Actress Priyanka Upendra's "September 21" is all set for release

ನಟಿ ಪ್ರಿಯಾಂಕ ಉಪೇಂದ್ರ ನಟನೆಯ “ಸೆಪ್ಟಂಬರ್ 21” ಬಿಡುಗಡೆಗೆ ಸಿದ್ದತೆ - CineNewsKannada.com

ನಟಿ ಪ್ರಿಯಾಂಕ ಉಪೇಂದ್ರ ನಟನೆಯ “ಸೆಪ್ಟಂಬರ್ 21” ಬಿಡುಗಡೆಗೆ ಸಿದ್ದತೆ

ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ “ಪ್ರಿಯಾಂಕಾ ಉಪೇಂದ್ರ” ಅವರು ನಟಿಸಿರುವ ಹೊಸ ಚಿತ್ರ “ಸೆಪ್ಟೆಂಬರ್ 21” ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ಮರೆವಿನ ಕಾಯಿಲೆ ಸುತ್ತ ನಡೆಯುವ ಕಥೆ ಇದಾಗಿದ್ದು, “ರೋಗಿಗಿಂತ ಅವನ ಪಾಲನೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯ “ಎಂಬುದು ಚಿತ್ರದ ಅಡಿಬರಹವಾಗಿದೆ.

ಚಿತ್ರದ ನಿರ್ದೇಶನವನ್ನು 21 ವರ್ಷದ “ಕರೆನ್ ಕ್ರಿಷ್ಠಿ ಸುವರ್ಣ” ಮಾಡಿದ್ದಾರೆ.ಮೊದಲ ನಿರ್ದೇಶನದ ಮೊದಲ ಚಿತ್ರ.ಹಾಗೆ ಇದೇ ನವಂಬರ್ 20 ರಿಂದ ನವಂಬರ್ 24ರ ವರೆಗೆ ನಡೆಯುವ 56ನೇ ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.ಪ್ರಿಯಾಂಕ ಉಪೇಂದ್ರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದ ಮೊದಲ ಪೆÇೀಸ್ಟರ್ ಬಿಡುಗಡೆ ಮಾಡಲು ತೀರ್ಮಾನಿಸಿದೆ.

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ “ಇದು ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದ್ದು,ಅದನ್ನ ಅಷ್ಟೇ ಸೊಗಸಾಗಿ ಯುವ ನಿರ್ದೇಶಕಿ ಚಿತ್ರಿಕರಿಸಿದ್ದಾರೆ. ಮೊದಲ ಬಾರಿಗೆ ಮಧ್ಯಮ ವರ್ಗದ ಮಹಿಳೆಯ ಪಾತ್ರ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ

ಪ್ರಿಯಾಂಕ ಉಪೇಂದ್ರ ಅಲ್ಲದೇ ಅನೇಕ ಬಾಲಿವುಡ್ ನಟ ನಟಿಯರ ದಂಡೆ ಈ ಚಿತ್ರದಲ್ಲಿ ಇದೆ. ಮುಖ್ಯ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿ ಯ, ಝರಿನ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ,ಸಚಿನ್ ಪಾಟೆಕರ್ ನಟಿಸಿದ್ದಾರೆ.

ರಾಜಶೇಖರ್ ಕಥೆಗೆ, ವಿನಯ್ ಚಂದ್ರ ಸಂಗೀತವಿದ್ದು, ಅನಿಲ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.ಬಾಲಿವುಡ್ ನಿರ್ದೇಶಕ “ಇಮ್ತಿಯಜ್ ಆಲಿ “ಪತ್ನಿ “ಪ್ರೀತಿ ಆಲಿ”ತಮ್ಮ ” ಹಮಾರಾ ಮೂವಿ” ಸಹಭಾಗಿತ್ವ ದಲ್ಲಿ ನಿರ್ಮಾಣ ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin