Newcomer 1979 poster released: Actor Chetan supports

ಹೊಸಬರ 1979 ಪೋಸ್ಟರ್ ಬಿಡುಗಡೆ: ನಟ ಚೇತನ್ ಬೆಂಬಲ - CineNewsKannada.com

ಹೊಸಬರ 1979 ಪೋಸ್ಟರ್ ಬಿಡುಗಡೆ: ನಟ ಚೇತನ್ ಬೆಂಬಲ

ಯುವ ಪ್ರತಿಭೆಗಳ “1979” ಚಿತ್ರದ ಪೋಸ್ಟರ್ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಅಹಿಂಸಾ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕ್ರೀಡಾಪಟು, ಡಾ.ಬಿ.ಎಂ.ಶ್ರೀನಿವಾಸ್ ಬೀರಮಾನಹಳ್ಳಿ ಚಿತ್ರ ನಿರ್ಮಾಣ ಮಾಡಿದ್ದು ಪುಷ್ಪರಾಜ್ ಆಕ್ಷನ್ ಕಟ್ ಹೇಳಿದ್ದಾರೆ

ನಿರ್ದೇಶಕ ಪುಷ್ಪರಾಜ್ ಮಾತನಾಡಿ 1904 ರಿಂದ 1979ರ ವರೆಗೆ ವೆಸ್ಟ್‍ಬೆಂಗಾಲ್‍ದಲ್ಲಿ ನಡೆದಂತ ಸತ್ಯ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸೃಷ್ಟಿಸಿದ ಕಾಲ್ಪನಿಕ ಕಥೆಯಲ್ಲಿ ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಪಿರಿಯಾಡಿಕ್ ಡ್ರಾಮಾ ಕಥೆಯಲ್ಲಿ ಕೆಲವು ಪಾತ್ರ ಸೃಷ್ಟಿಸಲಾಗಿದೆ. ನಿರಾಶ್ರಿತ ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ. ಅಲ್ಲಿನ ದಬ್ಬಾಳಿಕೆ ವಿರುದ್ದ ಕ್ರಾಂತಿ ಹೇಗೆ ಶುರುವಾಗುತ್ತದೆ ಎಂದು ಹೇಳಿದರು

ನಟ ಚೇತನ್ ಮಾತನಾಡಿ, ನಿರಾಶ್ರಿತರ ಕಥೆಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲದರಬಹುದು. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಪ್ರಸರಿಸುತ್ತಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಕಥೆಗಳನ್ನು ಕರ್ನಾಟಕಕ್ಕೆ ತಂದು, ಇತಿಹಾಸದಲ್ಲಿ ಮುಚ್ಚಿ ಹಾಕಿರುವ ವಿಷಯಗಳನ್ನು ಜನತೆಗೆ ಪರಿಚಿಯಿಸುವ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಪ್ರಮುಖ ಪಾತ್ರದಲ್ಲಿ ಅಜ್ಜು, ಪ್ರಾಣ್ವಿ, sಸುಜಿತ್, ಅಮೃತ ಇವರುಗಳು ಯೌವ್ವನ ಹಾಗೂ ಮುಪ್ಪಿನವರೆಗೂ ನಟನೆ ಮಾಡಿರುವ ಅನುಭವಗಳನ್ನು ಹಂಚಿಕೊಂಡರು. ದುರ್ಗಾ, ಪ್ರೀತಿ, ತಕ್ಷಾರಾಮ್, ನಿರಂಜನ್, ಧನುಷ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಜಸ್ವಂತ್ ಪಸುಪುಲೇಟಿ, ಛಾಯಗ್ರಹಣ ಚಲಾಕಿ ಚರಣ್, ಸಂಕಲನ ವಸಂತ್, ಕಲರಿಸ್ಟ್ ದೀಪಕ್ ಕೊಂಡೂರು ಅವರದಾಗಿದೆ. ಕೋಲಾರ, ತೇರಳ್ಳಿ, ಯರಗೋಳ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin