“ಕೊರಗಜ್ಜ” ಸಿನಿಮಾದ ಶ್ರೇಯ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ
ಇತ್ತೀಚೆಗಷ್ಟೇ “ಕೊರಗಜ್ಜ” ಚಿತ್ರದ ಗುಳಿಗಾ…ಗುಳಿಗಾ…ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು “ಶ್ರೀಮಂತ ಸಾಹಿತ್ಯದ” ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ

ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡ ಮೊದಲು ಬಿಡುಗಡೆಗೊಳಿಸಿದೆ.
ಇಲ್ಲಿದೆ ಈ ಅಪರೂಪದ ಸಾಹಿತ್ಯ…
(ಶ್ರೇಯ ಘೋಷಲ್)
ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !
(ಅರ್ಮಾನ್ ಮಲಿಕ್):
ಕೇಳಿದಂತಾ….
ಜೋಡಿಯಿಂದಾ…..
ಮುಗ್ಧ ವಿರಹ ಹಾಡೂ….!!
ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !
( ಶ್ರೇಯ ಘೋಷಲ್ )
ಮೂಗುದಾಣ ಹಾಕಲೇನು ಪ್ರೀತಿ…..
ಸಾಕು ಗಿಣಿಯೇ..
ಮೂರು ದಾರ ಕಟ್ಟಿ ನಾನು ಬಂಧಿ….
ಸಾಕು ಪ್ರಿಯನೇ…..!
(ಅರ್ಮಾನ್ ಮಲಿಕ್):
ಕಾಡಿಬಂದ ನಿನ್ನ ನೆನಪು….
ಕಾಡಿನಲ್ಲೆ ಸೆಳೆಯಿತೂ…..!
( ಶ್ರೇಯ ಘೋಷಲ್)
ಹೇಳದಂತ ನನ್ನ ಮಾತು….
ಮಾಧುರ್ಯ ತುಂಬಿದಿಂಚರಾ…..!!
ದಾಟಿ ಬಂದ ಮೌನ ಕಲಹ….
ಧಾಟಿ ಯಾಯ್ತು ಕಾವ್ಯಕೇ…..!
(ಅರ್ಮಾನ್ ಮಲಿಕ್):
ತಾಳದಂತ ನನ್ನ ಪುಳಕ….
ಮಾರ್ಧನಿಸಿ ನಿಶಾಚರಾ….!!
( ಶ್ರೇಯ ಘೋಷಲ್ )
ಮೂಗು ದಾಣ..
(ಅರ್ಮಾನ್ ಮಲಿಕ್):
ಮೌನ ಬೇಲಿ ಹಾರಿಬಂದಾ
ಮೋಹದಲ್ಲಿ ಸದ್ದೇ…!
( ಶ್ರೇಯ ಘೋಷಲ್)
ಮೌನ ಬೇಲಿ ಹಾರಿಬಂದಾ
ಮೋಹದಲ್ಲಿ ಸದ್ದೇ…!
(ಕೋರಸ್)
ತಾರೆ ತಂತೀಗ ತಂತೀ…
ತಾಳ ಮೇಳಾ…ತಂಪೂ ನಾದಾ…
ಬಾರೆ ಬಂತೀಗ ಬಂತೀ…
ಢಾಳ ಡೋಲೀ…
ಡೌಲು ಡೋಲೂ….
ಸೇರೆ ಸೇವಂತಿ ಸೋನೇ…ಮಳೆಯಲ್ಲೀ…
( ಶ್ರೇಯ ಘೋಷಲ್ )
ಮೂಗು ದಾಣ…..
(ಅರ್ಮಾನ್ ಮಲಿಕ್):
ಲಜ್ಜೆ ಸದ್ದು ಕಾನನಕ್ಕೂ….
ಮತ್ತು ತಂತು ತುಸುನಕ್ಕೂ……!
ಕತ್ತಲನ್ನು ಹೊದ್ದು ಮಲಗಿ….
ಕಾಡು ಕೂಡ ಕನಲಿತೂ…..!!
( ಶ್ರೇಯ ಘೋಷಲ್ )
ಹೆಜ್ಜೆ ಕದ್ದ ಕಾಜಣವೂ…
ಗೆಜ್ಜೆ ಕಟ್ಟಿತು ಹಾಡುತಾ…!
ಮುಗ್ಧ ಪ್ರೀತಿ ಕಂಡು ಹೇಳಿತು..
ಕೆಂಪಾಗದಿರು ಕಾದಂಬಿನಿಯೇ….!!
(ಶ್ರೇಯ ಘೋಷಲ್)
ಮೂಗು ದಾಣ ….
(ಅರ್ಮಾನ್ ಮಲಿಕ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!
( ಶ್ರೇಯ ಘೋಷಲ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!
(ಕೋರಸ್)
ತಾರೆ ತಂತೀಗ ತಂತೀ…..

ಅತ್ಯಾಕರ್ಷಕ ನವ್ಯ ಸಾಹಿತ್ಯದ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಸಂಯೋಜನೆ ಮಾಡಿದ್ದಾರೆ..!

