Newcomer 'Asuraru' Teaser Released: Film to hit the screens on November 1

ಹೊಸಬರ ‘ಅಸುರರು’ ಟೀಸರ್ ಬಿಡುಗಡೆ: ಚಿತ್ರ ನವೆಂಬರ್ 1ಕ್ಕೆ ತೆರೆಗೆ - CineNewsKannada.com

ಹೊಸಬರ ‘ಅಸುರರು’ ಟೀಸರ್ ಬಿಡುಗಡೆ: ಚಿತ್ರ ನವೆಂಬರ್ 1ಕ್ಕೆ ತೆರೆಗೆ

ಹುಲಿಬೇಟೆ ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ ಈಗ ದರೋಡೆ ಕಥೆ ಹೊತ್ತು ಬಂದಿದ್ದಾರೆ. ಅಸುರರು ಸಿನಿಮಾ ಟೀಸರ್ ಬಿಡುಗಡೆಯಾಗಿದೆ.

ಈ ವೇಳೆ ನಿರ್ದೇಶಕ ರಾಜ್ ಬಹದ್ದೂರ್ ಮಾತನಾಡಿ, ಈ ಹಿಂದೆ ನಾನು ಹುಲಿಬೇಟೆ ಸಿನಿಮಾ ಮಾಡಿದ್ದೆ. ತಾತಾ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಿಂದ್ದಾಗ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಸಬೇಕು ಎಂದಾಗ ಅಸುರರು ಸಿನಿಮಾ ಮಾಡಿದ್ದು. ಅಸುರರು ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ಕಳ್ಳತನ ದರೋಡೆ ಮಾಡುವುದು. ಅವರೇ ಅಸುರರು ಎಂದು ತಿಳಿಸಿದರು.

ನಾಯಕ ತಮ್ಮಣ್ಣ ಮಾತನಾಡಿ, ಸಿನಿಮಾ ಇಲ್ಲಿವರೆಗೂ ಬರಲು ಕಾರಣ ಇಡೀ ಸಿನಿಮಾ ತಂಡ..ಎಲ್ಲರೂ ಎಲ್ಲಾ ಕೆಲಸ ಮಾಡಿದ್ದಾರೆ. ನವೆಂಬರ್ ಒಂದು ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿದೆ ಎಂದರು.

ಅಸುರರು ಚಿತ್ರಕ್ಕೆ ರಾಜ್ ಬಹದ್ದೂರ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.

ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣವಾಗಿರುವ ಅಸುರರು ಸಿನಿಮಾಗೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ಅಸುರರು ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿಕೊಡಲಾಗಿದೆ. ಟೀಸರ್ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಚಿತ್ರತಂಡ ನವೆಂಬರ್ 1ಕ್ಕೆ ಸಿನಿಮಾ ತೆರೆಗೆ ತರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin