Dheerasamrat will hit the screens on February 16 across the state

ಧೀರಸಾಮ್ರಾಟ್ ಚಿತ್ರ ಫೆಬ್ರವರಿ 16ಕ್ಕೆ ರಾಜ್ಯಾದ್ಯಂತ ತೆರೆಗೆ - CineNewsKannada.com

ಧೀರಸಾಮ್ರಾಟ್ ಚಿತ್ರ ಫೆಬ್ರವರಿ 16ಕ್ಕೆ ರಾಜ್ಯಾದ್ಯಂತ ತೆರೆಗೆ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರಸಾಮ್ರಾಟ್’ ಚಿತ್ರಕ್ಕೆ ತನ್ವಿ ಪೆÇ್ರಡಕ್ಷನ್ ಹೌಸ್ ಮುಖಾಂತರ ಗುಲ್ಬರ್ಗಾದ ಗುರುಬಂಡಿ ನಿರ್ಮಾಣ ಮಾಡಿರುವುದು ಎರಡನೇ ಅನುಭವ. ಅದ್ವಿತಿ ಶೆಟ್ಟಿ ಮತ್ತು ರಾಕೇಶ್ ಬಿರಾದಾರ್ ನಾಯಕ-ನಾಯಕಿಯಾಗಿದ್ದು ಇದೇ ಫೆಬ್ರವರಿ 16ಕ್ಕೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ವೈರಲ್ ಆಗಿ ಸದ್ದು ಮಾಡುತ್ತಿದೆ. ಮೊನ್ನೆ ನಡೆದ ಸಮಾರಂಭದಲ್ಲಿ ಪ್ರಜ್ವಲ್ದೇವರಾಜ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರಾಕೇಶ್ ಬಿರಾದಾರ್ ನಾಯಕಿ ಅದ್ವಿತಿಶೆಟ್ಟಿ, ನಾಗೇಂದ್ರ ಅರಸು, ಯತಿರಾಜ್, ರವೀಂದ್ರನಾಥ್, ಇಂಚರ, ಸಂಕಲ್ಪ್ಪಾಟೀಲ್, ಹರೀಶ್‍ಅರಸು, ಸಾಹಸ ಸಂಯೋಜಕ ಕೌರವ ವೆಂಕಟೇಶ್, ಸಂಭಾಷಣೆಕಾರ ಸಾಯಿರಾಮ್ ಉಪಸ್ತಿತರಿದ್ದರು.

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್ ಕುಮಾರ್ (ಪಚ್ಚಿ) ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯಲ್ಲಿ, ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ‘ಸಾವಿಗೆ ಸಾವಿಲ್ಲ’ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂದಿಸಿದಂತೆ ಸಮಾಜದಲ್ಲಿ ಯಾವುದೋ ಒಂದು ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಶೀರ್ಷಿಕೆ ಅಂದರೆ ಏನು ಯಾತಕ್ಕೆ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ಕ್ಲೈಮಾಕ್ಸ್ದಲ್ಲಿ ತಿಳಿಯಲಿದೆ.

ತಾರಾಗಣದಲ್ಲಿ ಶಂಕರಭಟ್,ಶೋಭರಾಜ್, ಬಲರಾಜವಾಡಿ, ರಮೇಶ್ಭಟ್, ಮನಮೋಹನ್ರೈ, ರವಿರಾಜ್, ಜ್ಯೋತಿಮರೂರು, ಮಂಡ್ಯಚಂದ್ರು, ಗಿರಿಗೌಡ, ಪ್ರೇಮ, ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ.

ರಾಘವ್ ಸುಭಾಷ್ ಸಂಗೀತ, ವೀರೇಶ್.ಎನ್.ಟಿ.ಎ-ಅರುಣ್ ಸುರೇಶ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಎ.ಆರ್.ಸಾಯಿರಾಮ್, ಸಾಹಸ ಕೌರವವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ತುಮಕೂರು,

ಚಿತ್ರದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಯುಎ ಪ್ರಮಾಣಪತ್ರ ಪಡೆದುಕೊಂಡಿರುವ ಸಿನಿಮಾವು ಫೆಬ್ರವರಿ 16ರಂದು ತೆರೆಗೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin