“ಕಿರಿಕ್ ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಸಚಿವ ಚಲುವರಾಯ ಸ್ವಾಮಿ
ಯುವ ಪ್ರತಿಭಾನ್ವಿತ ತಂಡದ ಹೊಸ ಚಿತ್ರ ” ಕಿರಿಕ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಪ್ರೀತಿ, ಪ್ರೇಮ,ಥ್ರಿಲ್ಲರ್ ಅಂಶಗಳನ್ನು ಚಿತ್ರ ಒಳಗೊಡಿದೆ.

ಕೃಷಿ ಸಚಿವ ಚಲುವರಾಯ ಸ್ವಾಮಿ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.ಈ ವೇಳೆ ಹಾಡು ಬಿಡುಗಡೆ ಮಾಡಿದರು.ಗೀತ ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ನಟ ರವಿ ಚೇತನ್, ಸಚಿನ್ ಮತ್ತಿತರು ಈ ಕ್ಷಣಕ್ಕೆ ಸಾಕ್ಷಿಯಾದರು
ನಾಗತಿಹಳ್ಳಿ ಗಂಗಾಧರಗೌಡ ನಿರ್ದೇಶನದಲ್ಲಿ ಮೂಡಿ ಬಂದಿರುವ ” ಕಿರಿಕ್ ” ಚಿತ್ರದಲ್ಲಿ ನಾನು ಎದುರಿಸಲು ಸಿದ್ದ ಎನ್ನುವ ಅಡಿ ಬರಹ ಹೊಂದಿದೆ. ರವಿ ಶೆಟ್ಟಿ ಮತ್ತು ಪೂಜಾ ರಾಮಚಂದ್ರ ಚಿತ್ರದಲ್ಲಿ ನಾಯಕ- ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಚಲುವರಾಯ ಸ್ವಾಮಿ , ಚಿತ್ರದ ಬಹುತೇಕ ತಂಡ ನಾಗಮಂಗಲ ಮೂಲದವರು ಆಗಿದ್ದಾರೆ ಒಳ್ಳೆಯ ಸಿನಿಮಾ ಆಗುವ ನಿರೀಕ್ಷೆ ಇದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ..ಜನರಿಗೆ ಉಪ ಯೋಗವಾಗಲಿದೆ ಪ್ರಯತ್ನ ಯಶಸ್ವಿ ಅಗಲಿ ಎಂದು ಹಾರೈಸಿದರು
ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುವ ನಾಯಕ, ಸದಾ ಕಿರಿಕ್ ಮಾಡೋ ನಾಯಕಿ ಇಬ್ಬರ ಮಧ್ಯೆ ಕಿರಿಕ್, ತರ್ಲೆಯಿಂದಲೇ ಸೂರ್ಯ ಮತ್ತು ಅಮ್ಮು ನಡುವೆ ಹುಟ್ಟಿದ ಪ್ರೀತಿ ಆನಂತರ ಯಾವ ಹಂತ ತಲುಪುತ್ತದೆ, ಕೊನೆಗೇನಾಯಿತು ಎನ್ನುವುದೇ ಕಿರಿಕ್ ಚಿತ್ರದ ಕಥಾಹಂದರ.

ಚಿತ್ರಕ್ಕಾಗಿ ಕಾರ್ತೀಕ್ ವೆಂಕಟೇಶ್ ರಚಿಸಿದ ತಾಯಿ ಸೆಂಟೆಮೆಂಟ್ ಹಾಡನ್ನು ಡಾ.ವಿ. ನಾಗೇಂದ್ರಪ್ರಸಾದ್ ಬಿಡುಗಡೆ ಮಾಡಿ, ನಂತರ ಮಾತನಾಡಿ ನಾನು ಕೂಡ ನಾಗಮಂಗಲದವನೇ ಆಗಿದ್ದು ಆರಂಭದಿಂದಲೂ ಚಿತ್ರತಂಡದ ಕೆಲಸ ನೋಡುತ್ತ ಬಂದಿದ್ದೇನೆ. ಒಂದಲ್ಲ ಒಂದು ಕಿರಿಕ್ ಗಳನ್ನು ಎದುರಿಸುತ್ತಲೇ ಬಂದ ಚಿತ್ರ ಫೈನಲ್ಲಾಗಿ ಟ್ರೈಲರ್ ರಿಲೀಸ್ ಮಾಡುವ ಹಂತ ತಲುಪಿದೆ, ಈ ಸಿನಿಮಾ ಖಂಡಿತ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು.
ನಾಯಕ ರವಿ ಶೆಟ್ಟಿ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿದರು. ನಿರ್ದೇಶಕ ಗಂಗಾಧರ ಗೌಡ ಮಾತನಾಡುತ್ತ ಒಂದು ವಿಭಿನ್ನವಾದ ಪ್ರೇಮಕಥೆಯನ್ನು ನಮ್ಮ ಕಿರಿಕ್ ಚಿತ್ರದಲ್ಲಿ ಕಾಣಬಹುದು. ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ. ಪ್ರೇಕ್ಷಕರು ಇಷ್ಟಪಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.
ಮುಕ್ತಿನಾಗ ಫಿಲಂಸ್ ಅರ್ಪಿಸುವ ಈ ಚಿತ್ರವನ್ನು ನಾಗರಾಜ್ ಎಸ್. ನಿರ್ಮಿಸಿದ್ದಾರೆ. ಹರೀಶ್ ಶೆಟ್ಡಿ ಸಹ ನಿರ್ಮಾಪಕರಾಗಿ ಕೈಜೋಡೊಸಿದ್ದಾರೆ. ಆರ್.ಬಿ. ಭರತ್ ಸಂಗೀತ ಸಂಯೋಜನೆ, ಎಸ್.ಕೀರ್ತಿವರ್ಧನ್ ಛಾಯಾಗ್ರಹಣ, ಭಾರ್ಗವ್ ಕೆ.ಎಂ. ಸಂಕಲನ ಹಾಗೂ ವಿಎಫ್ ಎಕ್ಸ್ ಈ ಚಿತ್ರಕ್ಕಿದೆ.

ರಾಕೆಟ್ ವಿಕ್ರಂ ಹಾಗೂ ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದ್ದು ಬಲ ರಾಜವಾಡಿ, ಹೊನ್ನವಳ್ಳಿ ಕೃಷ್ಣ, ಕುರಿ ರಂಗ, ಸದಾನಂದ ಕಾಳೆ, ರಾಧಿಕಾ ಶೆಟ್ಟಿ, ಜ್ಯೋತಿ ಮರೂರು ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.

