ಬಗೆಹರಿದ “ಲವ್ ಮಾಕ್ಟೇಲ್ – 3” ಕಥೆ ವಿವಾದ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲವ್ ಮಾಕ್ಟೇಲ್ – 3 ಕಥೆ ವಿವಾದ ಬಗೆಹರಿದಿದೆ. ಈ ಮೂಲಕ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಮತ್ತು ನಿರ್ಮಾಪಕ ಗುರು ದೇಶಪಾಂಡೆ, ಬರಹಗಾರ ರಾಘವೇಂದ್ರ ನಾಯ್ಕ್ ಆರೋಪ ಪ್ರತ್ಯಾರೋಪ ಬಗೆಹರಿದಿದೆ.
ಸಭೆಯಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ನಿರ್ಮಾಪಕರ ಸಂಘ, ನಿರ್ದೆಶಕರ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಹಾಗೂ ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ. , ಬರಹಗಾರ ರಾಘವೇಂದ್ರ ಎಂ ನಾಯಕ್ ಹಾಗೂ ಇನ್ನಿತರರು ಹಾಜರಿದ್ದರು.

ಕ್ಷಮೆ ಕೋರಿದ ಡಾರ್ಲಿಂಗ್ ಕೃಷ್ಣ
ನಿರ್ಮಾಪಕ ಹಾಗು ನಟ ಡಾರ್ಲಿಂಗ್ ಕೃಷ್ಣ ಅವರು ಗುರು ದೇಶಪಾಂಡೆ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಕ್ಕೆ ಗುರುದೇಶಪಾಂಡೆ ಅವರ ಮನಸ್ಸಿಗೆ ಬೇಸರವಾಗಿರುವುದರಿಂದ ಕ್ಷಮೆ ಯಾಚಿಸಿದರು.
ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ ಟೇಲ್ 3’ ಚಿತ್ರಕಥೆಯೇ ಬೇರೆ. ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಆದ್ದರಿಂದ ಇವರಿಬ್ಬರ ಕಥೆಯೂ ಬೇರೆಬೇರೆಯಾಗಿದೆ ಎಂದು ಹೇಳುವ ಮೂಲಕ ವಾಣಿಜ್ಯ ಮಂಡಳಿಯ ಮೂಲಕ ಸೌಹಾರ್ದವಾಗಿ ಸಮಸ್ಯೆಯನ್ನು ಬಗೆ ಹರಿಸಿದೆ.

