“ಮಾರಿಗೋಲ್ಡ್” ಚಿತ್ರದ ಲಿರಿಕಲ್ ಹಾಡು ಶೀಘ್ರದಲ್ಲಿ ಬಿಡುಗಡೆ
ಕೆಲವು ಚಿತ್ರಗಳು ಶೀರ್ಷಿಕೆಯಿಂದ ಕುತೂಹಲ ಹುಟ್ಟಿಸಿದರೆ, ಮತ್ತೆ ಕೆಲ ಚಿತ್ರಗಳು ಸ್ಟಾರ್ ಕಾಸ್ಟ್ ನಿಂದ ನಿರೀಕ್ಷೆ ಹೆಚ್ಚಿಸುತ್ತವೆ. ಟೈಟಲ್ ಹಾಗೂ ಸ್ಟಾರ್ ಕಾಸ್ಟ್ ಎರಡರಿಂದಲೂ ಹೈಪ್ ಕ್ರಿಯೇಟ್ ಮಾಡಿರೂ ಚಿತ್ರ ಎಂದರೆ ಅದು ಮಾರಿಗೋಲ್ಡ್.
ಆರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ ರಘುವರ್ದನ್ ನಿರ್ಮಾಣದ, ರಾಘವೇಂದ್ರ ಎಂ. ನಾಯ್ಕ ನಿರ್ದೇಶನದಲ್ಲಿ ಮೂಡಿಬಂದಿರುವ ” ಮಾರಿ ಗೋಲ್ಡ್ ” ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಪ್ರಮುಖ ಪಾತ್ರದಲ್ಲಿದ್ದಾರೆ. ಈವರೆಗೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ನಟ ದಿಗಂತ್ ಇಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಸದ್ಯದಲ್ಲೇ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಘುವರ್ಧನ್ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದಮೇಲೆ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿರುವುದರಿಂದ ನಾಯಕಿ ಸಂಗೀತಾ ಶೃಂಗೇರಿ ಅವರಿಗೂ ಸಹ ಇದು ಸ್ಪೆಷಲ್ ಸಿನಿಮಾ ಆಗಿದೆ.
ಗುಣವಂತ ಖ್ಯಾತಿಯ ರಘುವರ್ಧನ್ ಅವರು ಈ ಹಿಂದೆ ಮಿಸ್ಟರ್ ಎಲ್ ಎಲ್ ಬಿ ಚಿತ್ರ ನಿರ್ದೇಶಿಸಿದ್ದರು. ಅದಾದ ನಂತರ ಬಹು ದೊಡ್ಡ ಮಟ್ಟದಲ್ಲಿ ಓ ಚಿತ್ರವನ್ನು ನಿರ್ಮಿಸಿದ್ದಾರೆ. ರಾಘವೇಂದ್ರ ನಾಯ್ಕ್ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಚಿತ್ರ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತಾ ಅದ್ಭುತ ಪರ್ಫಾರ್ಮನ್ಸ್ ನೀಡಿದ್ದಾರೆ ಎಂದು ಹೇಳಿದರು.
ಗೋಲ್ಡ್ ಬಿಸ್ಕಟ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಇದಾಗಿದ್ದು, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಅತಿಹೆಚ್ಚು ವೀಕ್ಷಣೆಯಾಗುವ ಮೂಲಕ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿರುವ ಕುತೂಹಲ ತೋರಿಸಿದೆ. ಪರಿಶುದ್ದ ಮನರಂಜನೆಗೆ ಒತ್ತು ನೀಡಿ ಮಾಡಿರೋ ಚಿತ್ರವಿದು.
ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ರಘು ನಿಡವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಮ್ಯೂಸಿಕ್ ಈ ಚಿತ್ರದ ಹೈಲೈಟ್ ಗಳಲ್ಲೊಂದು. ಇದೊಂದು ಥ್ರಿಲ್ಲರ್ ಹಾಗೂ ಆಕ್ಷನ್ ಚಿತ್ರ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡುಗಳನ್ನು ರಚಿಸಿದ್ದಾರೆ.
ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಲ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಅಲ್ಲದೆ ಭಜರಂಗ ಶೆಟ್ಟಿ, ಕಾಕ್ರೋಚ್ ಸುಧಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.