Madenur Manu- Minchu relationship was known before- Producer Santosh Kumar

ಮಡೇನೂರು ಮನು- ಮಿಂಚು ಸಂಬಂಧ ಮುಂಚೆಯೇ ಗೊತ್ತಿತ್ತು- ನಿರ್ಮಾಪಕ ಸಂತೋಷ್ ಕುಮಾರ್ - CineNewsKannada.com

ಮಡೇನೂರು ಮನು- ಮಿಂಚು ಸಂಬಂಧ ಮುಂಚೆಯೇ ಗೊತ್ತಿತ್ತು- ನಿರ್ಮಾಪಕ ಸಂತೋಷ್ ಕುಮಾರ್

“ಕುಲದಲ್ಲಿ ಕೀಳ್ಯಾವುದೋ” ಚಿತ್ರ ಬಿಡುಗಡೆಗೆ ಮುನ್ನವೇ ನಾಯಕ ಮಡೇನೂರು ಮನು ಮತ್ತು ಕಾಮಿಡಿ ಕಿಲಾಡಿ ನಟಿ ಮಿಂಚು ನಡುವಿನ ಅಕ್ರಮ ಸಂಬಂಧ ತಮಗೆ ಗೊತ್ತಿತ್ತು, ಲಿವಿಂಗ್ ರಿಲೇಷನ್‍ನಲ್ಲಿ ಇದ್ದೇವೆ. ಎಂದಿದ್ದರಿಂದ ಇಬ್ಬರನ್ನು ಕರೆಸಿ ಮಾತನಾಡಿದ್ದೆ. ಚಿತ್ರ ಬಿಡುಗಡೆಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಮಿಂಚು ಹೇಳಿದ್ದರು. ಆದಾದ ಕೆಲವೇ ದಿನಗಳಲ್ಲಿ ಎಲ್ಲಾ ಉಲ್ಟಾ ಆಯಿತು ಎಂದು ನಿರ್ಮಾಪಕ ಸಂತೋಷ್ ಕುಮಾರ್ ಹೇಳಿದ್ದಾರೆ.

ಚಿತ್ರ ಬಿಡುಗಡೆಗೆ 20 ದಿನ ಮುನ್ನ ಕಾಮಿಡಿ ಕಿಲಾಡಿ ಶೋನಲ್ಲಿ ನಟಿಸಿದ್ದ ನಯನಾ ,ಕುಲದಲ್ಲಿ ಕೀಳ್ಯಾವುದೋ ಚಿತ್ರದಲ್ಲಿ ನಟಿಸಿದ್ದಾರೆ. ಎನ್ನುವರು ಕಾಲ್ ಮಾಡಿ ಮಡೇನೂರು ಮನು ಮತ್ತು ಮಿಂಚು ವಿಷಯ ತಿಳಿಸಿ, ಆಕೆ ದೂರು ಕೊಡ್ತಾರಂತೆ, ಮಾದ್ಯಮಗಳಿಗೆ ಹೇಳುತ್ತೇನೆ ಎನ್ನುತ್ತಿದ್ದಾರೆ ಎಂದು ತಿಳಿಸಿದ್ದರು. ಈ ವಿಷಯ ಕೇಳಿ ಗಾಬರಿಯಾದೆ, ತಕ್ಷಣ ನಿರ್ದೇಶಕ ರಾಮ್ ನಾರಾಯಣ್, ಮಡೇನೂರು ಮನು ಸೇರಿದಂತೆ ಹಲವರ ಜೊತೆ ಚರ್ಚೆ ನಡೆಸಿದ್ದೆ. ಆದರೆ ಚಿತ್ರಕ್ಕಾಗಿ ಕೀಳು ಮಟ್ಟದ ಪ್ರಚಾರ ನಡೆಸುವ ಉದ್ದೇಶ ನಮ್ಮದಲ್ಲ ಎಂದರು

ಅದಲ್ಲಿಯೂ ನಾವು ಗೌರವಿಸುವ ನಟರಾದ ಶಿವರಾಜ್ ಕುಮಾರ್, ದರ್ಶನ್ ಮತ್ತು ದೃವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಷಯ ತಿಳಿದು ಮತ್ತಷ್ಟು ಕೋಪ ಬಂತು, ನಾವು ಯಾರಿಗೆ ಚಿತ್ರ ನಿರ್ಮಾಣ ಮಾಡಿದ್ದೇನೆ ಎನ್ನುವ ಅಸಹನೆ ಉಂಟಾಯಿತು, ಕಾಮಿಡಿ ಕಿಲಾಡಿಯಲ್ಲಿ ನಟಿಸಿದ್ದ ಒಳ್ಳೆಯ ಕಲಾವಿದ ಎಂದು ನಿರ್ಮಾಣ ಮಾಡಿದೆ, ಅವನಿಗೆ ಬೇರೊಂದು ಸಂಬಂಧ ಇದೆಯಾ ಎನ್ನುವುದನ್ನು ತಿಳಿಸುಕೊಂಡು ಚಿತ್ರ ನಿರ್ಮಾಣ ಮಾಡಲು ಆಗುತ್ತದೆಯೋ ಗೊತ್ತಿದ್ದರೆ ಸಿನಿಮಾ ನಿರ್ಮಾಣವನ್ನೇ ಮಾಡುತ್ತಿರಿಲ್ಲ. ಇದು ನನ್ನ ಕಡೆಯ ನಿರ್ಮಾಣದ ಚಿತ್ರ ಎಂದು ಹೇಳಿದರು.

ಮಡೇನೂರು ಮನು ತುಂಬಾ ಚಾಲಾಕಿ ನಿರ್ದೇಶಕರ ಬಳಿ ಒಂದು ರೀತಿ ಮಾತನಾಡುತ್ತಿದ್ದ, ನನ್ನ ಬಳಿ ಒಂದು ರೀತಿ ಮಾತನಾಡುತ್ತಿದ್ದ ಯಾರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿದ್ದ ಕಿಲಾಡಿ, ಆತ ರೀತಿ ಮಾಡುತ್ತಾನೆ ಎನ್ನುವುದು ಗೊತ್ತಿರಲಿಲ್ಲ ಎಂದರು

ನಿರ್ದೇಶಕ ರಾಮ್ ನಾರಾಯಣ್ ಮಾತನಾಡಿ, ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ಈ ಹೊತ್ತಿನಲ್ಲಿ ಶಿವಣ್ಣ, ದರ್ಶನ್ ಮತ್ತು ದೃವ ಸರ್ಜಾ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಬೇಸರ ತರಿಸಿದೆ. ಒಂದು ವೇಳೆ ಆತನೇ ಮಾತನಾಡಿದ್ದು ಎನ್ನುವುದು ಸಾಬೀತಾದರೆ ಅದನ್ನು ವಿರೋಧಿಸುವರು ಮೊದಲು ನಾವೇ, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ, ಶಿವಣ್ಣ, ದರ್ಶನ್ ಮತ್ತು ದೃವ ಸರ್ಜಾ ಅವರನ್ನು ಕ್ಷಮೆ ಕೇಳುತ್ತೇವೆ ಎಂದು ಹೇಳಿದರು

ನಾಯಕಿ ಮೌನ ಗುಡ್ಡೇಮನೆ ಮಾತನಾಡಿ, ಮೊದಲ ಚಿತ್ರದಲ್ಲಿ ಹೀಗ್ಯಾಯತಲ್ಲ ಎನ್ನುವ ಬೇಸರ ನೋವು ಇದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ಸಮಯದಲ್ಲಿ ಹೀಗೆಲ್ಲಾ ಆಗಿರುವುದು ನೋವು ತಂದಿದೆ, ನಾನು ಡಿಬಾಸ್ ದೊಡ್ಡ ಅಭಿಮಾನಿ, ಅವರ ಬಗ್ಗೆ ಮಾತನಾಡಿದ್ದು ನನ್ನ ರಕ್ತ ಕುದಿಯುವಂತೆ ಮಾಡಿದೆ, ಜೊತೆಗೆ ಶಿವಣ್ಣ, ದೃವ ಸರ್ಜಾ ಅವರ ಬಗ್ಗೆ ಮಾತನಾಡಿದ್ದು ಮತ್ತಷ್ಟು ಬೇಸರ ತರಿಸಿದೆ ಎಂದು ಹೇಳಿಕೊಂಡರು

ಹಿರಿಯ ಕಲಾವಿದ ಕರಿಸುಬ್ಬು ಮಾತನಾಡಿ, ಪ್ರೋಮೋ ಶೂಟ್‍ಗೆ ಕರೆದಿದ್ದ ಮನು ಶೂಟ್‍ಗೆ ಹೋದರೆ ಮಾತನಾಡಿಸುವುದಿರಲಿ, ಕಾಫಿ,ತಿಂಡಿ ಆಯ್ತಾ ಎಂದು ಕೇಳುವಷ್ಟು ಸೌಜನ್ಯವೂ ಇರಲಿಲ್ಲ. ಅದರಲ್ಲಿಯೂ ಶಿವಣ್ಣ, ದರ್ಶನ್ ಮತ್ತು ದೃವ ಸರ್ಜಾ ಅವರ ಜೊತೆ ಮೊದಲಿನಿಂದಲೂ ಉತ್ತಮ ಸಂಬಂಧ ಇಟ್ಟುಕೊಟ್ಟಿದ್ದೇನೆ. ಅಂತಹುದರಲ್ಲಿ ಚಿತ್ರರಂಗದ ಅನೇಕ ಸ್ನೇಹಿತರು ಕರೆ ಮಾಡಿ ಎಂತವನಿಗೆ ಪ್ರಚಾರ ಮಾಡುತ್ತಿದ್ದೀಯಾ ಎಂದು ಬೈದರು ಎಂದರು

ಹಿರಿಯ ಕಲಾವಿದ ಎಂ.ಎಸ್ ಉಮೇಶ್, ಡ್ರಾಗನ್ ಮಂಜು,ಸೋಮು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin