ತೆಲುಗಿನ ಹಿಟ್-3 ಚಿತ್ರದ ಮೂಲಕ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಗಾಯನ ಆರಂಭ
ಕಿಚ್ಚ ಸುದೀಪ್ ಮತ್ತು ತೆಲುಗಿನ ನಟ ನಾನಿ ಅವರ ಜೊತೆಗಿನ ಒಡನಾಟ, ಉತ್ತಮ ಸಂಬಂಧ ಅವರ ಸುತ್ತ ಮುತ್ತಲ ಮಂದಿಗೆ ಗೊತ್ತಿರುವ ಸಂಗತಿ, ಇದೀಗ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅವರು ನಾನಿ ನಟನೆಯ ಹಿಟ್-3 ತೆಲುಗು ಚಿತ್ರದ ಮೂಲಕ ತೆಲುಗಿನಲ್ಲಿ ಗಾಯನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು ಅಪ್ಪನ ರೀತಿ ಬಹುಭಾಷೆಯಲ್ಲಿ ಸದ್ದು ಮಾಡುವ ಭರವಸೆ ಮೂಡಿಸಿದ್ದಾರೆ.

ಸುದೀಪ್ ನಟನೆಯ “ಮ್ಯಾಕ್ಸ್” ಚಿತ್ರದಲ್ಲಿ ಹಾಡುವ ಮೂಲಕ ಕನ್ನಡದ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಸಾನ್ವಿ ಇದೀಗ ತೆಲುಗು ಚಿತ್ರದಲ್ಲಿಯೂ ಹಾಡುವ ಮೂಲಕ ಅಲ್ಲಿಯೂ ಹೊಸ ಭರವಸೆ ಮೂಡಿಸಲು ಸಜ್ಜಾಗಿದ್ದಾರೆ.
ತೆಲುಗು ಸೂಪರ್‍ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಹಿಟ್ 3 ಇದೇ ಶುಕ್ರವಾರದಂದು ಬಿಡುಡಗೆಯಾಗುತ್ತಿದೆ. ಚಿತ್ರ ಕನ್ನಡದಲ್ಲಿಯೂ ಡಬ್ ಆಗುತ್ತಿದೆ. ಹೀಗಾಗಿ ಕುತೂಹಲ ಮನೆ ಮಾಡಿದೆ.

ಸಾನ್ವಿ ಗಾಯನಕ್ಕೆ ನಟ ನಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿತ್ರರಂಗದಲ್ಲಿ ಸಾನ್ವಿ ಸುದೀಪ್ ತಮ್ಮದೇ ಆದ ಹಾದಿ ಕಂಡುಕೊಳ್ಳಲಿದ್ದಾರೆ. ಅವರ ಪವರ್ ಫುಲ್ ಧ್ವನಿ ಮೋಡಿ ಮಾಡಲಿದೆ ಎಂದು ಹೇಳಿದ್ದಾರೆ
ಇದಕ್ಕೂ ಮೊದಲು ಸಾನ್ವಿ ಸುದೀಪ್, “ಜಿಮ್ಮಿ” ಚಿತ್ರದ ಟೀಸರ್‍ನಲ್ಲಿ ಹಾಡುವ ಮೂಲಕ ತನ್ನ ಕೆಲಸಕ್ಕಾಗಿ ಪ್ರಶಂಸೆ ಗಳಿಸಿದ್ದರು, ಅಲ್ಲಿ ಅವರು ಇಂಗ್ಲೀಷ್ ಸಾಹಿತ್ಯಕ್ಕೆ ಧ್ವನಿತಾಗಿದ್ದರು, ಸಾನ್ವಿ ಅವರ ಪ್ರಯತ್ನಕ್ಕೆ ಮೆಚ್ಚುಗೆ ಮಹಾಪೂರ ವ್ಯಕ್ತವಾಗಿತ್ತು
ಸಾನ್ವಿ ಸುದೀಪ್, ಹಿಟ್-3 ಚಿತ್ರದ ಮೂಲಕ ತೆಲುಗಿನಲ್ಲಿ ಗಾಯನ ಆರಂಭಿಸಿರುವುದು ಹೆಮ್ಮೆಯ ಸಂಗತಿ ಎಂದು ಖುಷಿ ಹಂಚಿಕೊಂಡಿದ್ದಾರೆ
ಸಾನ್ವಿಯ ಹೈ-ಎನರ್ಜಿಯ ಹಾಡುಗಾರಿಕೆ ಮತ್ತು ನಾನಿ ಮತ್ತು ಶ್ರೀನಿಧಿ ಶೆಟ್ಟಿಯವರ ಅದ್ಭುತ ಅಭಿನಯದೊಂದಿಗೆ, ಸೈಲೇಶ್ ಕೋಲನು ನಿರ್ದೇಶನದ ಹಿಟ್ 3, ಆಕರ್ಷಕ ಮತ್ತು ರೋಮಾಂಚಕ ಸಿನಿಮೀಯ ಅನುಭವ ನೀಡುವ ಭರವಸೆ ಹುಟ್ಟುಹಾಕಿದೆ


