“ನಾ ನಿನ್ನ ಬಿಡಲಾರೆ” ಟ್ರೈಲರ್ ಬಿಡುಗಡೆ : ನವಂಬರ್ 29ಕ್ಕೆ ಸಿನಿಮಾ ತೆರೆಗೆ

ದೇವರು,ದೈವತ್ವ, ಮತ್ತು ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳಿರುವ “ ನಾ ನಿನ್ನ ಬಿಡಲಾರೆ” ಚಿತ್ರ ಇದೇ ತಿಂಗಳ 29 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಹಲವು ಮಂದಿ ಟ್ರೈಲರ್ ಬಿಡುಗಡೆ ಮಾಡಿ ನಟಿ ಅಂಜಲಿ ಭಾರತಿ ಅವರ ಪ್ರಯತ್ನಕ್ಕೆ ಶುಭಹಾರೈಸಿದ್ದಾರೆ.

ಭಾರತಿ ಬಾಲಿ ನಿರ್ಮಾಣದ, ನವೀನ್ ಜಿಎಸ್ ನಿರ್ದೇಶನದ “ನಾ ನಿನ್ನ ಬಿಡಲಾರೆ”ಟ್ರೈಲರ್ ಬಿಡುಗಡೆಯಾದ ಮರು ಕ್ಷಣ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಬಾಲಿ ಭಾರತಿ, ಪಂಚಿ, ಕೆ ಎಸ್ ಶ್ರಿಧರ್,ಶ್ರೀನಿವಾಸ್ ಪ್ರಭು, ಮದನ್ ಹರಿಣಿ, ಮಹಾಂತೇಶ್ ಸೇರಿ ಸಾಕಷ್ಟು ಪ್ರತಿಭಾವಂತ ಕಲಾವಿದರ ದಂಡು ಚಿತ್ರದಲ್ಲಿದೆ.

ನಿರ್ದೇಶಕ ಭರ್ಜರಿ ಚೇತನ್ ಕುಮಾರ್ ಟ್ರೈಲರ್ ಬಿಡುಗಡೆ ಮಾಡಿ ಸಂಪೂರ್ಣ ಚಿತ್ರ ತಂಡದ ಎಲ್ಲ ಸದಸ್ಯರ ಹೆಸರನ್ನು ನೆನಪಿಸಿ ಎಲ್ಲರ ಕ್ರಿಯೇಟಿವ್ ಕೆಲಸಕ್ಕೆ ಶಹಬ್ಬಾಸ್ ಹೇಳಿದ್ದಾರೆ. ಜೊತೆಗೆ ಚಿತ್ರಕ್ಕಾಗಿ ಅಂಬಾಲಿ ಭಾರತಿ ಮಾಡಿರುವ ಸಾಹಸ ದೃಶ್ಯಗಳನ್ನು ಕೊಂಡಾಡಿ ಕನ್ನಡಕ್ಕೆ ಮತ್ತೊಬ್ಬ ಆಕ್ಷನ್ ನಾಯಕಿ ಸಿಕ್ಕಿದಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ನಿರ್ದೇಶಕ ತರುಣ್ ಸುಧೀರ್ ವಿಡಿಯೋ ಸಂದೇಶದ ಮೂಲಕ 1979 ರಲ್ಲಿ ತೆರೆಗೆ ಬಂದ ಲಕ್ಷ್ಮಿ ಮತ್ತು ಅನಂತನಾಗ್ ಜೋಡಿಯ ಸೂಪರ್ ಹಿಟ್ ಚಿತ್ರದ ಅದೇ ಶೀರ್ಷಿಕೆಯಲ್ಲಿ ಬರುತ್ತಿರುವ ಹೊಸಬರ ನಾ ನಿನ್ನ ಬಿಡಲಾರೆ ಚಿತ್ರ, ದೊಡ್ಡ ಯಶಸ್ಸು ಕಾಣಲಿ.ನಾಯಕಿ ಅಂಬಾಲಿ ಭಾರತಿ ಅವರ ಶ್ರಮಕ್ಕೆ ಫಲ ಸಿಗಲಿ ಎಂದು ಹಾರೈಸಿದ್ದಾರೆ

ನವಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ನಾ ನಿನ್ನ ಬಿಡಲಾರೆ ಚಿತ್ರಕ್ಕೆ ಅದ್ಭುತವಾದಂತಹ ಯಶಸ್ಸು ದೊರೆಯುತ್ತದೆ ಚಿತ್ರವನ್ನ ಎಲ್ಲಾ ಅಭಿಮಾನಿಗಳು ಕಣ್ಣು ತುಂಬಿಕೊಳ್ಳುತ್ತಾರೆ ಎಂಬ ಭರವಸೆ ಇಡೀ ಚಿತ್ರ ತಂಡಕ್ಕಿದೆ,
ಅಭಿಮಾನಿ ದೇವರುಗಳು,ಒಳ್ಳೆಯಕನ್ನಡ ಚಿತ್ರಗಳನ್ನು ಯಾವತ್ತೂ ಕೈ ಬಿಟ್ಟಿಲ್ಲ ಅನ್ನೋ ಮಾತು ಸತ್ಯವಾಗಲಿ ಎಂದು ಇಡೀ ತಂಡ ಶುಭ ಹಾರೈಸಿದೆ

ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಚಿತ್ರದ ಹೈಲೈಟ್‍ಗಳಲ್ಲಿ ಒಂದು