Review: ಮನಕಲಕುವ ಭಾವನಾತ್ಮಕ ಪಯಣ : ಎಲ್ಲೋ ಜೋಗಪ್ಪ ನಿನ್ನರಮನೆ
ಚಿತ್ರ: ಎಲ್ಲೋ ಜೋಗಪ್ಪ ನಿನ್ನರಮನೆ
ನಿರ್ದೇಶಕ ; ಹಯವದನ
ತಾರಾಗಣ: ಅಂಜನ್ ನಾಗೇಂದ್ರ, ವೆನ್ಯಾ ರೈ, ಸಂಜನಾ ದಾಸ್, ಶರತ್ ಲೋಹಿತಾಸ್ವ, ಸ್ವಾತಿ, ದಿನೇಶ್ ಮಂಗಳೂರು, ವೈಜನಾಥ್ ಬಿರಾದಾರ್,ಇಳಾ ವಿಟ್ಲಾ ಮತ್ತಿತರರು
ರೇಟಿಂಗ್: * 3.5/5

ಒಬ್ಬೊಬ್ಬರರು ಒದೊಂದು ಕಥೆ, ಒಂದೊಂದು ವ್ಯಥೆ, ಸರಳ ಸನ್ನಿಸಿದರೂ ಸಂಕೀರ್ಣ, ನೋವು, ನಲಿವು, ತಮ್ಮದೇ ಆದ ದಾರಿ, ಹುಡುಕಾಟ, ಜವಾಬ್ದಾರಿ, ಅಪ್ಪ,ಅಮ್ಮನ ಪ್ರೀತಿ, ಪ್ರೇಮ, ಜೊತೆಗೆ ಭಾವನಾತ್ಮಕ ಕಥೆಯ ಹೂರಣ ಹೊಂದಿರುವ ಮನ ಮಿಡಿಯುವ ಸುಂದರ ಪ್ರೇಮ ಕಥನ ” ಎಲ್ಲೋ ಜೋಗಪ್ಪ ನಿನ್ನರಮನೆ”.
ಅಪ್ಪನನ್ನು ಹುಡುಕಿ ಹೊರಟ ಮಗ, ಅತಿಯಾಗಿ ಪ್ರೀತಿಸುವ ಅಪ್ಪನನ್ನು ಬಿಟ್ಟು ಅನುಗಾಲ ಕೊರಗುವ ಮಗ, ಪ್ರೀತಿ, ಪ್ರೇಮ, ಮನಮಿಡಿಯುವ ಭಾವನಾತ್ಮಕ ಸುಂದರ ಪಯಣದ ಚಿತ್ರ ಇದು. ಅಲ್ಲಲ್ಲಿ ನಗಿಸುತ್ತಲೇ ಕಣ್ಣಂಚನ್ನು ಒದ್ದೆಯಾಗಿಸುವ ಮನಕಲಕುವ ಕಥೆ ಒಳಗೊಂಡಿರುವ ಚಿತ್ರ.
ತಾಯಿ, ಮಗ, ಅಪ್ಪ- ಮಗ, ಪ್ರೀತಿ, ಪ್ರೇಮ, ಪಯಣ, ದಾರಿಯಲ್ಲಿ ಒಂದೊಂದು ಕಥೆ, ಎಲ್ಲವನ್ನು ದೃಶ್ಯಕಾವ್ಯವನ್ನಾಗಿ ಒಟ್ಟುಗೂಡಿಸಿ ನಿರ್ದೇಶಕ ಹಯವದನ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಕಿರುತೆರೆಯ ಮೂಲಕ ಮನೆಗೆದ್ದಿದ್ದ ಹಯವದನ ಮೊದಲ ಬಾರಿಗೆ ಪ್ರವಾಸದ ಕಥನವನ್ನು ತೆರೆಗೆ ತಂದಿದ್ದಾರೆ. ಈ ಮೂಲಕ ಜನರ ಮನಸ್ಸು ಗೆಲ್ಲುವ ಕಸರತ್ತು ಮಾಡಿದ್ದಾರೆ
ಬೆಟ್ಟಿಂಗ್ ಆಸೆ ,ಕುಡಿತ ಅದರಿಂದ ಆದ ಅನಾಹುತದಿಂದ ಊರು ಬಿಟ್ಟ ಅಪ್ಪನನ್ನು ಹುಡುಕುವ ಸಂಗ್ಯಾ , ಮಗ ಆದಿ, ರೀಲ್ಸ್ ಮಾಡುವುದುನ್ನು ಸಹಿಸದ ಅಪ್ಪ, ಇಷ್ಟವಿಲ್ಲದ ಹುಡುಗನ್ನು ಮುದುವೆಯಗಲು ಒಪ್ಪದ ಶೀತಲ್ , ಮನಾಲಿ ಅನಿತೀಕ್ಷಿತವಾಗಿ ಸಿಕ್ಕ ಸ್ವಾತಿ, ಹೀಗೆ ಬೆಂಗಳೂರಿನಿಂದ ಮನಾನಲಿಯ ತನಕ ನಡೆಯುವ ಕಥೆ. ಒಂದೊಂದು ದಾರಿ, ಒದೊಂದು ದಿಕ್ಕು ಆದರೂ ಎಲ್ಲರನ್ನು ಒಂದೆಡೆ ತಂದಿರುವ ಚಿತ್ರ
ಸ್ನೇಹಿತರ ಜೊತೆ ರೀಲ್ಸ್ ಮಾಡಿಕೊಡಿದ್ದ ಅದಿ (ಅಂಜನ್ ನಾಗೇಂದ್ರ) ಅಪ್ಪನ ಕೋಪಕ್ಕೆ ಕಾರಣರದವರು. ಅವರಿಗೋ ಮಗ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ, ಅಗಂಡಿಯಲ್ಲಿ ಕೆಲಸ ಮಾಡುವ ಶೀಥಲ್ (ವೆನ್ಯಾ ರೈ) ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಒಲ್ಲದ ಹುಡುಗಿ, ಬ್ಲಾಗರ್ ಸ್ವಾತಿ (ಸಂಜನಾ ದಾಸ್) ನಡುವಿನ ಪರಿಚಯ ಪ್ರೇಮ ಅವರ ಬದುಕಿನ ಹಾದಿ ರೋಚಕ.
ಆದಿ ಬೆಂಗಳೂರಿನಿಂದ ಮನಾಲಿಗೆ ಹೊರಟಿದ್ದೇಕೆ, ಮಾರ್ಗ ಮಧ್ಯೆ ನಡೆಯುವ ತಿರುವುಗಳನ್ನು ಕುತೂಹಲ ಭರಿತವಾಗಿ ತೆರೆಯ ಮೇಲೆ ಕಟ್ಟಿಕೊಡಲಾಗಿದೆ, ಅದು ಏನು ಅನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.
ಅಪ್ಪನ ದುಡಿಮೆಯಲ್ಲಿ ಬದುಕು ಸಾಗಿಸಬೇಕು ಎಂದು ಬಯಸುವ ಮಕ್ಕಳಿಗೆ ತಾವೇ ದುಡಿದು ತಿಂದಾಗ ಅದರ ಪ್ರತಿ ಅಗುಳಿನ ಬೆಲೆ ಗೊತ್ತಾಗಲಿದೆ,ಅಂತಹದೊಂದು ಸಾಮಾಜಿಕ ಕಳಕಳಿ ಮತ್ತು ಸಂದೇಶ ಇರುವ ಚಿತ್ರ ಇದು. ಆ ವಿಷಯವನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ನಿರ್ದೇಶಕ ಹಯವದನ ಯಶಸ್ಸು ಕಂಡಿದ್ದಾರೆ.
ನಟ ಅಂಜನ್ ನಾಗೇಂದ್ರ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಈ ಮೂಲಕ ಕನ್ನಡದಲ್ಲಿ ಭರವಸೆಯ ನಟನಾಗಬಲ್ಲ ಎಲ್ಲಾ ಲಕ್ಷಣಗಳನ್ನು ಮತ್ತೊಮ್ಮೆ ಅನಾವರಣ ಮಾಡಿದ್ಧಾರೆ. ನಾಯಕಿಯರಲ್ಲಿ ವೆನ್ಯಾ ರೈ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ಸಂಜನಾ ದಾಸ್ ಕೂಡ.
ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಸ್ವಾತಿ, ವೈಜನಾಥ್ ಬಿರಾದಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

