Mandya Haida" Teaser Released: Actor Abhay Chandru who grabbed attention

“ಮಂಡ್ಯ ಹೈದ” ಚಿತ್ರದ ಟೀಸರ್ ಬಿಡುಗಡೆ: ಗಮನ ಸೆಳದ ನಟ ಅಭಯ್ ಚಂದ್ರು - CineNewsKannada.com

“ಮಂಡ್ಯ ಹೈದ” ಚಿತ್ರದ ಟೀಸರ್ ಬಿಡುಗಡೆ: ಗಮನ ಸೆಳದ ನಟ ಅಭಯ್ ಚಂದ್ರು

“ಮನಸಾಗಿದೆ ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಯುವ ನಾಯಕ ಅಭಯ್ ಚಂದ್ರು ನಾಯಕನಾಗಿರುವ ” ಮಂಡ್ಯ ಹೈದ ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಮೂಲಕ ಅಭಯ್ ಬೆಳ್ಳಿತೆರೆಯಲ್ಲಿ ಭರವಸೆ ಮೂಡಿಸಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಅವರ ಪತ್ನಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಪುತ್ರ ಅಭಯ್ ಚಂದ್ರು ಹಾಗು ಇಡೀ ತಂಡಕ್ಕೆ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ವಿ.ಶ್ರೀಕಾಂತ್, ಈ ಮುಂಚೆ 6 ಸಿನಿಮಾ ಮಾಡಿದ್ದೆ ಎಲ್ಲವೂ ಕೈಕೊಟ್ಟಿದ್ದವು. ಕೆಲವು ಅರ್ದದಲ್ಲಿ ನಿಂತಿತ್ತು. ಕೆಲವು ಆರಂಭವಾಗಲಿಲ್ಲ. ಚಿತ್ರ ಶುರುಮಾಡಿದೆ. ಆದರೆ ಶುರುವಾಗಲೇ ಇಲ್ಲ. ಸಿನಿಮಾ ಯಾವುದೇ ಸೆಟ್ಟೇರಿರಲ್ಲ ಖಿನ್ನತೆಗೆ ಒಳಗಾಗಿದ್ದಾಗ ನಿರ್ಮಾಪಕ ಚಂದ್ರಶೇಖರ್ ಚಿತ್ರ ಸಹಕಾರ ನೀಡಿದ್ದಾರೆ. ಚಿತ್ರ ಚಿತ್ರೀಕರಣ ಪೂರ್ಣಗೊಂಡಿದೆ.

ಇದೇ ಮೊದಲ ಸಿನಿಮಾ ಕಷ್ಟದ ಸಮಯದಲ್ಲಿ ತಾಯಿ ಮತ್ತು ತಮ್ಮನ ಸಹಕಾರ ಕಾರಣ, ತಮ್ಮ ಬೆಂಬಲಕ್ಕೆ ನಿಂತಿದ್ದಾನೆ. ಇನ್ನೂ ಮಂಡ್ಯ ಹೈದ ಚಿತ್ರ ಮಂಡ್ಯ ಹೈದ ಲೈಪ್ ಸ್ಟೈಲ್ ಹೇಗಿರುತ್ತೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದರು

ನಾಯಕ ಅಭಯ್ ಚಂದ್ರು ಮಾತನಾಡಿ ಶಿವ ಎನ್ನುವ ಪಾತ್ರ ಮಾಡಿದ್ದೇನೆ. ಸಹಕಾರ ಪೆÇ್ರೀತ್ಸಾಹವಿರಲಿ. ಜೀವನದಲ್ಲಿ ತೆರೆಯ ಮೇಲೆ ತೋರಿಸುವ ಚಿತ್ರದಲ್ಲಿ ಸಂದೇಶವಿದೆ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕಿ ಭೂಮಿಕಾ ಭೂಮೇಶ್ ಗೌಡ ಮಾತನಾಡಿ ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ, ಕಷ್ಟಪಟ್ಟು ಕನ್ನಡ ಕಲಿತಿದ್ದೇನೆ. ಕಿರುತೆರೆಯಲ್ಲಿ ಗೀತಾ ಧಾರಾವಾಹಿಯಲ್ಲಿ ನಟಿಸಿದ್ದೆ. ಜೊತೆಗೆ ರಾಬರ್ಟ್ ಸೇರಿದಂತೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ನಾಯಕಿಯಾಗಿ ಇದು ಮೊದಲ ಚಿತ್ರ. ಹೊಸ ಕಲಾವಿದರನ್ನು ಬೆಳೆಸಿ ಎಂದು ಕೇಳಿಕೊಂಡರು.

ನಿರ್ಮಾಪಕ ಎಸ್. ಚಂದ್ರಶೇಖರ್ ಮಾತನಾಡಿ ಹಳ್ಳಿಯ ಹಿನ್ನೆಲೆಯಲ್ಲ ಚಿತ್ರೀಕರಣ ಮಾಡಲಾಗಿದೆ. ಪ್ರಪಂಚದಲ್ಲಿ ಎಲ್ಲರಿಗೂ ಗೊತ್ತಿರುವ ಪದ ಪ್ರೀತಿ. ಅದರ ಅರ್ಥ ಹೇಳಿ ಎಂದರೆ ಗೊತ್ತಿಲ್ಲ. ಪ್ರೀತಿ ಪಡೆಯಲು ಕೆಲವು ಸಾಯುಸುತ್ತಾರೆ. ಕೆಲವು ಸಾಯುತ್ತಾರೆ. ನಾಯಕ ಕೂಡ ಪ್ರೀತಿಯಲ್ಲಿ ಬೀಳ್ತಾನೆ. ಸಾಯ್ತಾನಾ, ಸಾಯಿಸುತ್ತಾನಾ ಎನ್ನು=ವುದು ಚಿತ್ರದ ತಿರುಳು. ಅಕ್ಷನ್ ,ಸೆಂಟಿಮೆಂಟ್ ಹಾಡು ಇದೆ. ನಾಯಕ, ನಾಯಕಿ, ನಿರ್ಮಾಪಕ, ಛಾಯಾಗ್ರಾಹಕ ,ಕಲಾವಿದರಲ್ಲಿ ಬಹುತೇಕರು ಮಂಡ್ಯದವರೇ ಆಗಿದ್ದಾರೆ.ಹೀಗಾಗಿ ಮಂಡ್ಯ ಹೈದ ಎನ್ನುವ ಹೆಸರು ಇಡಲಾಗಿದೆ ಎಂದು ಮಂಡ್ಯ ಹೈದ ಚಿತ್ರಕ್ಕೆ ಹೆಸರಿಟ್ಟ ಬಗ್ಗೆ ಮಾಹಿತಿ ಹಂಚಿಕೊಂಡರು.

ಮಂಡ್ಯದ ಗಂಡು, ಮಂಡ್ಯ, ಲವ್ ಇನ್ ಮಂಡ್ಯ ಸೇರಿದಂತೆ ಇದೀಗ ಆ ಸಾಲಿಗೆ ಮಂಡ್ಯ ಹೈದ ಚಿತ್ರ ಸೇರ್ಪಡೆಯಾಗಿದೆ.ಬಲವರಾಜವಾಡಿ, ಭವ್ಯ ತುಳಿಸಿ, ಕಾಮಿಡಿ ಕಿಲಾಡಿಗಳು ತಂಡದ 15 ಮಂದಿ ಕಾಣಿಸಿಕೊಂಡಿದ್ದಾರೆ.ಕ್ಯಾಪ್ಟನ್ ಕಿಶೋರ್ ಎರಡು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಭರ್ಜರಿ ಆಕ್ಷನ್ ಮಾಡಿಕೊಟ್ಟಿದ್ದಾರೆ. ವಿಭಿನ್ನ ಕಂಟೆಂಟ್ ಚಿತ್ರ. ಬಿಡುಗಡೆಗೆ ಸಜ್ಜಾಗಿ ಎಂದರು.

ಖಳನಟ ವಿಷ್ಣು, ಕಲಾವಿದ ದರ್ಶನ್ ಸೂರ್ಯ ,ಗಜೇಂದ್ರ ಸೇರಿದಂತೆ ಛಾಯಾಗ್ರಹಕ ಮನುಗೌಡ, ಸಂಗೀತ ನಿರ್ದೇಶಕ ಸುರೇಂದ್ರ ನಾಥ್ ಸೇರಿದಂತೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin