The war is against piracy, not against any actor or fan - Kiccha Sudeep

ಪೈರಸಿ ವಿರುದ್ದ ಯುದ್ದವೇ ಹೊರತು ಯಾವುದೇ ನಟ,ಅಭಿಮಾನಿಗಳ ವಿರುದ್ದ ಅಲ್ಲ- ಕಿಚ್ಚ ಸುದೀಪ್ - CineNewsKannada.com

ಪೈರಸಿ ವಿರುದ್ದ ಯುದ್ದವೇ ಹೊರತು ಯಾವುದೇ ನಟ,ಅಭಿಮಾನಿಗಳ ವಿರುದ್ದ ಅಲ್ಲ- ಕಿಚ್ಚ ಸುದೀಪ್

“ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ “ಯುದ್ದಕ್ಕೆ ಸಿದ್ದ..,ಮಾತಿಗೆ ಬದ್ದ” ಎಂದಿರುವುದು ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ವಿರುದ್ದವೇ ಹೊರತು. ಯಾವೊಬ್ಬ ನಟ ಮತ್ತು ಅವರ ಅಭಿಮಾನಿಗಳನ್ನುದ್ದೇಶಿಸಿ ಅಲ್ಲ., ಚಿತ್ರರಂಗದಲ್ಲಿ 1 ಲಕ್ಷ ಮಂದಿ ಇದ್ದಾರೆ ಅವರು ಪ್ರತಿಕ್ರಿಯಿಸಿಲ್ಲ. ಒಬ್ಬರ ಹೇಳಿಕೆಗೆ ಉತ್ತರ ನೀಡಲ್ಲ.. ಒಂದು ವೇಳೆ ನನ್ನನ್ನು ಉದ್ದೇಶಿಸಿ ಹೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ.. ಹೀಗ್ಯಾಕೆ ಹೇಳಿದ್ರಿ ಅಂತ ಅವರನ್ನೇ ಕೇಳಿ….”

ನಟ ಚಾಲೆಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಅಭಿಮಾನಿಗಳ ವಿರುದ್ದ ಕಿಚ್ಚ ಸುದೀಪ್ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ವಿಜಯಲಕ್ಷ್ಮಿ ದರ್ಶನ್ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿದ್ದು ಹೀಗೆ.

30 ವರ್ಷಗಳ ಚಿತ್ರ ಜೀವನದಲ್ಲಿ ಯಾರ ಬಗ್ಗೆಯೂ ಮಾತನಾಡಿಲ್ಲ ಮತ್ತು ಮಾತನಾಡುವ ಅಗತ್ಯವೂ ಇಲ್ಲ, ನಾವು ಹೋರಾಟ ಮಾಡಬೇಕಾಗಿರುವುದು ಪೈರಸಿ ವಿರುದ್ದವೇ ಹೊರತು ಯಾರೊಬ್ಬ ನಟ ಮತ್ತು ಅಭಿಮಾನಿ ವಿರುದ್ದ ಅಲ್ಲ ಎಂದು ನಟ ಕಿಚ್ಚ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದರು

ಮಾರ್ಕ್ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ಯಾವುದೇ ಕಾಂಟ್ರವರ್ಸಿ ಸೃಷ್ಠಿ ಮಾಡುವ ಉದ್ದೇಶ ಇಲ್ಲ, ಅದರ ಅಗತ್ಯವೂ ನನಗಿಲ್ಲ. ಯಾವುದೇ ವಿಷಯ ಮಾತನಾಡುವಾಗ ನನ್ನದೇ ಆದ ಮಿತಿಗಳಿವೆ.ಬೇರೊಬ್ಬರ ಬಗ್ಗೆ ಮಾತನಾಡಲು ನನಗೆ ಮೆಚ್ಯೂರಿ ಇಲ್ಲವೆ.. ಯಾವತ್ತೂ ವಿವಾದಲ್ಲಿ ಸಿಕ್ಕಿಕೊಂಡಿಲ್ಲ, ಅದರ ಅಗತ್ಯವೂ ಇಲ್ಲ, ಹಾಗೊಂದು ವೇಳೆ ಮಾಡಿದ್ದರೆ ಇಷ್ಟೊತ್ತಿಗೆ ಎಷ್ಟು ವಿವಾದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗಿತ್ತೋ ಲೆಕ್ಕವೇ ಇರುತ್ತಿರಲಿಲ್ಲ..

ಚಿತ್ರದ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಹಾಡು, ಕುಣಿತ, ಮಾತಿಗೆ ಸಕ್ಕರೆ ಸವರಿದ ಹಾಗೆ ಮಾತನಾಡಿ ಬರಬಹುದಿತ್ತು ಆದರೆ ಹಾಗೆ ಮಾಡಲಿಲ್ಲ, ಪೈರಸಿ ವಿರುದ್ದ ನಿರ್ಮಾಪಕರಿಗೆ ಮತ್ತು ಚಿತ್ರರಂಗಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಪ್ರಸ್ತಾಪ ಮಾಡಿ ಯುದ್ದ ಸಾರುವುದಾಗಿ ಹೇಳಿದ್ದೇನೆ. ಹೀಗಿದ್ದರೂ ಯಾರೊ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಎಂದಾಗ ಅವರ ಬಗ್ಗೆ ಉತ್ತರ ನೀಡುವ ಅಗತ್ಯವಿಲ್ಲ. ಅವರೇನು ನನ್ನ ಹೆಸರು ತೆಗೆದು ಮಾತನಾಡಿಲ್ಲ. ಹಾಗೊಂದು ವೇಳೆ ನನ್ನ ಹೆಸರೇಳಿ ಮಾತನಾಡಿದ್ದರೆ ಉತ್ತರ ಕೊಡುತ್ತಿದ್ದೆ.

ಪೈರಸಿ ವಿರುದ್ದ ಶೇಕಡಾ 80 ರಷ್ಟು ಯಶಸ್ವಿ ಹೋರಾಟ ಮಾಡುತ್ತೇವೆ. ಇದಕ್ಕೆ ಸರ್ಕಾರದ ಬೆಂಬಲವೂ ಬೇಕು, ಜೊತೆಗೆ ಪೈರಸಿ ತಡೆಯಲು ನಾವು ಯಾರನ್ನು ನೇಮಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಆಗುತ್ತೆ. ಕ್ರಿಮಿನಲ್‍ಗಳು ಕಾನೂನಿಗಿಂತ ಸಾಕಷ್ಟು ಮುಂದೆ ಇದ್ದಾರೆ, ಅದನ್ನು ಪತ್ತೆ ಮಾಡಿ ಪೈರಸಿ ತಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು ನಟ ಕಿಚ್ಚ ಸುದೀಪ್

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin