“ಮಾರ್ಕ್”. ಚಿತ್ರದ ‘ಮಸ್ತ್ ಮಲೈಕಾ’ ಹಾಡು ಬಿಡುಗಡೆ : ನಿಶ್ವಿಕಾ ಜೊತೆ ಹೆಜ್ಜೆ ಹಾಕಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಮಾರ್ಕ್ ಸಿನಿಮಾ ಇದೇ ತಿಂಗಳ 25ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ” ಮಾರ್ಕ್” ಚಿತ್ರದ ಸ್ಪೆಷಲ್ ಹಾಡು “ಮಸ್ತ್ ಮಲೈಕಾ” ಹಾಡಿನಲ್ಲಿ ನಿಶ್ವಿಕಾ ನಾಯ್ಡು ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದಾರೆ.
ಈ ಹಾಡಿನಲ್ಲಿ ಕಿಚ್ಚ ಸುದೀಪ್ ಹಾಗೂ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಕುಣಿದಿದ್ದಾರೆ. ಮಲೈಕಾ ಆಗಿ ನಿಶ್ಚಿಕಾ ಕಾಣಿಸಿಕೊಂಡಿದ್ದಾರೆ.
ಅನೂಪ್ ಭಂಡಾರಿ ಮಸ್ತ್ ಮಲೈಕಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗೂ ನಕಾಶ್ ಅಜೀಜ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಮಾರ್ಕ್ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಅಸನ ಮಾಡಿದ್ದು ಮ್ಯಾಕ್ಸ್ ಚಿತ್ರವನ್ನು ಸುದೀಪ್ ಜೊತೆಗೆ ಮಾಡಿದ್ದಾರೆ. ಚಿತ್ರದಲ್ಲಿ ದೀಪ್ಷಿಕಾ, ನವೀನ್ ಚಂದ್ರ, ಗುರು ಸೋಮಸುಂರಂ, ರೋಶಿನಿ ಪ್ರಕಾಶ್, ಗೋಪಾಲ್ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ ಅಭಿನಯಿಸಿದ್ದಾರೆ.
ಸತ್ಯ ಜ್ಯೋತಿ ಫಿಲ್ಮ್ ಹಾಗೂ ಕಿಚ್ಚ ಕ್ರಿಯೇಷನ್ ಬ್ಯಾನರ್ ನಡಿ ಸಿನಿಮಾ ತಯಾರಾಗಿದೆ.

