Three generations of the same family act in the film "GST"

“ಜಿಎಸ್‍ಟಿ” ಚಿತ್ರದಲ್ಲಿ ಒಂದೇ ಕುಟಂಬದ ಮೂರು ತಲೆಮಾರು ನಟನೆ - CineNewsKannada.com

“ಜಿಎಸ್‍ಟಿ” ಚಿತ್ರದಲ್ಲಿ ಒಂದೇ ಕುಟಂಬದ ಮೂರು ತಲೆಮಾರು ನಟನೆ

ನಟ ಸೃಜನ್ ಲೋಕೇಶ್ ನಟನಾಗಿ, ನಿರ್ಮಾಪಕನಾಗಿ ಜನಪ್ರಿಯ. ಈಗ “ಜಿಎಸ್‍ಟಿ” ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ ಅವರ ತಾಯಿ ಗಿರಿಜಾ ಲೋಕೇಶ್ ಮತ್ತು ಪುತ್ರ ಸುಕೃತ್ ನಟಿಸಿದ್ದಾರೆ. ಒಂದೇ ಚಿತ್ರದಲ್ಲಿ ಕುಟುಂಬದ ಮೂರು ತಲೆಮಾರು ನಟಿಸಿರುವುದು ಚಿತ್ರದ ವಿಶೇಷ.

ಸಂದೇಶ್ ಎನ್ ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್‍ ಅರ್ಪಿಸುತ್ತಿದ್ದಾರೆ. ಚಿತ್ರ ಇದೇ ತಿಂಗಳ 28ರಂದು ತೆರೆಗೆ ಬರುತ್ತಿದೆ. ನಟ ಉಪೇಂದ್ರ ಟ್ರೇಲರ್ ತಮ್ಮದೇ ಆದ ರೀತಿಯಲ್ಲಿ ಆಕ್ಷನ್ ಹೇಳುವ ಮೂಲಕ ಟ್ರೇಲರ್ ಅನಾವರಣ ಮಾಡಿದರು. ಪ್ರಿಯಾಂಕ ಉಪೇಂದ್ರ,ನಟಿ ತಾರಾ ಅನುರಾಧ ಮತ್ತಿತ್ತರು ಚಿತ್ರದಲ್ಲಿದ್ದಾರೆ

ನಟ, ನಿರ್ದೇಶಕ ಸೃಹನ್ ಲೋಕೇಶ್ ಮಾತನಾಡಿ, ಜಿಎಸ್‍ಟಿ ಎಂದರೆ “ಘೋಸ್ಟ್ ಇನ್ ಟ್ರಬಲ್” ಎಂದು. ನಿರ್ದೇಶನ ನನ್ನ ಕನಸು ಅದನ್ನು ನಿರ್ಮಪಕ ಸಂದೇಶ್ ನನಸು ಮಾಡಿದ್ದಾರೆ. ತಾತಾ ಸುಬ್ವಯ್ಯ ನಾಯ್ಡು “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ಆನಂತರ ತಂದೆ ಲೋಕೇಶ್ ಅವರು ನಿರ್ದೇಶನದ “ಬುಜಂಗಯ್ಯನ ದಶಾವತಾರ”ದ ಮೂಲಕ ಬಾಲನಟನಾಗಿ ಚಿತ್ರರಂಗಕ್ಜೆ ಬಂದೆ. ಈಗ ನನ್ನ ಮಗ ಸುಕೃತ್ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ.ಇದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎನ್ನಬಹುದು ಎಂದರು.

ಚಿತ್ರದಲ್ಲಿ ತಾಯಿ, ನಾನು ಹಾಗೂ ನನ್ನ ಮಗ ಮೂರು ಜನ ನಟಿಸಿದ್ದೇವೆ. ಇದು ಹಾರಾರ್ ಚಿತ್ರವಾಗಿದರೂ, ನಗುವೇ ಪ್ರಧಾನ. ಯಾವುದೇ ಸಂದೇಶ ನೀಡದೆ ನಗುವಿನ ಮೂಲಕ ಜನರ ಮನಸ್ಸನ್ನು ಗೆಲ್ಲಲ್ಲಿದ್ದೇನೆ. ಚಿತ್ರದಲ್ಲಿ ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಇದೆ ಚಿತ್ರದಲ್ಲಿ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ನುರಿತ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ನವೆಂಬರ್ 28 ರಂದು ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು

ಮೊದಲ ಚಿತ್ರದ ನಿರ್ದೇಶನಕ್ಕೆ ಲೆಜೆಂಡ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ತಮ್ಮ ರುಜು ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು

ನಿರ್ಮಾಪಕ ಸಂದೇಶ್ ಮಾತನಾಡಿ ಚಿತ್ರದ ಕಥೆ ಕೇಳಿಲ್ಲ. ಸೃಜನ್ ಆತ್ಮೀಯ ಸ್ನೇಹಿತ. ಅವರು ಒಳ್ಳೆಯ ಚಿತ್ರ ಮಾಡಿರುತ್ತಾರೆ ಎಂಬ ನಂಬಿಕೆ ಇದೆ. ಸಂಸ್ಥೆ ನಿರ್ಮಾಣದ 34ನೇ ಚಿತ್ರ. ಎಂದಿನಂತೆ ಈ ಚಿತ್ರಕ್ಕೂ ನಿಮ್ಮೆಲ್ಲರ ಬೆಂಬಲವಿರಲಿ ಎಂದು ಹೇಳಿದರು.

ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ ಕನ್ನಡ ಚಿತ್ರರಂಗದ ಹಲವು ಪ್ರಥಮಗಳು ಸುಬ್ಬಯ್ಯ ನಾಯ್ಡು ಅವರ ಕುಟುಂಬದೆ ಆಗಿರುವುದು ನಮಗೆ ಹೆಮ್ಮೆ ಇದೆ. ಇದೇ ಮೊದಲ ಬಾರಿಗೆ ನನ್ನ ಮಗ ಸೃಜನ್ ಲೋಕೇಶ್ ನಿರ್ದೇಶನ ಮಾಡಿದ್ದಾನೆ. ನಾನು ಹಾಗೂ ನನ್ನ ಮೊಮ್ಮಗ ಸುಕೃತ್ ಈ ಚಿತ್ರದಲ್ಲಿ ನಟಿಸಿದ್ದೇವೆ. ನಮ್ಮ ಕುಟುಂಬಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲು ಎಂದರು

ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದ ನಾಯಕಿ ರಜನಿ ಭಾರದ್ವಾಜ್, ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಿರಿಯ ನಟ ಅಶೋಕ್ ಅವರು ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಚಿತ್ರಕ್ಕೆ ಶುಭ ಕೋರಿದರು.

ಚಿತ್ರದಲ್ಲಿ ಅಭಿನಯಿಸಿರುವ ಕಲಾವಿರಾದ ನಿವೇದಿತಾ ಗೌಡ, ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸೃಜನ್ ಲೋಕೇಶ್ ಪುತ್ರ ಸುಕೃತ್ ನಿರೂಪಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin