More power to the film "The left hand is the cause of the accident"

“ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರಕ್ಕೆ ಮತ್ತಷ್ಟು ಬಲ - CineNewsKannada.com

“ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರಕ್ಕೆ ಮತ್ತಷ್ಟು ಬಲ

ದಿಗಂತ್ ನಟನೆಯ ಸಮರ್ಥ್ ಕಡ್ಕೊಳ್ ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಹೊತ್ತುಕೊಂಡಿರುವ “ಎಡಗೈಯೇ ಅಪಘಾತಕ್ಕೆ ಕಾರಣ” ಸಿನಿಮಾ ಅನೇಕ ಕಾರಣಗಳಿಂದ ಬಿಡುಗಡೆ ಆಗದೆ ಮುಂದಕ್ಕೆ ಹೋಗುತ್ತಿತ್ತು. “ಬ್ಲಿಂಕ್” ನಿರ್ಮಾಪಕ ರವಿಚಂದ್ರನ್ ಎಜೆ ಹಾಗೂ ‘ಶಾಖಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಜೊತೆ ಸೇರಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ

ಕಳೆದ ವರ್ಷ ತೆರೆಗೆ ಬಂದು ಯಶಸ್ವಿಯಾಗಿದ್ದ ಬ್ಲಿಂಕ್ ಮತ್ತು ಶಾಖಾಹರಿ ಚಿತ್ರಗಳ ನಿರ್ಮಾಪಕರು ಯಾವುದೇ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ, ಈಗ ಎಡಗೈ ಅಪಘಾತಕ್ಕೆ ಕಾರಣ ಚಿತ್ರಕ್ಕೆ ಕೈ ಜೋಡಿಸಿದ್ದಾರೆ.ಚಿತ್ರದ ಕಂಟೆಂಟ್ ಅದ್ಭುತವಾಗಿದೆ ಎನ್ನುವುದು ಗೊತ್ತಾಗುತ್ತದೆ. ಚಿತ್ರರಂಗದ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಭಯ ಬೀಳುತ್ತಿದ್ದಾರೆ. ಆದರೆ ಇಂಥ ಸಮಯದಲ್ಲಿ ಇವರಿಬ್ಬರು ಎಡಗೈ ಸಿನಿಮಾ ರಿಲೀಸ್ ಮಾಡುತ್ತಿರುವುದು ಖುಷಿಯ ವಿಚಾರ

ಶಾಖಹಾರಿ ನಿರ್ಮಾಪಕ ರಾಜೇಶ್ ಕೀಳಂಬಿ ಮಾತನಾಡಿ ‘ಶಾಖಹಾರಿ ಸಿನಿಮಾ ಬಳಿಕ ಚಿತ್ರೀಕರಣ ಆಗಿರುವ ಅಥವಾ ರಿಲೀಸ್ ಗೆ ರೆಡಿ ಇರುವ ಸಿನಿಮಾಗೆ ಕೋ ಪ್ರೊಡ್ಯೂಸರ್ ಆಗಲು ತಯಾರಿರಲಿಲ್ಲ. ಆದರೆ ಎಡಗೈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ ಹಾಗೂ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಕೈಜೋಡಿಸಿದ್ದೇನೆ. ಶಾಖಹಾರಿ ಮತ್ತು ಬ್ಲಿಂಕ್ ಸಿನಿಮಾ ಮಾಡುವಾಗ ನಾವಿಬ್ಬರು ಹೊಸ ನಿರ್ಮಾಪಕರು ಆದರೀಗ ಇಬ್ಬರ ಅನುಭವ ಈ ಸಿನಿಮಾಗೆ ಸಹಾಯವಾಗಲಿದೆ’ ಎಂದು ಹೇಳಿದರು

ನಿರ್ದೇಶಕ ಸಮರ್ಥ್ ಮಾತನಾಡಿ, ಇಬ್ಬರು ಯಶಸ್ವಿ ನಿರ್ಮಾಪಕರು ಕೈಜೋಡಿಸಿರುವುದು ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ, ಬ್ಲಿಂಕ್ ಮತ್ತು ಶಾಖಹಾರಿ ಸಿನಿಮಾದ ಬಗ್ಗೆ ಜನ ಮಾತಾಡ್ತಾ ಇದ್ದಾರೆ. ಅವರು ಈಗ ಎಡಗೈ ಸಿನಿಮಾ ರಿಲೀಸ್ ಗೆ ಕೈಜೋಡಿಸಿರುವುದು ಖುಷಿಯಾಗಿದೆ’ ಎನ್ನುತ್ತಾರೆ.

ರವಿಚಂದ್ರ ಎಜೆ ಮಾತನಾಡಿ, ‘ಕಳೆದ ಆರು ತಿಂಗಳುಗಳಲ್ಲಿ ನನಗೆ ಅನೇಕ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಅವಗಳಲ್ಲಿ ಈ ಚಿತ್ರ ಅತ್ಯುತ್ತಮವಾದ ಚಿತ್ರವಾಗಿದೆ. , ನೋಡಿದವರು ಏನಂತರೆ, ಅನಮಧೇಯ ಅಶೋಕ್ ಕುಮಾರ್ ಮತ್ತು ಭಾವ ತೀರ ಯಾನ ಸೇರಿದಂತೆ ಹಲವಾರು ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ಹೆಮ್ಮೆಯಿಂದ ವಿತರಿಸಿದ್ದೇವೆ.ಈ ಚಿತ್ರವೂ ಯಶಸ್ವಿಯಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ

ಎಡಗೈ ಈಗಾಗಲೇ ಪೋಸ್ಟರ್ ಮತ್ತು ಟೀಸರ್ಗಳ ಮೂಲಕ ಕುತೂಹಲವನ್ನು ಹೆಚ್ಚಿಸಿದೆ. ಯಾವಾಗಲು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ದಿಗಂತ್‍ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಮರುಜೀವ ಪಡೆದುಕೊಂಡಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin