“ಸರ್ವಾಂತರ್ಯಾಮಿ” ಚಿತ್ರಕ್ಕೆ ಡಾ.ಚಂದ್ರಶೇಖರ ಕಂಬಾರ ಮೆಚ್ಚುಗೆ
ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರವನ್ನು ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಈ ವೇಳೆ ಪ್ರತಿಕ್ರಿಯಿಸಿದ ಡಾ.ಚಂದ್ರಶೇಖರ ಕಂಬಾರ,”ಸರ್ವಾಂತರ್ಯಾಮಿ” ಚಿತ್ರ ಚೆನ್ನಾಗಿದೆ. ಮೊಬೈಲ್ ನಿಂದ ಮಕ್ಕಳು ಸೇರಿದಂತೆ ಎಲ್ಲರ ಮೇಲೂ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಈ ಸಿನಿಮಾದಲ್ಲಿ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇದು ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ ಎಂದು ತಿಳಿಸಿದ್ದಾರೆ.
ವೀರಕಪುತ್ರ ಶ್ರೀನಿವಾಸ್, ನಿಡಸಾಲೆ ಪುಟ್ಟಸ್ವಾಮಿ, ಸಾಹಿತಿ ಗೋವಿಂದರಾಜು ಪಟೇಲ್, ರವೀಂದ್ರ ವಂಶಿ, ನಿರ್ದೇಶಕ ರಾಮ್ ನಾರಾಯಣ್ ಮುಂತಾದವರು ಕೂಡ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದ್ದಾರೆ.
ಆಟೋ ನಾಗರಾಜ್, ತೇಜಸ್ವಿನಿ, ಮೈರಾ, ಅಮೂಲ್ಯ ನಾರಾಯಣ್, ಸೂರ್ಯ ಪ್ರವೀಣ್, ಸಂಜನಾ, ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ, ಪೃಥ್ವಿರಾಜ್, ನಾಗೇಶ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

