“ಪ್ರೇಮಕಾವ್ಯ ” ಚಿತ್ರಕ್ಕೆ ಸ್ಪೆಷಲ್ ಹಾಡಿನ ಚಿತ್ರೀಕರಣ: ಐಟಂ ಹಾಡಿಗೆ ಹೆಜ್ಜೆ ಹಾಕಿದ ನಟಿ ಸಂಭ್ರಮಶ್ರೀ

‘ಪ್ರೇಮಕಾವ್ಯ’ ಸಿನಿಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಎನ್.ಎಸ್.ಶ್ರೀಧರ್. ಚಿತ್ರಕ್ಕಾಗಿ ವಿಷೇಶ ಹಾಡು ಚಿತ್ರೀಕರಣ ಮಾಡಿಕೊಂಡರು. ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಸಂಭ್ರಶ್ರೀ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

‘ಅವನೇ ಶ್ರೀಮನ್ನಾರಾಯಣ’ ‘ಕಾಂತಾರ’ ಇನ್ನು ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ರಾಗ ಒದಗಿಸಿರುವ ಅಜನೀಶ್ ಲೋಕನಾಥ್ ಮೊದಲು ಮ್ಯೂಸಿಕ್ ಕಂಪೋಸ್ ಮಾಡಿದ ಐಟಂ ಹಾಡು ಇದಾಗಿದೆ.
ಈ ವೇಳೆ ಮಾತಿಗಳಿದ ನಿರ್ದೇಶಕ ಶ್ರೀಧರ್, ನಿರ್ಮಿಸಿ, ನಿರ್ದೇಶಿಸಿದ ‘ಮಾಯೆ’ ಸಿನಿಮಾದ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಲು ಅಜನೀಶ್ ಲೋಕನಾಥ್ ಅವರಿಗೆ ಪ್ರಥಮ ಬಾರಿ ಅವಕಾಶ ನೀಡಲಾಗಿತ್ತು. ‘ಅನುತಿದೆ ನನ್ನ ಮನ ಪ್ರತಿ ಕ್ಷಣ, ಇಂಥ ಈ ರಾತ್ರಿಯಲಿ, ಓ ನನ್ನ ಚಂದಮಾಮ’ ಸಾಲಿನ ಗೀತೆಗೆ ‘ಕವಿರಾಜ್ ಸಾಹಿತ್ಯ, ಚೈತ್ರಾ ಕಂಠದಾನ ಮಾಡಿದ್ದರು. ಕಾರಣಾಂತರದಿಂದ ಅಂದು ಐಟಂ ಸಾಂಗ್‍ನ್ನು ಬಳಸಿಕೊಂಡಿರಲಿಲ್ಲ. ಅದೇ ಗೀತೆಯನ್ನು ಬಳಸಲಾಗುತ್ತಿದೆ. ಇದು ನಮಗೆ ಹೆಮ್ಮೆ ತಂದುಕೊಟ್ಟಿದೆ ಎಂದರು.

ಶೀರ್ಷಿಕೆ ಹೇಳುವಂತೆ ಪ್ರೀತಿ ಕಥೆಯನ್ನು ಹೊಂದಿದೆ. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಂಭ್ರಮಶ್ರೀ ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ಹೊಸ ಅನುಭವ. ಈಗಾಗಲೇ ಬೆಂಗಳೂರು, ಹೈದರಬಾದ್, ಕುಶಾಲನಗರ ಮತ್ತು ಮಡಕೇರಿ ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಇವತ್ತು ಕುಂಬಳಕಾಯಿ ಒಡೆಯಲಾಗುತ್ತಿದೆ. ಡಿಸೆಂಬರ್‍ದಲ್ಲಿ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಬಾಂಬೆ ಮೂಲದ ಸೌರಭ್ ನಾಯಕ ಹಾಗೂ ಸೂರಜ್ ಪ್ರೊಡಕ್ಷನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ದಿವ್ಯಾಸುರೇಶ್ ನಾಯಕಿ. ಉಳಿದಂತೆ ಹರೀಶ್‍ರೈ, ಎಂ.ಡಿ.ಕೌಶಿಕ್, ಮನಸ್‍ಮನು ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಎಂ.ಎಂ.ಮೋಹನ್, ಛಾಯಾಗ್ರಹಣ ಸುರೇಶ್‍ಬಾಬು-ವಿನ್ಸೆಂಟ್, ಸಂಕಲನ ಡಿ.ವೆಂಕಟ್‍ಪ್ರಭು, ನೃತ್ಯ ಹರಿ ಅವರದಾಗಿದೆ. ಕನ್ನಡ ಅಲ್ಲದೆ ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.