ್ತ ನೆರವೇರಿದೆ. ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ ಕ್ಯಾಮಾರ ಚಾಲನೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಎಸ್.ಕೆ.ಭಾಷಾ ಫಿಲಂಸ್ ಅಡಿಯಲ್ಲಿ ವಿಜಯವಾಡದ ಇಂಜಿನಿಯರ್ ಎಸ್.ಕೆ.ಫಿರೋಜ್‍ಭಾಷ ಬಂಡವಾಳ ಹೂಡುವ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಎಸ್.ಆರ್.ಪ್ರಮೋದ್ ಕಥೆ, ಸಾಹಿತ್ಯ ರಚಿಸಿ ಒಂಬತ್ತನೇ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕ ಎಸ್.ಆರ್ ಪ್ರಮೋದ್ ಮಾತನಾಡಿ ಸಮಾಜದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮನಸ್ತಾಪ ಬಂದು, ಒಂದು ಹಂತದಲ್ಲಿ ಕೊಲೆಯೊಂದಿಗೆ ಮುಕ್ತಾಯವಾಗುತ್ತದೆ. ಅದರಂತೆ ಚಿತ್ರದ ಕಥೆಯು ಹಳ್ಳಿಯಲ್ಲಿ ನಡೆಯುತ್ತದೆ. ಅಲ್ಲಿನ ದ್ವೇಷದ ಹಿನ್ನಲೆ, ಹಳೆಯ ವೈಷಮ್ಯದಿಂದ ಅಪರಾಧಗಳು ನಡೆಯುತ್ತದೆ. ಊರಿನ ಗೌಡರ ಮನೆಗಳಲ್ಲಿ ಮರ್ಡರ್‍ಗಳು ಆಗುತ್ತಿರುತ್ತವೆ. ಅವುಗಳನ್ನು ಮಾಡೋರು ಯಾರು ಯಾವ ಕಾರಣಕ್ಕೆ ಇದೆಲ್ಲಾವನ್ನು ಗೌಡರ ಮಗ ಅಪ್ಪನ ಸಾವಿನ ನಂತರ ಕೊಲೆಗಾರರನ್ನು ಭೇದಿಸಲು ಆರಂಭಿಸುತ್ತಾನೆ. ಈ ಹಾದಿಯಲ್ಲಿ ಆತನಿಗೆ ಎದುರಾಗುವ ಸವಾಲುಗಳು ಏನು ಅದೆಲ್ಲಾವನ್ನು ಭೇದಿಸಿ ಹೇಗೆ ಗೆಲುವು ಸಾಧಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ ಎಂದರು

ಸನ್ನಿವೇಶಕ್ಕೆ ತಕ್ಕಂತೆ ಮೈಸೂರನ ಪುಟ್ಟ ಹಳ್ಳಿಯಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಲಾಗಿದೆ. ಎರಡು ಹಾಡುಗಳು ಹಾಗೂ ಸಾಹಸಗಳು ಇರಲಿದೆ. ಇಬ್ಬರು ಹಿರಿಯ ಪೆÇೀಷಕ ಕಲಾವಿದರು ನಟಿಸಲಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಮಾಹಿತಿ ಹಂಚಿಕೊಂಡರು

ರೇಖಾರಮೇಶ್ ನಾಯಕಿ. ಉಳಿದಂತೆ ನಾಯಕನ ತಂಗಿಯಾಗಿ ತನಿಖಾನಾರಾಯಣ್. ಅಯುರ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಕೆವಿನ್.ಎಂ, ಛಾಯಾಗ್ರಹಣ ಮೈಸೂರು ಸೋಮು, ಸಂಕಲನ ಅಯುರ್ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin