Manjunath Arasu, the young talent of 'Gopilola': Director R. Ravindra Action Cut

‘ಗೋಪಿಲೋಲ’ ನಾದ ಯುವ ಪ್ರತಿಭೆ ಮಂಜುನಾಥ್ ಅರಸು: ನಿರ್ದೇಶಕ ಆರ್.ರವೀಂದ್ರ ಆಕ್ಷನ್ ಕಟ್ - CineNewsKannada.com

‘ಗೋಪಿಲೋಲ’ ನಾದ ಯುವ ಪ್ರತಿಭೆ ಮಂಜುನಾಥ್ ಅರಸು: ನಿರ್ದೇಶಕ ಆರ್.ರವೀಂದ್ರ ಆಕ್ಷನ್ ಕಟ್

ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾ ನಿರ್ದೇಶಿಸಿರುವ ಆರ್.ರವೀಂದ್ರ ಸದ್ದಿಲ್ಲದೇ ಹೊಸ ಸಿನಿಮಾ ಮುಗಿಸಿದ್ದಾರೆ. ಈ ಚಿತ್ರದ ಟೈಟಲ್ ಬಿಡುಗಡೆ ಆಗಿದೆ.

ರವೀಂದ್ರ ಅವರ ಹೊಸ ಪ್ರಯತ್ನಕ್ಕೆ ಗೋಪಿಲೋಲ ಎಂಬ ಶೀರ್ಷಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಯುವ ಪ್ರತಿಭೆ ಮಂಜುನಾಥ್ ಅರಸು ನಾಯಕನಾಗಿ ನಟಿಸಿದ್ದು, ನಿಮಿಷಾ ಕೆ ಚಂದ್ರ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಉಳಿದಂತೆ ಆಂಕರ್ ಕಮ್ ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಸಂತಿ, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಎಂಟ್ರಿ ಕೊಡುತ್ತಿದ್ದಾರೆ.

ಛಲಗಾರ, ನೀವು ಕರೆ ಮಾಡಿದ ಚಂದದಾರರು, ರಾಂಧವ ಸಿನಿಮಾ ನಿರ್ಮಿಸಿದ್ದ ಎಸ್.ಆರ್.ಸನತ್ ಕುಮಾರ್ ಚಿತ್ರಕ್ಕೆ ಹಣ ಹಾಕಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಮಂಜುನಾಥ್ ಗೋಪಿಲೋಲ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸಹಜ ಕೃಷಿ ಜೊತೆಗೆ ಪ್ರೇಮಕಥೆ ಎಳೆಯನ್ನು ಹೊಂದಿರುವ ಈ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಸೋಕನ್ ಚೆನ್ನೈ ಸಂಗೀತ, . ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಗೋಪಿಲೋಲ ಸಿನಿಮಾಗೆ ಜಯಂತ್ ಕಾಯ್ಕಿಣಿ, ಕವಿರಾಜ್, ಕೇಶವಚಂದ್ರ ಸಾಹಿತ್ಯ ಬರೆದಿದ್ದು, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಹೇಮಂತ್, ಅನುರಾಧಾ ಭಟ್, ವಾರಿಜ ಶ್ರೀ, ಶಶಾಂಕ್ ಹಾಗೂ ಗೀತಾ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸದಾಚಾರ್ಯ, ಧನಂಜಯ್ ಹಾಗೂ ಹರಿಕೃಷ್ಣ ನೃತ್ಯ ಸಂಯೋಜನೆ ಹಾಡುಗಳಿಗಿದೆ.

ಗೋವಾ,ಕೊಡಚಾದ್ರಿ, ಹೊನ್ನಾವರ, ಮಂಗಳೂರು, ಮುರುಡೇಶ್ವರ, ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶೂಟಿಂಗ್ ಮುಗಿಸಿರುವ ಗೋಪಿಲೋಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಶೀರ್ಷಿಕೆ ಅನಾವರಣ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಟೀಸರ್, ಹಾಡುಗಳನ್ನು ಪ್ರೇಕ್ಷಕರ ಎದುರು ಪ್ರಸ್ತುತಪಡಿಸಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin