Muhurat for Yathiraj's directorial "Ra..Ra..RX": Filming set in motion

ಯತಿರಾಜ್ ನಿರ್ದೇಶನದ “ರಾ..ರಾ.. ಆರ್ ಎಕ್ಸ್” ಚಿತ್ರಕ್ಕೆ ಮಹೂರ್ತ : ಚಿತ್ರೀರಕಣಕ್ಕೆ ಸಜ್ಜು - CineNewsKannada.com

ಯತಿರಾಜ್ ನಿರ್ದೇಶನದ “ರಾ..ರಾ.. ಆರ್ ಎಕ್ಸ್” ಚಿತ್ರಕ್ಕೆ ಮಹೂರ್ತ : ಚಿತ್ರೀರಕಣಕ್ಕೆ ಸಜ್ಜು

ಹಿರಿಯ ಕಲಾವಿದ ಹಾಗು ನಿರ್ದೇಶಕ ಯತಿರಾಜ್ ಒಂದಷ್ಟು ಬಿಡುವಿನ ನಂತರ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ “ ರಾ ರಾ ಆರ್ ಎಕ್ಸ್” ಎಂದು ಹೆಸರಿಡಲಾಗಿದೆ. ಹಿರಿಯ ಛಾಯಾಗ್ರಾಹಕ ಕೆ.ಎನ್ ನಾಗೇಶ್ ಕುಮಾರ್, ಪತ್ರಕರ್ತ ವಿ.ಸಿ.ಎನ್ ಮಂಜು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ್ದಾರೆ

ವೃದ್ಧಿ ಸುನೀಲ್, ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಎಸ್ ಎಂ ನಿರ್ಮಾಣ ಮಾಡುತ್ತಿದ್ದು ನಿರ್ಮಾಪಕ ವೃದ್ಧಿ ಸುನೀಲ್ ಪತ್ನಿ ಪ್ರಿಯ ಕ್ಯಾಮೆರಾ ಚಾಲನೆ ಮಾಡಿದರು. ಇದೇ ವೇಳೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತಿಗಿಳಿದ ಯತಿರಾಜ್. “ರಾ.. ರಾ.. ಆರ್ ಎಕ್ಸ್, ರಾಜೀವ ಹಾಗೂ ರಾಕೇಶ ಎಂಬ ಸ್ನೇಹಿತರು ಆರ್ ಎಕ್ಸಗ ಬೈಕ್ ನಲ್ಲಿ ಪಯಣಿಸುವಾಗ ನಡೆಯುವ ಕಥೆ. ತಾಯಿ – ಮಗನ ಬಾಂಧವ್ಯದ ಕಥೆಯೂ ಹೌದು. ಈ ಚಿತ್ರದಲ್ಲಿ ಬೈಕ್ ಸಹ ಪ್ರಮುಖ ಪಾತ್ರಧಾರಿ. ಕಥೆಯೇ ಚಿತ್ರದ ನಾಯಕ. ಅನೇಕ ನೂತನ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದ್ದೇವೆ. ಈಚಿತ್ರದಲ್ಲಿ ನಟಿಸುತ್ತಿರುವ ಬಹುತೇಕರಿಗೆ ಇದು ಮೊದಲ ಸಿನಿಮಾ. ಜುಲೈ 20 ರಿಂದ ಮದ್ದೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ 35 ದಿನಗಳ ಕಾಲ ಚಿತ್ರೀಕರಣ ಮುಕ್ತಾಯ ಮಾಡಲಾಗುವುದು. ವಿಜಯ್ ಹರಿತ್ಸ ಸಂಗೀತ, ದೀಪಕ್ ಛಾಯಾಗ್ರಹಣ ಚಿತ್ರಕ್ಕಿದೆ ಎಂದರು

ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮಾತನಾಡಿ ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವ ಆಸೆ ಇತ್ತು. ಯತಿರಾಜ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ನಿರ್ಮಾಪಕ ವೃದ್ಧಿ ಸುನೀಲ್ ತಿಳಿಸಿದರು. ಮತ್ತಿಬ್ಬರು ನಿರ್ಮಾಪಕರಾದ ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಅವರು ಸಹ ಕಥೆಯ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.

ನಟ ಅನೂಪ್ ಬೆಳ್ಳಾವಿ ಮಾತನಾಡಿ “ವಸುದೈವ ಕುಟುಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ರಾಜೀವ ನನ್ನ ಪಾತ್ರದ ಹೆಸರು ಎಂದರೆ ಮತ್ತೊಬ್ಬ ಪಾತ್ರದಾರಿ ಭರತ್, ಚಿತ್ರದಲ್ಲಿ ನನ್ನದು ಭರತ್ ಎನ್ನುವ ಪಾತ್ರ ಎಂದು ತಿಳಿಸಿದರು.

ನಾಯಕಿಯರಾಗಿ ಆಭಿನಯಿಸುತ್ತಿರುವ ಕೀರ್ತನ, ಐಶ್ವರ್ಯ, ನಟ ಭರತ್, ನಟಿ ಸಹನಾಶ್ರೀ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ದೀಪಕ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಅಲೋಕ್ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin