“ಮಾರ್ಕ್” ಮನರಂಜನೆಯ ರಸದೌತಣ: ಗುಣಮಟ್ಟದಲ್ಲಿ ರಾಜಿ ಇಲ್ಲ- ಕಿಚ್ಚ ಸುದೀಪ್
“ ಮ್ಯಾಕ್ಸ್” ಚಿತ್ರಕ್ಕಿಂತಲೂ “ಮಾರ್ಕ್” ಚಿತ್ರ ದೊಡ್ಡ ಬಜೆಟ್‍ನಲ್ಲಿ ಮಾಡಿರುವ ಚಿತ್ರ. ತರಾತುರಿಯಲ್ಲಿ ಬರುತ್ತೇವೆ ಎಂದು ಎಲ್ಲಿಯೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. “ಮಾರ್ಕ್” ಮನರಂಜನೆಯ ದೊಡ್ಡ ಪ್ಯಾಕೇಜ್ ಚಿತ್ರದಲ್ಲಿದೆ. ವರ್ಷಕ್ಕೆ ಕನಿಷ್ಠ ಎರಡು ಚಿತ್ರ ನೀಡುವ ಉದ್ದೇಶ ನನ್ನದು. ಚಿತ್ರವೊಂದನ್ನು ಎರಡು, ಮೂರು ವರ್ಷ ಚಿತ್ರೀಕರಣ ಮಾಡಿಕೊಂಡು ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲ. ಅಂದುಕೊಂಡಂತೆ “ಮಾರ್ಕ್” ಚಿತ್ರವನ್ನು ತೆರೆಗೆ ತರುತ್ತಿದ್ದೇವೆ…”.

ಹೀಗಂತ ಕಡ್ಡಿ ಮುರಿದಂತೆ ತಮ್ಮ ನಿಲುವು ಸ್ಪಷ್ಟಪಡಿಸಿ ಚಿತ್ರದ ಬಗೆಗೆ ಇರುವ ಪ್ರೀತಿ, ಕಾಳಜಿಯನ್ನು ಅನಾವರಣ ಮಾಡಿದರು ನಟ ಕಿಚ್ಚ ಸುದೀಪ್.
ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ “ಮಾರ್ಕ್” ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಡಿಸೆಂಬರ್ 25ರಂದು ತೆರೆಗೆ ಬರಲಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮುಕ್ತವಾಗಿ ಮಾತ ಹಂಚಿಕೊಂಡರು ಕಿಚ್ಚ ಸುದೀಪ್.
ವರ್ಷಕ್ಕೆ ಕನಿಷ್ಠ ಎರಡು ಚಿತ್ರ:
ವರ್ಷಕ್ಕೆ ಕನಿಷ್ಠ ಎರಡು ಚಿತ್ರಗಳನ್ನು ನೀಡಬೇಕು ಎನ್ನುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಕೆಲವು ನಾನಾ ಕಾರಣದಿಂದ ಅಂದುಕೊಂಡ ಸಮಯಕ್ಕೆ ಆಗೋದಿಲ್ಲ. ಒಂದೇ ಚಿತ್ರಕ್ಕಾಗಿ ಎರಡು ಮೂರು ವರ್ಷ ಮನೆಯಲ್ಲಿ ಕುಳಿತುಕೊಳ್ಳಲೂ ಇಷ್ಟವಿಲ್ಲ. ಈ ವರ್ಷ “ಬಿಲ್ಲಾ ರಂಗ ಬಾಷಾ” ಚಿತ್ರದ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ. ಈ ವರ್ಷ ಸಿನಿಮಾ ಬರಲೇಬೇಕು ಅಂದುಕೊಂಡಾಗ ಹುಟ್ಟಿಕೊಂಡ ಸಿನಿಮಾ ಮಾರ್ಕ್. ಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಮಾಡುವಾಗ ಚೆನ್ನೈನಲ್ಲಿ ಪ್ರವಾಹ ಬಂದು ಹಾಕಿದ್ದ ಸೆಟ್ ಹಾಳಾಯ್ತು ಇದರಿಂದ ಒಂದೂವರೆ ತಿಂಗಳು ತಡೆ ಅಯ್ತು. ಕೆಲವೊಮ್ಮೆ ತಡ ಆಗುತ್ತೆ. ಇನ್ನು ಕೆಲವೊಮ್ಮೆ ಅಂದುಕೊಂಡ ಸಮಯಕ್ಕೆ ಬರಲು ಸಾಧ್ಯವಾಗುತ್ತಿದೆ.
ವಿಜಯ್ ಹೇಳಿದ ಕಥೆ ಇಷ್ಠ ಆಯ್ತು:
ಈ ವರ್ಷ ಸಿನಿಮಾ ಬರಬೇಕು ಅಂದುಕೊಂಡಾಗ ಕನ್ನಡದ ಇಬ್ಬರು ನಿರ್ದೇಶಕು ಇನ್ನು ಕಥೆಯ ಹಂತದಲ್ಲಿದ್ದೇವೆ ತಡ ಆಗುತ್ತೆ, ಸಮಯ ಬೇಕು ಅಂದಾಗ, ವಿಜಯ್ ಕಾರ್ತಿಕೇಯ ಹೇಳಿದ ಕಥೆ ಇಷ್ಟ ಆಯಿತು, ಅವರೂ ಕೂಡ ಸಿದ್ದವಿದ್ದರು, ಹೀಗಾಗಿ ಸಿನಿಮಾ ಆರಂಭ ಮಾಡಿದೆವು. ಚೆನ್ನೈ, ತೂತುಕುಡಿ, ಪಾಂಡಿಚೆರಿಯಲ್ಲಿ ಚಿತ್ರೀಕರಣ ಮಾಡುವ ವೇಳೆ ತಡ ಆಗುತ್ತಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ. ಎಲ್ಲರಿಗೂ ಬೇಗ ಮುಗಿಸಬೇಕು ಎನ್ನುವ ಸಲಹೆ ನೀಡಲಾಯಿತು. ಇದಕ್ಕೆ ಎಲ್ಲಾ ಕಲಾವಿದರು ಹಗಲು ರಾತ್ರಿ ಕೆಲಸ ಮಾಡಿದ್ದರೆ. ಜೊತೆಗೆ ಚಿತ್ರತಂಡ ಕೂಡ. ಹೀಗಾಗಿ ಚಿತ್ರ ಡಿಸೆಂಬರ್ 25ಕ್ಕೆ ತೆರೆಗ ಬರಲು ಸಾಧ್ಯವಾಗಿದೆ. ಬೇಗ ಬರಬೇಕೆನ್ನುವ ಉದ್ದೇಶದಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಸಿನಿಮಾ ಮತ್ತು ಸ್ಕ್ರೀನ್‍ಗೆ ಪ್ರಮಾಣಿಕವಾಗಿದ್ದೇನೆ

• ಎರಡೇ ಸಿನಿಮಾ ಬರ್ತಾ ಇರೋದು.
ಒಟಿಟಿಯಲ್ಲಿ ನೋಡಿ ಹತ್ತಾರು, ನೂರಾರು ಸಿನಿಮಾಗಳು ಪೈಪೋಟಿ ಮೇಲೆ ಬರುತ್ತಿವೆ, ನಾವು ಬರ್ತಾ ಇರೋದು ನಾವು ಮತ್ತು 45 ಚಿತ್ರ ಅಷ್ಟೇ. ಹೀಗಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
• ಮಗಳ ಆಯ್ಕೆ. ಆಕೆಯ ದಾರಿಯಲ್ಲಿ ಸಾಗಲಿ
ಮಾರ್ಕ್ ಚಿತ್ರದಲ್ಲಿ ಮಗಳು ಸಾನ್ವಿ ಹಾಡಿದ್ದಾರೆ. ಅದು ಆಕೆಯ ಆಯ್ಕೆ.ಅವಳ ದಾರಿಯಲ್ಲಿ ಅವಳು ಹೋಗಲಿ, ನನ್ನ ಮಗಳು ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವಕಾಶ ಕೊಟ್ಟಿಲ್ಲ, ಆಕೆಯ ಪ್ರತಿಭೆಯ ಚಿತ್ರದಲ್ಲಿ ಹಾಡಿಸಿದೆ.
ಪತ್ನಿ ವಿತರಣೆ ಮಾಡಲು ರಾಕ್‍ಲೈನ್ ವೆಂಕಟೇಶ್ ಕಾರಣ
ಮಾರ್ಕ್ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಪತ್ನಿ ಪ್ರಿಯಾ ಆಯ್ಕೆ. ಅವರು ದುಡಿದ ಹಣದಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಅವರಿಗೆ ಕೆ ಆರ್ ಜಿ ಸಂಸ್ಥೆ ಸಾಥ್ ನೀಡಿದೆ. ಪತ್ನಿ ಪ್ರಿಯಾ ವಿತರಣೆ ಮಾಡಲು ಹಿರಿಯ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಕಾರಣ. ವಿತರಣೆ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಜೊತೆಗೆ ಈ ಹಿಂದೆ ತಮ್ಮ ಬಳಿ ಮ್ಯಾನೇಜರ್ ಅಗಿದ್ದ ಜಾಕ್ ಮಂಜು ಕೂಡ ಕಾರಣ.
• ನಟರು ಕೈಜೋಡಿಸಿದರೆ ನಿರ್ಮಾಪಕರಿಗೂ ಬಲ
ನಿರ್ಮಾಪಕ ಜೊತೆ ನಟರು ಕೈ ಜೋಡಿಸಿದರೆ ನಿರ್ಮಾಪಕರಿಗೂ ಬಲ ಬರುತ್ತದೆ. ಯಾವುದೇ ಆತಂಕವಿಲ್ಲದೆ ಗುಣಮಟ್ಟದ ಚಿತ್ರ ಕೊಡಲು ಕೆಲಸ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ನಾನು ಮಾರ್ಕ್ ಸಿನಿಮಾ ಜೊತೆ ಕೈಜೋಡಿಸಿದ್ದೇನೆ. ದುಡ್ಡು ಹೋದರೆ ನನ್ನದು ಹೋಗುತ್ತದೆ. ಆದರೆ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ, ನಮ್ಮನ್ನು ನಂಬಿದ ಪ್ರೇಕ್ಷಕರಿಗೆ ಉತ್ತಮ ಚಿತ್ರ ನೀಡುವುದು ನಮ್ಮ ಗುರಿ

ಚಿತ್ರಮಂದಿರಲ್ಲಿ ಚಿತ್ರ ನೋಡಲ್ಲ
ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಮೊದಲ ಶೋ ನೋಡುವುದಿಲ್ಲ,. ಅದಕ್ಕೆ ಕಾರಣಗಳೂ ಇವೆ. ನಾವು ಸಿನಿಮಾ ನೋಡಲು ಹೋದರೆ ಪ್ರೇಕ್ಷಕರಿಗೆ ಸಿನಿಮಾ ನೋಡಲು ಆಗಲ್ಲ, ಅಭಿಮಾನಿಗಳು ನಮ್ಮ ಕಡೆಯೇ ಗಮನ ಹರಿಸಿರುತ್ತಾರೆ. ಜೊತೆಗೆ ತಳ್ಳಾಟ ನೂಕಾಟದಲ್ಲಿ ಏನಾದರೂ ಸಮಸ್ಯೆ ಆದರೆ ಎನ್ನುವ ಕಾರಣಕ್ಕೆ ಸಿನಿಮಾ ಪ್ರೇಕ್ಷಕರ ಜೊತೆ ನೋಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು
ಮುಂದಿನ ವರ್ಷ ಎರಡು ಸಿನಿಮಾ ಗ್ಯಾರಂಟಿ
ಮುಂದಿನ ವರ್ಷ ಎರಡು ಸಿನಿಮಾ ಬರಲಿದೆ. ಅದರಲ್ಲಿ ರೋಮ್ ಕಾಮ್ ಕೂಡ ಸೇರಿದೆ. ಮುಂದಿನ ವರ್ಷಾಂತ್ಯಕ್ಕೆ ಬಿಲ್ಲಾ ರಂಗ ಭಾಷಾ ಸಿನಿಮಾ ತೆರೆಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ನಿರ್ದೇಶಕ ಪ್ರೇಮ್ ಜೊತೆ ಸಿನಿಮಾ ಇದೆ. ಅವರು ಈ ಬಾರಿ ಮೈಥಾಲಜಿಕಲ್ ಕತೆ ಮಾಡಿಕೊಂಡಿದ್ದಾರೆ. ಕನ್ನಡದ ಜೊತೆಗೆ ತೆಲುಗು ಸಿನಿಮಾ ಕೂಡ ಇದೆ
ಸಿನಿಮಾ ಪೂರ್ಣ ಆಗುವ ತನಕ ಸಮಯ
ಚಿತ್ರದ ಚಿತ್ರೀಕರಣಕ್ಕೆ 60 ಇಲ್ಲ 70 ದಿನ ಡೇಟ್ ಕೊಟ್ಟು ಅಷ್ಟರಲ್ಲಿ ಮುಗಿಸಿ ಎಂದು ಒತ್ತಡ ಹೇರಲ್ಲ. ಬೇಕಾದರೆ ಹಗಲು ರಾತ್ರಿ ಸಿನಿಮಾ ಮಾಡುತ್ತೇವೆ ಅಂದುಕೊಂಡಂತೆ ಚೆನ್ನಾಗಿ ಬರಬೇಕು. ಮಾರ್ಕ್ ಸಿನಿಮಾಕ್ಕೆ 120 ದಿನ ಚಿತ್ರೀಕರಣ ಮಾಡಲಾಗಿದೆ. ಕೆಲವೊಮ್ಮ ನಮ್ಮ ಜೊತೆಗೆ ಕೆಲಸ ಮಾಡುವ ಕಲಾವಿದರಿಗೆ ಬೇರೆ ಚಿತ್ರದ ಕಮಿಟ್‍ಮೆಂಟ್ ಇದ್ದರೆ ಅದಕ್ಕೆ ತಕ್ಕಂತೆ ನಾವೂ ಕೆಲಸ ಮಾಡಬೇಕಾಗುತ್ತದೆ. ಚಿತ್ರದ ಕಲಾವಿದರು ನನ್ನೊಂದಿಗೆ ಹಗಲು ರಾತ್ರಿ ಕೆಲಸ ಮಾಡಿದ್ದಾರೆ.

ವಾರದ ಕಥೆ, ಕಿಚ್ಚನ ಜೊತೆ ಮುಂಚೆಯೇ ಚಿತ್ರೀಕರಣ
ಸಿನಿಮಾ ಬಿಡುಗಡೆಯಾದಾಗ ಅದರ ಪ್ರಚಾರ, ಚಿತ್ರಮಂದಿರಗಳ ಬೇಟಿ ಇರುವ ಕಾರಣಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ಒಮ್ಮೊಮ್ಮೆ ಬೇಗ ಚಿತ್ರೀಕರಣ ಮಾಡಬೇಕಾಗುತ್ತದೆ. ಸಿನಿಮಾನೂ ಮುಖ್ಯ ಅಲ್ಲವೆ ಎಂದರು ಕಿಚ್ಚ ಸುದೀಪ್.

