ಆದಿ ಪುರುಷ್ ಚಿತ್ರ ನಿರ್ಮಾಪಕರಿಂದ ಸಚಿವ ನರೋತ್ತಮ ಮಿಶ್ರಾ ಭೇಟಿ, ಚರ್ಚೆ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸಿನಿಮಾ ‘ಆದಿಪುರುಷ್’ ಚಿತ್ರತಂಡ ಹೊಸ ವಿಷಯ ಪ್ರಕಟಿಸಿದೆ.

ಮೊನ್ನೆಯಷ್ಟೇ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಮನೋಜ್ ಮುಂತಶಿರ್ ಅವರು ಮಧ್ಯಪ್ರದೇಶ ಗೃಹ ಸಚಿವ ಡಾ.ನರೋತ್ತಮ್ ಮಿಶ್ರ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಸಿನಿಮಾ ಬಗ್ಗೆ ಒಂದಷ್ಟು ಮಾತುಕತೆ ನಡೆಸಿದ್ದಾರೆ.


ಚಿತ್ರದ ಟ್ರೈಲರ್ ವೀಕ್ಷಿಸಿ ಚಿತ್ರತಂಡದ ಬಗ್ಗೆ ಮಾಹಿತಿ ಕೇಳಿದ ಸಚಿವರು ಚಿತ್ರದ ಕುರಿತಂತೆ ಪ್ರಶಂಸೆಯ ಮಾತುಗಳನ್ನು ಹೇಳಿ, ಚಿತ್ರ ನೋಡಲು ನಾನು ಸಹ ಕಾತುರನಾಗಿದ್ದೇನೆಂದು ಖುಷಿ ವ್ಯಕ್ತಪಡಿರುತ್ತಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ‘ಟಿ’ ಸೀರೀಸ್‍ನ ಭೂಷನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.ತಾರಾಗಣದಲ್ಲಿ ಪ್ರಭಾಸ್, ಕೃತಿಸನೂನ್, ಸೈಫ್‍ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತನಾಗೆ, ವತ್ಸಲ್ಸೇತ್, ಸೋನಾಲ್ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್ ಪಳನಿ , ಸಂಕಲನ ಅಪೂರ್ವಮೋತಿವಾಲೆಸಹಾಯ್-ಆಶಿಷ್ಮಾತ್ರ. ಅಂದಹಾಗೆ ಸಿನಿಮಾ ಜೂನ್ 16ರಂದು ವಿಶ್ವದಾದ್ಯಂತ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3ಡಿ ಮಾದರಿಯಲ್ಲಿ ತೆರೆಗೆ ಬರುತ್ತಿದೆ.