Review: A cute love story film "Vishnupriya"

Reviw: ಮುದ್ದಾದ ಪ್ರೇಮಕಥೆಯ ಚಿತ್ರ ” ವಿಷ್ಣುಪ್ರಿಯಾ” - CineNewsKannada.com

Reviw: ಮುದ್ದಾದ ಪ್ರೇಮಕಥೆಯ ಚಿತ್ರ ” ವಿಷ್ಣುಪ್ರಿಯಾ”

ಚಿತ್ರ: ವಿಷ್ಣುಪ್ರಿಯ
ನಿರ್ದೇಶನ : ವಿಕೆ ಪ್ರಕಾಶ್
ತಾರಾಗಣ: ಶ್ರೇಯಸ್ ಮಂಜು, ಪ್ರಿಯಾ ವಾರಿಯರ್, ಸುಚೇಂದ್ರ ಪ್ರಸಾದ್, ಚಿತ್ಕಲಾ ಬಿರಾದಾರ್, ಅಶ್ವಿನಿ, ಅಚ್ಯುತ್ ಮತ್ತಿತರರು
ರೇಟಿಂಗ್ : *** 3.5/5

ಕನ್ನಡಲ್ಲಿ ಇತ್ತೀಚೆಗೆ ಹೊಸತನದ ಕಥೆಗಳು ಮತ್ತು ಚಿತ್ರಗಳು ತೆರೆಗೆ ಬರುತ್ತಿವೆ, ಈ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಆ ಸಾಲಿಗೆ ಸೇರಬಹುದಾದ ಮತ್ತೊಂದು ಚಿತ್ರ “ವಿಷ್ಣು ಪ್ರಿಯಾ”.

90ರ ದಶಕದ ಪರಿಶುದ್ದ ಪ್ರೇಮಕಥೆಯನ್ನು ನಿರ್ದೇಶಕ ವಿಕೆ ಪ್ರಕಾಶ್ ತೆರೆಗೆ ಕಟ್ಟಿಕೊಟ್ಟಿದ್ದಾರೆ. ಯಾವುದೇ ಮುಜುಗರವಿಲ್ಲದೆ ಇಡೀ ಮನೆ ಮಂದಿ ನೋಡಬಹುದಾದ ಸುಂದರ ಪ್ರೇಮಕಥೆಯ ಚಿತ್ರ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಕಥಾ ವಸ್ತು ಹೊಸದು.

ಚಿತ್ರ ಆರಂಭವಾಗಿ ಸೆನ್ಸಾರ್ ಆಗಿ ಮೂರು ವರ್ಷ ಕಳೆದಿದೆಯಾದರೂ ಚಿತ್ರದ ಕಥಾ ವಸ್ತು ಎಲ್ಲ ಕಾಲಕ್ಕೂ ಸಲ್ಲಸಲಿದೆ. ಚಿತ್ರ ಯಾವಾಗ ಚಿತ್ರೀಕರಣ ಆಯುತು, ಸೆನ್ಸಾರ್ ಆಯುತು ಎನ್ನುವುದು ಯತ್ತಮ ಕಥೆ ಮತ್ತು ಕಥಾವಸ್ತುಗೆ ಒಪ್ಪಿಕೊಳ್ಳುವ ಪಾತ್ರಗಳು ಸಿಕ್ಕಾಗ ಅದು ಲೆಕ್ಕಕ್ಕೆ ಬರುವುದಿಲ್ಲ, ವಿಷ್ಣುಪ್ರಿಯಾ ಕೂಡ ಇಂತಹದೊಂದು ಚಿತ್ರ.

ಕಾಲೇಜಿನಲ್ಲಿ ಓದುವ ವಿಷ್ಣು (ಶ್ರೇಯಸ್ ಮಂಜು) ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ, ಅದರಲ್ಲಿಯೂ ಹೆಣ್ಣು ಮಕ್ಕಳ ವಿಷಯಕ್ಕೆ ಯಾರೇ ಬಂದರೂ ಸಹಿಸದ ವ್ಯಕ್ತಿತ್ವ, ಇಂತಹ ವಿಷ್ಣು ಮೇಲೆ ಅದೇ ಕಾಲೇಜಿನ ಹುಡುಗಿ ಪ್ರಿಯಾ ( ಪ್ರಿಯಾ ವಾರಿಯರ್) ಮನಸೋಲುತ್ತಾಳೆ. ವಿಷ್ಣು ತನ್ನ ಗೆಳೆಯನಿಗೆ ಪ್ರಿಯಾ ಬಳಿ ಪ್ರೀತಿಯ ಸಂದೇಶ ತಲುಪಿಸಲು ಹೋಗಿ ಆತನೇ ಪ್ರೀತಿಯಲ್ಲಿ ಸಿಲುಕುವಂತಹುದು.

ಆರಂಭದಲ್ಲಿ ಎಲ್ಲವೂ ಸಲೀಸು ಎನ್ನುವಾಗಲೇ ಇವರಿಬ್ಬರ ಪ್ರೀತಿ ಮನೆಯರಿಗೆ ಗೊತ್ತಾಗಿ ಹುಡುಗಿಯ ಅಪ್ಪ, ರಂಪ ರಾಮಾಯಣ ಮಾಡ್ತಾನೆ. ಪ್ರಿಯಾಳನ್ನು ಬಿಟ್ಟಿರಲಾರದಷ್ಟು ಪ್ರೀತಿ ಮಾಡುವ ವಿಷ್ಣು ಆಕೆಯನ್ನು ಪಡೆಯಲು ಪ್ರಿಯಾ ಶೆಡ್‍ಗೆ ಬೆಂಕಿ ಹಾಕಲು ಹಿಂಜರಿಯದವ.

ಎರಡೂ ಕುಟುಂಬದಲ್ಲಿ ಹಾದಿ ರಂಪ ಬೀದಿ ರಂಪವಾದ ನಂತರ ಈ ನಡುವೆ ಪರೀಕ್ಷೆ ಮುಗಿಯುವ ತನಕ ಇಬ್ಬರೂ ಒಬ್ಬರಿಗೊಬ್ಬರೂ ಮಾತನಾಡುವುದು ಬೇಡ ಎನ್ನುವ ತಮ್ಮಲ್ಲಿ ಷರತ್ತು ಹಾಕಿಕೊಳ್ಳುತ್ತಾರೆ. ಪ್ರೇಮಿಗಳಿಬ್ಬರೂ ಹಾಕಿಕೊಂಡ ಷರತ್ತನ್ನು ಅವರು ಪಾಲಿಸುತ್ತಾರಾ ಇಲ್ಲ ಮುಂದೇ ಮುಂದೇನು ಎನ್ನುವುದು ಚಿತ್ರದ ಕಥನ ಕುತೂಹಲ ಅದನ್ನು ಚಿತ್ರದಲ್ಲಿ ನೋಡಿದರೆ ಒಳ್ಳೆಯದು,

ನಿರ್ದೇಶಕ ಪ್ರಕಾಶ್ ಈಗಿನ ಕಾಲಘಟ್ಟಕ್ಕೆ ಸೂಕ್ತವಾದ ಕಥೆಯನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರುಯತ್ನ ಮಾಡಿದ್ದಾರೆ. ಅದಕ್ಕೆ ನಾಯಕ ಶ್ರೇಯಸ್ ಮಂಜು ಮತ್ತು ನವ ನಾಯಕಿ ಪ್ರಿಯಾ ವಾರಿಯರ್ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ
ಇನ್ನುಳಿದಂತೆ ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಚಿತ್ಕಲಾ ಬಿರಾದಾರ್, ಅಶ್ವಿನಿ ಸೇರಿದಂತೆ ಮತ್ತಿತರರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ಸುಂದರ ಛಾಯಾಗ್ರಾಹಣ ಮನಸೂರೆಗೊಳ್ಳಉತ್ತದೆ. ನಾಯಕ ನಾಯಕಿಯಷ್ಟೇ ಪ್ರಾಕೃತಿಕ ಸೌಂದರ್ಯವನ್ನು ಛಾಯಾಗ್ರಾಹಕ ವಿನೋದ್ ಭಾರತಿ ಮತ್ತಷ್ಟು ಸುಂದರವಾಗಿ ಸೆರೆ ಹಿಡಿದ್ದಾರೆ.

ಮುದ್ದಾದ ಮುಜುಗರವಿಲ್ಲದ ಪ್ರೇಮಕಥೆಯನ್ನು ಮನೆಮಂದಿಯಲ್ಲ ಕುಳಿತು ನೋಡಬಹುದಾದ ಚಿತ್ರ ಇದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin