Muhurta for “Margadarshi” movie: A wish of elites

“ಮಾರ್ಗದರ್ಶಿ” ಚಿತ್ರಕ್ಕೆ ಮುಹೂರ್ತ: ಗಣ್ಯರ ಹಾರೈಕೆ - CineNewsKannada.com

“ಮಾರ್ಗದರ್ಶಿ” ಚಿತ್ರಕ್ಕೆ ಮುಹೂರ್ತ: ಗಣ್ಯರ ಹಾರೈಕೆ

1960ರ ದಶಕದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ‘ಮಾರ್ಗದರ್ಶಿ’ ಚಿತ್ರ ತೆರೆಕಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ.

ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಶಾಸಕ ಪ್ರಿಯಕೃಷ್ಣರವರು ಕ್ಲಾಪ್ ಮಾಡಿ ಶುಭ ಹಾರೈಸಿದರು. ಚೈತನ್ಯ ಸಿನಿಮಾಸ್ ಅಡಿಯಲ್ಲಿ ಉದ್ಯಮಿ ಬಸವರಾಜು ನಿರ್ಮಾಣ ಮಾಡುತ್ತಿರುವ ಪ್ರಥಮ ಪ್ರಯತ್ನ ಮಾಡುತ್ತಿದ್ದಾರೆ.

ಹಿರಿಯ ನಿರ್ದೇಶಕ ಎಸ್.ಉಮೇಶ್ ಅವರ ಗರಡಿಯಲ್ಲಿ ಪಳಗಿರುವ ನಾಗೇಶ್ ಉಜ್ಜನಿರವರು ಈಗಾಗಲೇ ‘ಆರ್ ಆರ್ ಆರ್ ತೆ’ ಚೊಚ್ಚಲ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಇದು ಅವರ ಪೂರ್ಣ ಪ್ರಮಾಣದ ನಿರ್ದೇಶನದ ಎರಡನೇ ಚಿತ್ರವಾಗಿದ್ದು, ಅದೇ ತಂಡದೊಂದಿಗೆ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ಹಳ್ಳಿಯ ಸಾಮಾಜಿಕ ಕಾರ್ಯಕರ್ತನೊಬ್ಬ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ರೈತರ ಪರವಾಗಿ ಹೋರಾಟಕ್ಕೆ ನಿಂತಾಗ ಕಾಣದ ಕೈಗಳಿಂದ ಕೊಲೆಯಾಗುತ್ತದೆ. ಇದನ್ನು ಮಾಡಿಸಿದವರು ಯಾರು ಯಾವ ಕಾರಣಕ್ಕೆ ಜತೆಗೆ ನವಿರಾದ ಪ್ರೀತಿ ಸನ್ನಿವೇಶಗಳು ತೆರೆದುಕೊಳ್ಳಲಿದೆ.

ನವಪ್ರತಿಭೆಗಳಾದ ಸಾಗರ್ ನಾಯಕ. ಗಹನ ನಾಯಕಿ. ಇವರೊಂದಿಗೆ ಮಳವಳ್ಳಿಸಾಯಿಕೃಷ್ಣ, ನಾಗೇಂದ್ರಅರಸ್, ಜಗದೀಶ್ಕೊಪ್ಪ, ಶಿವಕುಮಾರ್‍ಆರಾಧ್ಯ, ಜೋಗಿನಾಗರಾಜ್, ‘ಕಾಟೇರ’ ನಂಜಪ್ಪಆಚಾರ್, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರ್ಯಕುಂದಾಪುರ ಮುಂತಾದವರು ನಟಿಸುತ್ತಿದ್ದಾರೆ.

ಐದು ಹಾಡುಗಳಿಗೆ ಸುಭಾಷ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಮುತ್ತುರಾಜ್.ಎಂ ಅವರದಾಗಿದೆ. ಉಳಿದಂತೆ ಸಂಕಲನ, ನೃತ್ಯ, ಸಾಹಸ ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. ಬೆಂಗಳೂರು, ಮಂಡ್ಯ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin