ನನ್ನ ಸ್ಟ್ರೆಂಥ್, ವೀಕ್ನೆಸ್ ತೂಗುದೀಪ ಶ್ರೀನಿವಾಸ್ ರೀತಿ ಇರೋದು : ದಿನಕರ್ ತೂಗುದೀಪ
“ ತೂಗುದೀಪ ಶ್ರೀನಿವಾಸ್ ರೀತಿ ಕಾಣುವುದು ನನ್ನ ಸ್ಟ್ರೆಂಥ್, ಅದೇ ರೀತಿ ಅವರ ಥರ ನಟಿಸದಿರುವುದು ನನ್ನ ವೀಕ್ನೆಸ್” . ಹೀಗಂತ ನಟ, ನಿರ್ದೇಶಲ ದಿನಕರ್ ತೂಗುದೀಪ ಹೇಳಿದ್ದಾರೆ.
ಜಯತೀರ್ಥ ನಿರ್ದೇಶನದ ಕೈವ ಚಿತ್ರದಲ್ಲಿ ಡಾನ್ ಕರೀಂಲಾಲ್ ಪಾತ್ರ ಮಾಡಿರುವ ಜಯತೀರ್ಥ, ತೆರೆಯ ಮೇಲೆ ಅವರ ತಂದೆ ತೂಗುದೀಪ ಶ್ರೀನಿವಾಸ ರೀತಿ ಕಂಡಿದ್ದಾರೆ.
ದಿನಕರ್ ತೂಗುದೀಪ ಮಾತನಾಡಿ, ನಿರ್ದೇಶನ ಮಾಡಿಕೊಂಡು ಇದ್ದೆ. ನಿರ್ದೇಶಕ ಜಯತೀರ್ಥ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿಸಿದ್ದಾರೆ. ಒಳ್ಳೆಯ ಸಂಭಾಷಣೆ ಇದೆ. ಪಾತ್ರ ಚೆನ್ನಾಗಿ ಮೂಡಿ ಬಂದಿದ್ದರೆ ಅದಕ್ಕೆ ನಿರ್ದೇಶಕರೇ ಕಾರಣ. ನನ್ನ ಬಳಿ ಪಾತ್ರ ತೆಗೆಸಿದ್ದಾರೆ. ಮೆಚ್ಚುಗೆ ವ್ಯಕ್ತವಾದರೆ ನಿರ್ದೇಶಕರಿಗೆ ನಾನು ವಿದೇಯ ವಿದ್ಯಾರ್ಥಿ ಎಂದರು.
ನಟನೆನಾ ಬೇಡ ನನ್ನಿಂದ ಆಗುವುದಿಲ್ಲ ಎಂದುಕೊಂಡಿದ್ದೆ. ಕೈವ ಚಿತ್ರದ ನಂತರ ಚಿತ್ರದಲ್ಲಿ ನಟಿಸುವ ಮೂಡಿಸುವ ಭರವಸೆ ಸಿಕ್ಕಿದೆ ಇದು ಖುಷಿಯ ವಿಚಾರ ಎಂದು ಹೇಳಿಕೊಂಡರು.
ಟೀಸರ್ ಬಿಡುಗಡೆ ಮಾಡಿ ಅಭಿಷೇಕ್ ಅಂಬರೀಷ್ ಅವರು, ದಿನಕರ್ ಅಣ್ಣನನ್ನು ತೆರೆ ಮೇಲೆ ನೋಡಿದರೆ ತೂಗುದೀಪ ಶ್ರೀನಿವಾಸ್ ಥರನೇ ಕಾಣ್ತಾರೆ. ನಾನು ಹೇಳೋಣ ಅಂದಿಕೊಂಡಿದ್ದೆ. ಅಷ್ಟೆ ವೇಳೆ ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಹೇಳಿದರು. ನಾನು ಮತ್ತೊಮ್ಮೆ ಅದೇ ಮಾತು ಹೇಳಿದರೆ ಕಾಪಿ ಹೊಡೆದಂತೆ ಆಗುತ್ತದೆ. ಆಗಲಿ ದಿನಕರ್ ಅವರು ತೂಗುದೀಪ್ ಶ್ರೀನಿವಾಸ ರೀತಿ ತೆರೆ ಮೇಲೆ ಕಾಣ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ದೇಶಕ ಜಯತೀರ್ಥ ಮತನಾಡಿ, ನಾವೆಲ್ಲಾ ದಿನಕರ್ ತೂಗುದೀಪ ಅವರನ್ನು ಶ್ರೀನಿವಾಸ್ ತೂಗುದೀಪ ರೀತಿ ಕಾಣ್ತಾರೆ ಅಂತೀವಿ. ಆದರೆ ಅವರ ಆಪ್ತರೊಬ್ಬರು ಡಾನ್ ರೀತಿ ಕಾಣ್ತೀಯಾ ಅಂದರು.ಅದುವೇ ಆ ಪಾತ್ರಕ್ಕಿರುವ ತಾಕತ್ತು ಮತ್ತು ಗಮ್ಮತ್ತು. ನಾನು ಮಾಡಿಸಿದ್ದೇನೆ ಎನ್ನುವುದಕ್ಕಿಂತ ಅವರು ಮಾಡಿದ್ದಾರೆ ಎಂದರು