Review: ಗಂಡಸು ಗರ್ಭಿಣಿಯಯಾದ ಕಥೆ,ವ್ಯಥೆಯ ಚಿತ್ರ ” ನಿಮಗೊಂದು ಸಿಹಿ ಸುದ್ದಿ
ಚಿತ್ರ : ನಿಮಗೊಂದು ಸಿಹಿಸುದ್ದಿ
ನಿರ್ದೇಶನ :ರಘು ಭಟ್, ಸುಧೀಂದ್ರ ನಾಡಿಗೇರ್
ತಾರಾಗಣ : ರಘು ಭಟ್, ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್, ವಿಜಯ್ ರಾಘವೇಂದ್ರ ಮತ್ತಿತರರು
ರೇಟಿಂಗ್ : *** 3.5/ 5
ಜಗತ್ತಿನಲ್ಲಿ ಎಲ್ಲಿಯದರೂ ಕೇಳಿದ್ದೀರಾ ಅಥವಾ ಕಂಡಿದ್ದೀರಾ.. ಕೇಳಿದ್ದರೂ ತೀರಾ ಅಪರೂಪ ಮತ್ತು ವಿರಳ.ಅಂತಹ ಸಂಗತಿಯನ್ನು ಚಿತ್ರದ ಮೂಲಕ ಜನರ ಮುಂದಿಡಲಾಗಿದೆ. ಅದುವೇ ” ನಿಮಗೊಂದು ಸಿಹಿ ಸುದ್ದಿ”.
ನಮಗ್ಯಾಕೆ ಸಿಹಿ ಸುದ್ದಿ ಎನ್ನುವ ಪ್ರಶ್ನೆಗಳು ಎದುರಾದರೆ ಚಿತ್ರದ ಕಥೆ, ಅದನ್ನು ತೆರೆಗೆ ತಂದಿರುವ ಶೈಲಿ, ನಿರೂಪಣೆ ಮೂಲಕ ಚಿತ್ರ ಗಮನ ಸೆಳೆದಿದೆ. ಚಿತ್ರದ ಕುತೂಹಲ ಏನು ಎನ್ನುವುದೇ ಕಥನ ಕುತೂಹಲ.
ಗಂಡಸು ಗರ್ಭಿಣಿಯಾಗುವ ವಿಷಯವನ್ನು ಮುಂದಿಟ್ಟುಕೊಂಡು ತೆರೆಗೆ ತಂದಿರುವ ಚಿತ್ರ. ಗಂಡಸು ಹೇಗೆ ಗರ್ಭಿಣಿ ಆಗಲು ಸಾದ್ಯ. ಅದು ಹೇಗೆ ಎನ್ನುವ ಅನುಮಾನ ಗೊಂದಲ ಮತ್ತು ಕುತೂಹಲ ಗಳಿಗೆ ಚಿತ್ರ ನೋಡಿದರೆ ಚೆನ್ನ.
ಗಂಡು ಗರ್ಭ ಧರಿಸಿದಾಗ ಎದುರಾಗುವ ಸಂಕಷ್ಡ, ಸಮಸ್ಯೆಗಳನ್ನು ಹಾಸ್ಯ ಮಿಶ್ರಿತವಾಗಿ ಪ್ರೇಕ್ಷಕರ ಮುಂದೆ ಕಟ್ಟಿಕೊಟ್ಟಿರುವ ಚಿತ್ರ ಇದು.
ಪ್ರಸಿದ್ದ ಮಾಸ್ಟರ್ ಚೆಫ್ ಎಂಬ ಹೆಗ್ಗಳಿಕೆಗೆ ಪಾತ್ರರದ ಅರ್ಜುನ್ ಹೆಬ್ಬಾರ್ ( ರಘು ಭಟ್) ವಿಭಿನ್ನ ಆರೋಗ್ಯಕರ ಅಡುಗೆ ತಯಾರಿಸಿ ಎಲ್ಲರಿಂದ ಸೈ ಎನಿಸಿಕೊಂಡವ. ಹುಡುಗಿಯರ ವಿಚಾರದಲ್ಲೂ ಚಾಣಕ್ಯ ಜಾಹೀರಾತು ಚಿತ್ರೀಕರಣದ ನೆಪದಲ್ಲಿ ಅಮೋರ್ ಫುಡ್ ಪ್ರಾಡಕ್ಟ್ ನ ಸಿಇಒ ಅನುಷಾ (ಕಾವ್ಯಶೆಟ್ಟಿ) ಳನ್ನ ಭೇಟಿ ಮಾಡುವ ಮೂಲಕ ಸ್ನೇಹ, ಸಲುಗೆ ಪ್ರೀತಿಯ ಅನುರಾಗ ಅರಳಲಿದೆ.
ಈ ನಡುವೆ ಬ್ಯಾಕ್ ರೌಂಡ್ ಕಥೆ ಮತ್ತಷ್ಟು ಕುತೂಹಲ ಕೆರಳಿಸಲಿದೆ. ಪ್ರಸವ ವೇದನೆಯಿಂದ ನರಳುವ ಅರ್ಜುನ್ ಮುದ್ದಾದ ಮಗು ನೀಡುತ್ತಾನೆ. ಅದು ಹೇಗೆ , ಹೇಗಾಯಿತು ಆ ಮಗುವಿನ ಲಾಲನೆ ಪಾಲನೆ ಹೇಗೆ ಎನ್ನುವ ಸಂಗತಿಗಳು ಕುತೂಹಲ ಕೆರಳಿಸಿದೆ.
ಅರ್ಜುನ ಪರದಾಟ ಕಂಡು ಪಕ್ಕದ ಮನೆಯ ಶೀಲಾ ಆಂಟಿ (ಹರಿಣಿ ಶ್ರೀಕಾಂತ್) ಬೆಂಬಲಕ್ಕೆ ನಿಲ್ಲುತ್ತಾರೆ. ಈ ನಡುವೆ ವೈದ್ಯ ವಿಕಾಸ್ (ವಿಜಯ್ ರಾಘವೇಂದ್ರ) ಮನುಷ್ಯನ ಮೇಲಿನ ಡ್ರಗ್ಸ್ ಪ್ರಯೋಗದ ಗುಟ್ಟು ,ರೋಚಕ ತಿರುವು ಪಡೆಯಲಿದೆ.
ಗಂಡು ಗರ್ಭಿಣಿಗೆ ಕಾರಣ ಯಾರು, ನಿಜಕ್ಕೂ ಆತ ಗರ್ಭಿಣಿಯಾ, ಇದರ ಉದ್ದೇಶ ಏನು ಎನ್ನುವ ಕುತೂಹಲ ಮತ್ತು ರೋಚಕತೆಯನ್ನು ಚಿತ್ರದ ಮೂಲಕ ಪರಿಣಾಮಕಾರಿಯಾಗಿ ನಿರ್ದೇಶಕರು ತೆರೆಗೆ ತಂದಿದ್ದಾರೆ .ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ಈ ಚಿತ್ರದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ಭಿನ್ನವಾಗಿದೆ. ಯುವ ಮನಸುಗಳ ಆಲೋಚನೆ , ಬದುಕಿನ ಶೈಲಿ, ತಪ್ಪು ನಿರ್ಧಾರದ ಬಗ್ಗೆ ಎಚ್ಚರಿಸುವ ಅಂಶವನ್ನು ತೆರೆಯ ಮೇಲೆ ತಂದಿದ್ದಾರೆ ,ಚಿತ್ರ ಗಮನ ಸೆಳೆದಿದೆ.
ನಾಯಕನಾಗಿ ರಘು ಭಟ್ ಗಂಡು ಗರ್ಭಿಣಿಯಾಗಿ ತನ್ನ ಹಾವ ಭಾವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು, ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.
ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್ ,ಸುಜಯ್ ಶಾಸ್ತ್ರಿ ಶಿಲ್ಪ ಶೈಲೇಶ್ ,ವಿಜಯ್ ರಾಘವೇಂದ್ರ ಮತ್ತಿತರು ಪಾತ್ರಕ್ಕೆ ಜೀವ ತುಂಬಿಸಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

