"Matsyagandha" movie made noise: Official teaser crosses million mark

ಸದ್ದು ಮಾಡಿದ “ಮತ್ಸ್ಯಗಂಧ” ಚಿತ್ರ: ಮಿಲಿಯನ್ ದಾಟಿದ ಅಫಿಶಿಯಲ್ ಟೀಸರ್ - CineNewsKannada.com

ಸದ್ದು ಮಾಡಿದ “ಮತ್ಸ್ಯಗಂಧ” ಚಿತ್ರ: ಮಿಲಿಯನ್ ದಾಟಿದ ಅಫಿಶಿಯಲ್ ಟೀಸರ್

“ಮತ್ಯಗಂಧ” ಚಿತ್ರದ ಭಾಗೀರಥಿ ಹಾಡು ಫುಲ್ ವೈರಲ್ ಆದ ಬಳಿಕ ಇದೀಗ ಕುವ್ವಾ.. ಕುವ್ವಾ..ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಬ್ಯಾಕ್ ಟು ಬ್ಯಾಕ್ ಕಂಟೆಂಟ್ ಗಳೊಂದಿಗೆ ಮತ್ಸ್ಯ ಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸ್ತಿದೆ. ಇದೇ ತಿಂಗಳ 23ಕ್ಕೆ ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ.

ಹೀಗುರುವಾಗ ಈ ಚಿತ್ರದ ಒಂದೊಂದು ಕಂಟೆಂಟ್ ಒಂದೊಂದು ಬಗೆಯಲ್ಲಿ ಸದ್ದು ಸುದ್ದಿಯಾಗ್ತಿದೆ. ಅದರಂತೆ ಮೊದಲು ರಿಲೀಸ್ ಆದ ಭಾಗೀರಥಿ ಹಾಡು ರೀಲ್ಸ್ ನಲ್ಲಿ ಟ್ರೆಂಡಿಂಗ್ ನಲ್ಲಿ ಓಡ್ತಿದೆ. ಅನ್ ಲೈನ್ ನಲ್ಲಿ ಹಲ್ ಚಲ್ ಎಬ್ಬಿಸ್ತಿದೆ. ಇದ್ರ ಬೆನ್ನಿಗೆ ರಿಲೀಸ್ ಆದ ಅಫಿಶಿಯಲ್ ಟೀಸರ್ ಮಿಲಿಯನ್ ದಾಟಿದೆ ಮುನ್ನುಗ್ತಿದೆ.

ಈ ನಡುವೆ ಇಂದು ಕುವ್ವಾ.. ಕುವ್ವಾ ಅನ್ನೋ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಮತ್ಸ್ಯಗಂಧದ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.. ಕನ್ನಡ ಪಿಚ್ಚರ್ ಅರ್ಪಿಸುವ ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದಲ್ಲಿ ಮತ್ಸ್ಯಗಂಧ ತಯಾರಾಗಿದೆ.

ಈ ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin