ಕೋಮಲ್- ತನಿಷಾ ಕಾಂಬಿನೇಷನ್‍ನ “ಕೋಣ” ಅಕ್ಟೋಬರ್ 31ಕ್ಕೆ ಬಿಡುಗಡೆ

ಕೋಮಲ್- ತನಿಷಾ ಕಾಂಬಿನೇಷನ್‍ನ “ಕೋಣ” ಅಕ್ಟೋಬರ್ 31ಕ್ಕೆ ಬಿಡುಗಡೆ

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ತನಿಷಾ ಕುಪ್ಪಂಡ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ ಅದುವೇ “ಕೋಣ” ಚಿತ್ರದ ಮೂಲಕ. ಜೊತೆಗೆ ಸಿನಿಮಾ ಮೂಲಕ ನಟ ಕೋಮಲ್ ಕಮಾಲ್ ಮಾಡಲು ಸಜ್ಜಾಗಿದ್ದಾರೆ

ಕೋಣ ಚಿತ್ರವನ್ನು ತನಿಶಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ .ಎನ್ ನಿರ್ಮಾಣ ಮಾಡಿದ್ದಾರೆ. ಇದೇ ತಿಂಗಳ 31ರಂದು ಕೋಣ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ,

ಈ ವೇಳೆ ನಟ ಕೋಮಲ್ ಮಾತನಾಡಿ ಕೋಣ ಚಿತ್ರ ಬಿಡುಗಡೆ ಮಾಡುವ ಟೈಮ್ ಬಂದಿದೆ. ಕೋಣ ಚಿಕ್ಕ ವಯಸ್ಸಿನಿಂದ ಕನೆಕ್ಟೆಡ್. ಸ್ಕೂಲ್ ನಲ್ಲಿ ಓದಬೇಕಾದರೆ ಟೀಚರ್ ಕೋಣ ಕೋಣ ಎನ್ನುತ್ತಿದ್ದರು. ನನಗೆ ಆಗ ಕೋಪ ಬರುತ್ತಿತ್ತು. ಈಗ ಕೋಣ ಪಿಕ್ಚರ್ಸ್ ಮಾಡುತ್ತಿರುವುದು ಖುಷಿಯಾಗುತ್ತದೆ. ಇಡೀ ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನನಗೆ ತೃಪ್ತಿ ಕೊಟ್ಟಿದೆ ಎಂದರು.

ನಟಿ ತನಿಶಾ ಕುಪ್ಪಂಡ ಮಾತನಾಡಿ, ಕೋಣ ಸಿನಿಮಾದಲ್ಲಿ ಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇವೆ. ಅಕ್ಟೋಬರ್ 31ರಂದು ಚಿತ್ರ ತೆರೆಗೆ ಬರ್ತಿದೆ. ಕೋಮಲ್ ಅವರು ನಾರಾಯಣ ಎಂಬ ಪಾತ್ರ ಮಾಡಿದ್ದಾರೆ. ಅವರ ಪತ್ನಿಯಾಗಿ ನಟಿಸಿದ್ದೇನೆ. ಇಷ್ಟು ದಿನ ನೀವುಂ ನೋಡದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಈ ಪಾತ್ರ ನೋಡಿ ಇವರು ಈ ರೀತಿ ನಟಿಸಬಹುದಾ ಎನ್ನಬಹುದು ಎಂದರು

ಕೋಮಲ್ ಕುಮಾರ್ ನಾಯಕನಾಗಿ, ತನಿಶಾ ಕುಪ್ಪಂಡ ನಾಯಕಿಯಾಗಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಡಾರ್ಕ್ ಕಾಮೆಡಿ ಶೈಲಿಯಲ್ಲಿ `ಕೋಣ’ ಸಿನಿಮಾ ಮೂಡಿಬರಲಿದೆ. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್.ಎನ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ.

ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವೀನಸ್ ನಾಗರಾಜ್ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು,ಉಮೇಶ್ ಆರ್. ಬಿ. ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್ ಕುಮಾರ್, ಮುರುಗ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್ ಸಂಭಾಷಣೆ ಕೋಣ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin