ರಗಡ್ ಲುಕ್‍ನಲ್ಲಿ ನಟಿ ರಶ್ಮಿಕಾ ಮಂದಣ್ಣ : ಮೈಸಾ ಗ್ಲಿಂಪ್ಸ್ ಬಿಡುಗಡೆ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ “ಮೈಸಾ” ಚಿತ್ರದ ಸಿನಿಮಾ ಫಸ್ಟ್ ಗ್ಲಿಮ್ಸ್ ಬಿಡುಗಡೆ ಆಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ನಟಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಮೈಸಾ ಸಿನಿಮಾದಿಂದ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರ ಭಾರೀ ಬಜೆಟ್‍ನಲ್ಲಿ ಮೂಡಿಬರುತ್ತಿದೆ.. ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚು ಮಾಡ್ತಿದೆ
ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯ ಮಾಡಿ ಸೈ ಎನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ ರಶ್ಮಿಕಾ .. ಗ್ಲಿಂಪ್ಸ್‍ನಲ್ಲಿ ನಾಯಕಿಯ ತಾಯಿ ಹೇಳುವ ಶಕ್ತಿಶಾಲಿ ವಾಯ್ಸ್ ಓವರ್‍ನೊಂದಿಗೆ ಆರಂಭವಾಗುತ್ತದೆ. ಅವಳ ಮಗಳು ಮರಣವನ್ನೇ ಎದುರಿಸಿ ನಿಲ್ಲುವ ಶಕ್ತಿ ಹೊಂದಿದ್ದಾಳೆ ಎಂದು ಹೇಳುತ್ತಾ, “ಈ ಹೆಸರನ್ನು ನೆನಪಿಟ್ಟುಕೊಳ್ಳಿ ಮೈಸಾ” ಎಂದು ಲೋಕಕ್ಕೆ ಸಂದೇಶ ನೀಡುತ್ತಾರೆ.
ಮೈಸಾ ಗೋಂಡಿ ಸಮುದಾಯದ ಮಹಿಳಾ ನಾಯಕಿಯನ್ನು ಅತ್ಯಂತ ಬಲಿಷ್ಠ, ಉಗ್ರ ಮತ್ತು ಭಾವನಾತ್ಮಕವಾಗಿ ತೋರಿಸುವ ಮೊದಲ ಚಲನಚಿತ್ರವಾಗಿ ಗುರುತಿಸಿಕೊಳ್ಳುತ್ತಿದೆ. ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರಕ್ಕೆ ಶ್ರೀಯಾಸ್ ಪಿ ಕೃಷ್ಣ ಛಾಯಾಗ್ರಾಹಣ, ಜೇಕ್ಸ್ ಬೆಜೋಯ್ ಸಂಗೀತ ಹಾಗೂ ಅಂತರರಾಷ್ಟ್ರೀಯ ಸ್ಟಂಟ್ ನಿರ್ದೇಶಕ ಆಂಡಿ ಲಾಂಗ್ ನೇತೃತ್ವದ ಆಕ್ಷನ್ ಸೀನ್ ಗಳು ಅದ್ಬುತವಾಗಿ ಮೂಡಿ ಬರ್ತಿದೆ.ಪ್ರಸ್ತುತ ತೆಲಂಗಾಣ ಮತ್ತು ಕೇರಳದ ಅರಣ್ಯ ಪ್ರದೇಶಗಳಲ್ಲಿ ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಟೀಸರ್ ಬಿಡುಗಡೆಯಿಂದ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿದೆ.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಹಾಗೂ ಇತರರು ಚಿತ್ರದಲ್ಲಿದ್ದಾರೆ

