The daily struggles of girls are revealed in "Mauna Raaga"

ಹೆಣ್ಣುಮಕ್ಕಳ ದಿನನಿತ್ಯದ ಬವಣೆ “ಮೌನ ರಾಗ” ದಲ್ಲಿ ಅನಾವರಣ - CineNewsKannada.com

ಹೆಣ್ಣುಮಕ್ಕಳ ದಿನನಿತ್ಯದ ಬವಣೆ “ಮೌನ ರಾಗ” ದಲ್ಲಿ ಅನಾವರಣ

ಸಿನಿಮಾ ಪತ್ರಕರ್ತೆಯಾಗಿ ಗುರುತಿಸಿಕೊಂಡಿರುವ ಸುನಯನ ಸುರೇಶ್ “ ಮೌನರಾಗ” ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಇಪ್ಪತ್ತು ನಿಮಿಷಗಳ “ಮೌನ ರಾಗ” ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಜೊತೆಗೆ ಮೆಚ್ಚುಗೆ ಗಳಿಸಿದೆ.

ಕಿರುಚಿತ್ರದ ವಿಶೇಷ ಪ್ರದರ್ಶನವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಪ್ರಿಯಾಂಕಾ ಉಪೇಂದ್ರ, ಕೆ.ಎಂ.ಚೈತನ್ಯ, ಪನ್ನಗಾಭರಣ, ಭಾವನಾ ರಾವ್, ಡಾ.ಮೇಘನಾ ಗಾಂವ್ಕರ್, ಮಾನ್ವಿತ ಕಾಮತ್, ಪ್ರವೀಣ್ ತೇಜ್, ಶುಭ್ರ ಅಯ್ಯಪ್ಪ, ರಕ್ಷ್, ಪ್ರಭು ಮುಂಡ್ಕರ್, ದಿಶಾ ಮದನ್ ಸೇರಿದಂv ಚಂದನವನದ ಅನೇಕ ತಾರೆಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಕಿರುಚಿತ್ರದಲ್ಲಿ ನಟಿಸಿರುವ ನಟಿ ಶ್ರುತಿ ಹರಿಹರನ್ ಮಾತನಾಡಿ, ಹೆಣ್ಣು ಮಕ್ಕಳ ದಿನನಿತ್ಯದ ಬವಣೆಗಳನ್ನು ಸುನಯನ ಇಪ್ಪತ್ತು ನಿಮಿಷಗಳಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ. ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಪ್ರತಿಭೆ ಪ್ರದರ್ಶಿಸಲು ಕಿರುಚಿತ್ರ ಸೂಕ್ತ ವೇದಿಕೆ. ತಾಯಿ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಕೂಡ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಹೇಳಿದರು

ನಿರ್ಮಾಪಕಿ ಹಾಗೂ ನಿರ್ದೇಶಕಿ ಸುನಯನ ಸುರೇಶ್ ಮಾತನಾಡಿ “ಮೌನ ರಾಗ” ಮೊದಲ ನಿರ್ದೇಶನದ ಕಿರುಚಿತ್ರ. ಸದ್ಯದಲ್ಲೇ ಓಟಿಟಿಯೊಂದರಲ್ಲಿ ಕಿರುಚಿತ್ರ ಬಿಡುಗಡೆಯಾಗಲಿದೆ. ಪ್ರೀತಾ ಜಯರಾಮ್ ಛಾಯಾಗ್ರಹಣ, ಅಲೋಕ್ ಸಂಗೀತ ನಿರ್ದೇಶನವಿದೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದಿದೆ. ಶೃತಿ ಹರಿಹರನ್, ಅಗ್ನಿವ್, ಸೂರಜ್ ಗೌಡ, ಹರ್ಷಿಲ್ ಕೌಶಿಕ್, ಸಂಯುಕ್ತ ಹೊರನಾಡ್, ಅನಿರುದ್ಧ್ ಆಚಾರ್ಯ, ರಾಜಶ್ರೀ ಪೊನ್ನಪ್ಪ, ಸುವಿಶ್, ಐಶ್ವರ್ಯ ಕೌಶಿಕ್,ರಿಷಬ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಮುಂದೆ ಡಾಕ್ಯುಮೆಂಟರಿ ಹಾಗೂ ಚಿತ್ರ ನಿರ್ದೇಶಿಸುವ ಕನಸಿದೆ ಎಂದು ಹೇಳಿಕೊಂಡರು

ಸಂಗೀತ ನಿರ್ದೆಶಕ ಆಲ್ ಓಕೆ ಮಾತನಾಡಿ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದೇನೆ. ಯೋಗರಾಜ್ ಭಟ್ ಅಹಾಡೊಂದನ್ನು “ಮೌನ ರಾಗ”ಕ್ಕೆ ಬರೆದಿದ್ದಾರೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin