Naveen Shankar thanked the audience for their appreciation " Nodidavaru Enantare "

ಪ್ರೇಕ್ಷಕರ ಮೆಚ್ಚುಗೆ ಪಡೆದ ನೋಡಿದವರು ಏನಂತಾರೆ’ : ಧನ್ಯವಾದ ಹೇಳಿದ ನವೀನ್ ಶಂಕರ್ - CineNewsKannada.com

ಪ್ರೇಕ್ಷಕರ ಮೆಚ್ಚುಗೆ ಪಡೆದ ನೋಡಿದವರು ಏನಂತಾರೆ’ : ಧನ್ಯವಾದ ಹೇಳಿದ ನವೀನ್ ಶಂಕರ್

ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿರುವ ನವೀಶ್ ಶಂಕರ್ ನಟನೆಯ ನೋಡಿದವರು ಏನಂತಾರೆ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಯುವ ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಪಾತ್ರಕ್ಕೆ ನವೀಶ್ ಶಂಕರ್ ಜೀವ ತುಂಬಿದ ರೀತಿಗೆ ಪ್ರೇಕ್ಷಕ ಫಿದಾ ಆಗಿದ್ದಾರೆ.

ನವೀನ್ ಪಾತ್ರವಲ್ಲ ಇಡೀ ತಾರಾಬಳಗದ ಅಭಿನಯ, ಕುಲದೀಪ್ ನಿರ್ದೇಶನ ಎಲ್ಲಾ ವಿಭಾಗಗಳಿಂದಲೂ ನೋಡಿದವರು ಏನಂತಾರೆ ಚಿತ್ರ ಪ್ರೇಕ್ಷಕರನ್ನು ಬಹುವಿಧವಾಗಿ ಆವರಿಸಿಕೊಂಡಿದೆ. ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ಈ ವೇಳೆ ನಟ ನವೀನ್ ಶಂಕರ್ ಮಾತನಾಡಿ,ಪಿಕ್ಚರ್ ಮಾಡಿರುತ್ತೇವೆ. ನಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳುತ್ತೇವೆ. ಆದರೆ ಥಿಯೇಟರ್ ಬರುವ ತನಕ ಮಾತ್ರ. ಥಿಯೇಟರ್ ಬಂದಮೇಲೆ ಪ್ರೇಕ್ಷಕರು ಜೊತೆಯಾಗುತ್ತಾರೆ. ಅಲ್ಲಿಂದ ಮತ್ತೊಂದಷ್ಟು ಜನಕ್ಕೆ ಗೊತ್ತಾಗುತ್ತದೆ. ಅವರು ಮತ್ತೊಂದಿಷ್ಟು ಜನರನ್ನು ಕರೆದುಕೊಂಡು ಬರುತ್ತಾರೆ. ಇದು ಕೇಲವ ಕೆಲವು ಸಿನಿಮಾಗಳಿಗೆ ಆಗುತ್ತದೆ. ಈ ಕೆಲವೇ ಕೆಲವು ಸಿನಿಮಾಗಳಲ್ಲಿ ನಾವು ಕೂಡ ಒಬ್ಬರು . ಅದೇ ಖುಷಿಯಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತಿದ್ದೇವೆ.

ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin