"Na Ninna Bidalare" Teaser Released: Actor Sharan Wishes Good Luck

ನಾ ನಿನ್ನ ಬಿಡಲಾರೆ” ಚಿತ್ರದ ಟೀಸರ್ ಬಿಡುಗಡೆ : ಶುಭ ಕೋರಿದ ನಟ ಶರಣ್ - CineNewsKannada.com

ನಾ ನಿನ್ನ ಬಿಡಲಾರೆ” ಚಿತ್ರದ ಟೀಸರ್ ಬಿಡುಗಡೆ : ಶುಭ ಕೋರಿದ ನಟ ಶರಣ್

ಹಿರಿಯ ನಟ ಅನಂತ್ ನಾಗ್ ಮತ್ತು ಲಕ್ಷ್ಮಿ ಅವರ ಕಾಂಬಿನೇಷನ್ ನಲ್ಲಿ 70ರ ದಶಕದ ಅಂತ್ಯದಲ್ಲಿ ತೆರೆಗೆ ಬಂದು ಯಶಸ್ವಿಯಾಗಿದ್ದ ” ನಾ ನಿನ್ನ ಬಿಡಲಾರೆ” ಚಿತ್ರದ ಶೀರ್ಷಿಕೆಯಡಿ ಹೊಸಬರ ತಂಡ ಉತ್ಸಾಹದಲ್ಲಿ ಸಿನಿಮಾ ಮಾಡಿದೆ. ಸದ್ಯದಲ್ಲಿಯೇ ಬಿಡುಗಡೆ ಮಾಡುವ ಕನಸು ಕಂಡಿದೆ. “ಅಂದು ಹಿರಿಯ ನಟ ಅನಂತ್ ನಾಗ್, ಇಂದು ಯುವ ನಟಿ ಅಂಬಾಲಿ ಭಾರತಿ ನಾ ನಿನ್ನ ಬಿಡಲಾರೆ ಎನ್ನುತ್ತಿದ್ದಾರೆ.

ವಿಭಿನ್ನ ಪ್ರಯತ್ನದ ಚಿತ್ರದ ಮೂಲಕ ಚಿತ್ರ ಪ್ರೇಮಿಗಳನ್ನು ಸೆಳೆಯಲು ಹೊಸ ತಂಡ ಮುಂದಾಗಿದೆ. ಗುಲ್ಬರ್ಗ ಮೂಲದ ಯುವ ಪ್ರತಿಭೆ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸುವ ಮೂಲಕ ತಾಯಿ ಭಾರತಿ ಬಾಳಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ಚಿತ್ರ “ನಾ ನಿನ್ನ ಬಿಡಲಾರೆ”.ಚಿತ್ರದ ಟೀಸರ್ ಅನ್ನು ನಟ ಶರಣ್ ಬಿಡುಗಡೆ ಮಾಡಿ ಹೊಸ ತಂಡದ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಈ ವೇಳೆ ಮಾತನಾಡಿದ ನಟ ಶರಣ್ , ಚಿತ್ರದ ನಟಿ , ನಿರ್ಮಾಪಕಿ ಭಾರತಿ ಶ್ರಮಕ್ಕೆ ತಕ್ಕ ಚಿತ್ರ ಇದಾಗಿದೆ. ಬಹಳ ಸೌಮ್ಯ ಸ್ವಭಾವವಿದ್ದರೂ ಆಸಕ್ತಿ , ಗುರಿ, ಶ್ರಮ ಎಲ್ಲಿರುತ್ತೋ ಅಲ್ಲಿ ಗೆಲುವು ಖಂಡಿತ. ಫೈಟ್ ಮಾಸ್ಟರ್ ಹೇಳಿದಂತೆ ಫೈಯರ್ ಫೈಟ್ ಆಕ್ಷನ್ ಸನ್ನಿವೇಶವನ್ನ ನಿಭಾಯಿಸಿದ ರೀತಿ ಅಪ್ಪು ಸರ್ ಅವರನ್ನ ನೆನಪಿಸುತ್ತದೆ ಎಂದರು.

ಒಬ್ಬ ಹೆಣ್ಣು ಮಗಳು ಇಷ್ಟು ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ ಎಂದರೆ ಪ್ರಥಮ ಪ್ರಯತ್ನದಲ್ಲಿ ಗೆದ್ದಂತಾಗಿದೆ. ಅದೇ ರೀತಿ ನಿರ್ದೇಶಕರು ಮೊದಲ ಪ್ರಯತ್ನವಾಗಿ ಒಳ್ಳೆಯ ಸಿನಿಮಾ ಮಾಡಿದ್ದಾರೆ ಎನಿಸುತ್ತಿದೆ. ನನ್ನ ಪೆವರೇಟ್ ಜಾನರ್ ಹಾರರ್. ನಾಲ್ಕೈದು ವರ್ಷದವ ಇದ್ದಾಗ ಅನಂತ್ ನಾಗ್, ಲಕ್ಷ್ಮೀ ಅವರ ‘ನಾ ನಿನ್ನ ಬಿಡಲಾರೆ’ ಸಿನಿಮಾ ರೀ-ರಿಲೀಸ್ ಆಗಿತ್ತು. ಆಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ ಎಂದರು

ಕಳೆದ ವರ್ಷ ಫೆಬ್ರವರಿಯಿಂದ ಈ ತಂಡ ನನ್ನ ಪಾಲೋ ಮಾಡತಾ ಬಂದಿದೆ. ಇವರ ಪ್ರಯತ್ನ ನನ್ನನ್ನು ಈ ವೇದಿಕೆಗೆ ಬರುವಂತೆ ಮಾಡಿದೆ. ಮೊದಲ ಪ್ರಯತ್ನದಲ್ಲೇ ಚಾಲೆಂಜ್ ಆಗಿ ಚಿತ್ರ ಮಾಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ನಮ್ಮ ಕನ್ನಡಿಗರು ಕೈ ಬಿಟ್ಟಿಲ್ಲ. ಟೀಸರ್ ತುಂಬಾ ಖುಷಿ ಕೊಟ್ಟಿದೆ. ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.

ನಿರ್ದೇಶಕ ನವೀನ್ .ಜಿ. ಎಸ್. ಮಾತನಾಡಿ ಕಳೆದ 8 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಚಿತ್ರವನ್ನು ಆರಂಭಿಸಲು ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆ. ಚಿತ್ರದ ಕಥೆಯನ್ನು ನಟಿ ಅಂಬಾಲಿ ಭಾರತೀಯರವರಿಗೆ ಹೇಳಿದೆ. ನಿರ್ಮಾಪಕರು ಹುಡುಕಾಟ ಮಾಡುತ್ತಿದ್ದೇವು, ಆಗ ನಮ್ಮ ನಟಿಯೇ ನಮ್ಮ ಊರಿಗೆ ಬಂದು ತಾಯಿಗೆ ಈ ಕಥೆ ಹೇಳಿ , ಅವರಿಗೆ ಸಿನಿಮಾ ನಿರ್ಮಿಸುವ ಆಸೆ ಇದೆ ಎಂದು ಹೇಳಿದರು.

ಅದರಂತೆ ಎಲ್ಲರೂ ಒಪ್ಪಿಕೊಂಡು ಈ ಸಿನಿಮಾಗೆ ಏನೆಲ್ಲ ಬೇಕು ಅದನ್ನು ಅವರು ನೀಡಿದ್ದಾರೆ. ಇನ್ನು ಈ ‘ನಾ ನಿನ್ನ ಬಿಡಲಾರೆ’ 1979ರಲ್ಲಿ ಬಿಡುಗಡೆ ಆಗಿ ಹಿಟ್ ಆದ ಸಿನಿಮಾ. ಅದರಲ್ಲಿ ಅನಂತ್ ನಾಗ , ಲಕ್ಷ್ಮೀ ಅಭಿನಯಿಸಿದ್ದರು. ಕಥೆಗೆ ಶೀರ್ಷಿಕೆ ಸೂಕ್ತ ಆಗಿದ್ದರಿಂದ ಈ ಹೆಸರು ಇಡಲಾಗಿದೆ. ಅನಂತನಾಗ್ ಸರ್ ನಮ್ಮ ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆ ಇತ್ತು , ಅದಕ್ಕಾಗಿ ಪ್ರಯತ್ನ ಪಟ್ಟವು , ಆದರೆ ಡೇಟ್ಸ್ ಸಿಗಲಿಲ್ಲ ಎಂದರು

ಈ ಒಂದು ಚಿತ್ರ ಒಳ್ಳೆಯ ಕ್ವಾಲಿಟಿಯಲ್ಲಿ ಮಾಡಿದ್ದು , ಸೈಕಲಾಜಿಕಲ್ , ಹಾರರ್ , ಥ್ರಿಲಿಂಗ್ , ಸಸ್ಪೆನ್ಸ್ ಹಾಗೂ ಮೆಡಿಕಲ್ ಬಗ್ಗೆಯೂ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯ ಚಿತ್ರ ಸೆನ್ಸಾರ್ ಕಾರ್ಯ ಮುಗಿಸಿ ರಿಲೀಸ್ ಗೆ ಸಿದ್ಧವಿದೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿಕೊಂಡರು.

ನಾಯಕಿ ಅಂಬಾಲಿ ಭಾರತಿ ಮಾತನಾಡಿ ಮ‌ೂಲತಃ ಗುಲ್ಬರ್ಗ ಹುಡುಗಿ. ನನಗೂ ರಂಗಭೂಮಿ ನಂಟು ಇದೆ. ಒಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದೇನೆ.ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ನಟ ಶರಣ್ ಸರ್ ಗೆ ತುಂಬಾ ಧನ್ಯವಾದ ಅವರ ಅಭಿಮಾನಿ. ಅವರ ಮೂಲಕವೇ ನಮ್ಮ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿಸಬೇಕೆಂಬು ಉದ್ದೇಶದಿಂದ ಕಾದು ಇಂದು ಬಿಡುಗಡೆ ಮಾಡಿಸಿದ್ದೇವೆ ಎಂದರು

ಈ ಒಂದು ಚಿತ್ರಕ್ಕಾಗಿ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ನವೀನ್ ಹಾಗೂ ಐದು ವರ್ಷದ ಗೆಳೆಯರು. ಅವರು ಈ ಕಥೆ ಹೇಳಿದರು. ಈ ತಂಡದ ಜೊತೆ ಸೇರಿ ನಿರ್ಮಾಪಕರನ್ನು ಹುಡುಕಿದ್ವಿ ಸೆಟ್ ಆಗಲಿಲ್ಲ. ನಂತರ ಅಮ್ಮನಿಗೆ ನಿರ್ದೇಶಕರಿಂದ ಕಥೆ ಹೇಳಿಸಿದೆ. ಅಮ್ಮ ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದರು. ಅಮ್ಮ , ಚಿಕ್ಕಮ್ಮ ಮತ್ತು ಅಜ್ಜಿ ಅವರ ಹೆಸರುಗಳನ್ನು ಇಟ್ಟುಕೊಂಡು ಕೆ.ಯು.ಬಿ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಇಸ್ರೋದಲ್ಲಿ ಕೆಲ ಸಮಯ ಕೆಲಸ ಮಾಡಿ ನಂತರ ಚಿತ್ರರಂಗಕ್ಕೆ ಬಂದು ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ ಈಗ ಈ ಚಿತ್ರದ ಮೂಲಕ ನಟಿಯಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಪಕಿಯಾಗಿ ಜವಾಬ್ದಾರಿಯನ್ನ ಹೊತ್ತುಕೊಂಡು ಸಿನಿಮಾ ಮಾಡಿದ್ದೇನೆ. ಹಾಗೆಯೇ ಈ ಚಿತ್ರದ ಎಲ್ಲಾ ವಿಭಾಗಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈಗ ನಮ್ಮ ಸಿನಿಮಾಗೆ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ನವೆಂಬರ್ ರಿಲೀಸ್ ಮಾಡುವ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ನಮ್ಮ ಚಿತ್ರ ತಂಡದ ಮೇಲೆ ಇರಲಿ ಎಂದು ಕೇಳಿಕೊಂಡರು.

ನಾಯಕ ಪಂಚ್ಚಿ ( ಪಂಚೇಂದ್ರಿಯ) ಮಾತನಾಡಿ ರಂಗಭೂಮಿ ಹಿನ್ನೆಯಿಂದ ಬಂದಿದ್ದೇನೆ.ನಾಟಕಗಳಲ್ಲಿ ತೊಡಗಿಸಿಕೊಂಡು ತದನಂತರ ‘ರಂಗಬಿರಂಗಿ’ ಸಿನಿಮಾ ಮೂಲಕ ಇಂಡಸ್ಟ್ರಿಗೆ ಬಂದೆ. ಇದು ನಾಲ್ಕನೇ ಸಿನಿಮಾ. ಈ ಚಿತ್ರದಲ್ಲಿ ಎಂ.ಬಿ.ಎ ವಿದ್ಯಾರ್ಥಿ. ಒಂದು ಇವೆಂಟ್ ಮುಗಿಸಿಕೊಂಡು ಬರುವಾಗ ಒಬ್ಬ ಅಪರಿಚಿತ ವ್ಯಕ್ತಿಯಿಂದ ತಿರುವು ಸಿಗುತ್ತದೆ. ಪಾತ್ರ ಕೂಡ ಬಹಳ ವಿಭಿನ್ನವಾಗಿದೆ, ಸಹಕಾರ ಇರಲಿ ಎಂದರು.

ಚಿತ್ರದಲ್ಲಿ ಮಾಂತೇಶ್ , ಸೀರುಂಡೆ ರಘು, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಛಾಯಾಗ್ರಾಹಕ ವೀರೇಶ್, ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಚಿತ್ರ ಸದ್ಯದಲ್ಲೇ ತೆರೆಯ ಮೇಲೆ ಬರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin