Mark Film Review: "Mark" is a delicious treat of entertainment: Kiccha Sudeep captivates with his mannerisms

Mark Film Review: ‌ “ಮಾರ್ಕ್” ಮನರಂಜನೆಯ ರಸದೌತಣ : ಮ್ಯಾನರಿಸಂ ಮೂಲಕ ಮನಗೆದ್ದ ಕಿಚ್ಚ ಸುದೀಪ್ - CineNewsKannada.com

Mark Film Review: ‌ “ಮಾರ್ಕ್” ಮನರಂಜನೆಯ ರಸದೌತಣ : ಮ್ಯಾನರಿಸಂ ಮೂಲಕ ಮನಗೆದ್ದ ಕಿಚ್ಚ ಸುದೀಪ್

ಚಿತ್ರ : ಮಾರ್ಕ್
ನಿರ್ದೇಶನ : ವಿಜಯ್ ಕಾರ್ತಿಕೇಯ
ತಾರಾಗಣ: ಕಿಚ್ಚ ಸುದೀಪ್, ನವೀನ್ ಚಂದ್ರ, ಗೋಪಾಕ ಕೃಷ್ಞ ದೇಶಪಾಂಡೆ, ರಾಘು ರಮಣಕೊಪ್ಪ,ಪ್ರತಾಪ್ ನಾರಾಯಣ್ ಯೋಗಿ ಬಾಬು, ರೋಷಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಗುರು ಸೋಮಸುಂದರಂ, ಡ್ರಾಗನ್ ಮಂಜು
ರೇಟಿಂಗ್: **** 4/5

” ಇಲ್ಲಿವರೆಗೂ ಒಂದು ಲೆಕ್ಕ ಇನ್ನೇಲೆ‌ ಇನ್ನೊಂದು ಲೆಕ್ಕ.. ಆರಂಭ ಆಗಿರುವ ಯುದ್ದದಲ್ಲಿ ನೀನೆ ತಗಲಾಕಿಕೊಂಡಿದ್ದೀಯ‌…”

“ಏಳು ಬೆಟ್ಟ ,ಏಳು ಸಮುದ್ರ..ಏಳು ಗ್ರಹದಲ್ಲಿ ಹಿಡಿ ಜೀವ ಎಲ್ಲಿ ಬಚ್ಚಿಟ್ಟುಕೊಂಡಿದ್ರೂ ಹುಡಿಕಿಕೊಂಡು ಬಂದು ಹೊಡೆತೀನಿ….”

ಕಿಚ್ಚ ಸುದೀಪ್ ಅಭಿನಯದ ಪವರ್ ಪುಲ್ ಸಂಭಾಷಣೆಗಳಲ್ಲಿ. ಒಂದು.. ಆಕ್ಷನ್ ,ಥ್ರಿಲ್ಲರ್, ಎಮೋಷನ್, ಮಕ್ಕಳ ಅಪಹರಣ, ಮುಖ್ಯಮಂತ್ರಿಯಾಗಲು ಮಾಡುವ ತಂತ್ರ.. ಜೊತೆಗಿದ್ದವರ ಕುತಂತ್ರ..ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ತೆರೆಗೆ ಕಟ್ಟಿಕೊಟ್ಟಿರುವ ಚಿತ್ರ “ಮಾರ್ಕ್”.

ವರ್ಷಾಂತ್ಯದಲ್ಲಿ ತೆರೆಗೆ ಬಂದಿರುವ ಚಿತ್ರ ಕನ್ನಡದ ಸಿನಿ‌ ಪ್ರೇಕ್ಷಕರಿಗೆ ರಂಜನೆಯ ರಸದೌತಣ ನೀಡಿದೆ. ಜೊತೆಗೆ ಕಿಚ್ಚ ಸುದೀಪ್ ಲುಕ್ ,ಸ್ಟೈಲ್, ಮ್ಯಾನರಿಸಂ ಚಿತ್ರದುದ್ದಕ್ಕೂ ಹೈಲೆಟ್. ಅದುವೇ ಚಿತ್ರವನ್ನು ಕೊನೆ ತನಕ ಕಾಪಾಡಿಕೊಂಡು ಬಂದಿದೆ. ಈ ಮೂಲಕ ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸುವಲ್ಲಿ ಯಶಸ್ವಿಯಾಗಿದೆ.

ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ. ಅದೇ ನಿರ್ಮಾಪಕರು ಮತ್ತು ನಿರ್ದೇಶಕ ಜೊತೆಗೂಡಿ ಕಿಚ್ಚ ಸುದೀಪ್ ಮತ್ತೊಮ್ಮೆ ಮಾರ್ಕ್ ಚಿತ್ರ ಮಾಡಿದ್ದು ವರ್ಷಾಂತ್ಯದಲ್ಲಿ ಕನ್ನಡ ಚಿತ್ರರಂದಲ್ಲಿ ಭರಪೂರ ಆಕ್ಷನ್, ಮನರಂಜನೆ ನೀಡಿದ್ದಾರೆ.‌ ಈ ಮೂಲಕ ನಾವಿದ್ದೇವೆ.. ಮ್ಯಾಕ್ಸ್ ಮುಗೀತು.. ಈಗೇನಿದ್ದರೂ “ಮ್ಯಾರ್ಕಿಸಂ ಕಾಲ” ಎಂದು ಕನ್ನಡ ಚಿತ್ರರಂಗದಲ್ಲಿ ಹೆಗ್ಗುರುತು ಮೂಡಿಸಿದೆ.

ಅಜಯ್ ಮಾರ್ಕಂಡೇಯ ಅಕಾ ಮಾರ್ಕ್ (ಕಿಚ್ಚ ಸುದೀಪ್) ಅಮಾನತ್ತುಗೊಂಡ ಪೋಲಿಸ್ ಅಧಿಕಾರಿ ತನ್ನೊಂದಿಗೆ ಅಮಾನತ್ತುಗೊಂಡ ಪೊಲೀಸ್ ಅಧಿಕಾರಿಗಳ ತಂಡ ಕಟ್ಡಿಕೊಂಡವ. ಅಮಾನತ್ತಾಗಿದ್ದರೂ ಪೊಲೀಸರಿಗೆ ಕರ್ತವ್ಯದಲ್ಲಿರುವ ಅಧಿಕಾರಿ . ದುಷ್ಟರ ಕೂಟದಿಂದ ಇಡೀ ಪೊಲೀಸ್ ಠಾಣೆ ಅವರ ವಶದಲ್ಲಿದ್ದಾಗ. ದಾದಾ ಯಾರ್ ಗೊತ್ತಾ..ಎನ್ನುತ್ತಾ ಹಾಡಿಕೊಂಡೇ ಅವರಿಗೆ ನಡುಕ ಹುಟ್ಟಿಸಿದಾತ.

ಪೊಲೀಸರು ವಶಪಡಿಸಿಕೊಂಡ 2 ಸಾವಿರ ಕೋಟಿ ಮಾದಕ ವಸ್ತು ಜಾಲದ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದು ತಿಳಿದುಕೊಳ್ಳುವಷ್ಠರಲ್ಲಿ ಸಾಲು ಸಾಲು ಮಕ್ಕಳ ಅಪಹರಣ ಅದರ ಜೊತೆಗೆ ಮುಖ್ಯಮಂತ್ರಿ ಆಗಲು ತಾಯಿಯ ಸಹಿಯನ್ನೇ ನಕಲು ಮಾಡುವ ಚಾಣಾಕ್ಷ ಮಗ, ತಾತ ಕಟ್ಟಿದ ಪಕ್ಷದಲ್ಲಿ ಮುಖ್ಯಮಂತ್ರಿ ಆಗುವ ಆಸೆ.. ಅದು ಈಡೇರುತ್ತಾ..ಮಕ್ಕಳನ್ನು ಅಪಹರಣ ಮಾಡಿದವರು ಯಾರು..ಅದನ್ನು ಪೊಲೀಸರು ಪತ್ತೆ ಮಾಡ್ತಾರಾ ಅಥವಾ ಮಾರ್ಕ್ ಪತ್ತೆ ಮಾಡ್ತಾನಾ.. ಈ ನಡುವೆ ಏನೆಲ್ಲಾ ಆಗಲಿದೆ ಎನ್ನುವುದು ಕುತೂಹಲಕಾರಿ.

ನಿರ್ದೇಶಕ ವಿಜಯ್ ಕಾರ್ತಿಕೇಯ, ನಟ ಕಿಚ್ಚ ಸುದೀಪ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಭರಪೂರ ಮನರಂಜನೆ ಉಣ‌ಬಡಿಸಿದ್ದಾರೆ..ಜೊತೆಗೆ ಮೇಕಿಂಗ್, ಚಿತ್ರದ ಕಥೆ, ಚಿತ್ರಕಥೆ, ನಿರೂಪಣಾ ಶೈಲಿಯಲ್ಲಿ ಕುತೂಹಲ ಕಾಪಾಡಿಕೊಳ್ಳುವ ಮೂಲಕ ವರ್ಷಾಂತ್ಯದಲ್ಲಿ ಕಿಚ್ಚನ ಅಭಿಮಾನಿಗಳಿಗೆ ರಂಜನೆಯ ರಸದೌತಣ ನೀಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರದೇ ಡೈಲಾಗ್ ಉಲ್ಲೇಖಿಸುವುದಾದರೆ ಇಲ್ಲಿ ತನಕ ಒಂದು ಲೆಕ್ಕ.. ಇನ್ನು ಮುಂದೆ ಮತ್ತೊಂದು ಲೆಕ್ಕ ಎನ್ನುವಂತೆ ಹಾವ- ಬಾವ, ಸ್ಟೈಲ್ ,ಮ್ಯಾನರಿಸಂ ಪ್ರತಿಯೊಂದು ಬದಲಾಗಿದೆ. ಇದು ಅಭಿಮಾನಿಗಳಿಗೆ ,ಸಿನಿ ರಸಿಕರಿಗೆ ವರ್ಷಾಂತ್ಯದಲ್ಲಿ ಮನರಂಜನೆ ಹಬ್ಬದ ಊಟ ಉಣಬಡಿಸಿದ್ದಾರೆ.ಇನ್ನು ನಟನೆ, ನೃತ್ಯ, ಆಕ್ಷನ್ ನಲ್ಲಿ ಕಿಚ್ಚನ ಸುದೀಪ್ ಗೆ ಸುದೀಪ್ ಸಾಟಿ.

ಇನ್ನುಳಿದಂತೆ ಚಿತ್ರದಲ್ಲಿ ನವೀನ್ ಚಂದ್ರ, ಗೋಪಾಕ ಕೃಷ್ಞ ದೇಶಪಾಂಡೆ, ರಾಘು ರಮಣಕೊಪ್ಪ,ಪ್ರತಾಪ್ ನಾರಾಯಣ್ ಯೋಗಿ ಬಾಬು, ರೋಷಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಗುರು ಸೋಮಸುಂದರಂ, ಡ್ರಾಗನ್ ಮಂಜು, ಮಹಂತೇಶ್ ಮತ್ತಿತರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ.. ಮಸ್ತ್ ಮಲೈಕಾ ಹಾಡಿಗೆ ಧ್ವನಿಯಾಗಿದ್ದು ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಗಾಯಕಿಯಾಗುವ ಮುನ್ಸೂಚನೆ ನೀಡಿದ್ದಾರೆ. ಬೆಳೆವ ಸಿರಿ ಮೊಳೆಯಕೆಯಲ್ಲಿ ಎನ್ನುವ ಹಾಗೆ ಚಿತ್ರರಂಗದಲ್ಲಿ ಅಪ್ಪನಂತೆ ಹೆಸರು ಮಾಡುವ ಭರವಸೆ ಮೂಡಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಕ್ಯಾಮರ ಚಿತ್ರಕ್ಕೆ ಫ್ಲಸ್ ಆಗಿದೆ. ಚಿತ್ರ ಮನರಂಜನೆಯಲ್ಲಿ ಮೋಸ ಮಾಡದು

ನಟ ಸುದೀಪ್ ಚಿತ್ರ ಜೀವನದಲ್ಲಿ ಮಾರ್ಕ್ ಚಿತ್ರ ಒಂದು ಯಶಸ್ಸಿನ ಮಾರ್ಕ್ ಆಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin