"O Andala Rakshasi" in Telugu became "O Sundara Rakshasi" in Kannada

ತೆಲುವಿನ “ಓ ಅಂದಾಲಾ ರಾಕ್ಷಸಿ” ಕನ್ನಡದಲ್ಲಿ “ಓ ಸುಂದರ ರಾಕ್ಷಸಿ” ಸಿದ್ದ - CineNewsKannada.com

ತೆಲುವಿನ “ಓ ಅಂದಾಲಾ ರಾಕ್ಷಸಿ” ಕನ್ನಡದಲ್ಲಿ “ಓ ಸುಂದರ ರಾಕ್ಷಸಿ” ಸಿದ್ದ

ಈಗಾಗಲೇ ತೆಲುಗಿನ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ತೆರೆಗೆ ಬಂದಿವೆ. ಕನ್ನಡದ ಹಲವು ಸಿನಿಮಾಗಳು ತೆಲುಗಿನಲ್ಲೂ ಕಮಾಲ್ ಮಾಡಿವೆ. ಇದೀಗ ಅದೇ ರೀತಿ ತೆಲುಗಿನಲ್ಲಿ ನಿರ್ಮಾಣವಾಗಿರುವ “ಓ ಅಂದಾಲಾ ರಾಕ್ಷಸಿ” ಸಿನಿಮಾ ಕನ್ನಡದಲ್ಲಿ ‘ಓ ಸುಂದರ ರಾಕ್ಷಸಿ” ಹೆಸರಿನೊಂದಿಗೆ ಡಬ್ ಆಗಿ ಬಿಡುಗಡೆ ಆಗಲಿದೆ.

ಸದ್ಯ ಚಿತ್ರೀಕರಣ ಮುಗಿಸಿಕೊಂಡಿರುವ “ಓ ಸುಂದರ ರಾಕ್ಷಸಿ” ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ. ಸ್ಕೈ ಈಸ್ ದಿ ಲಿಮಿಟ್ ಬ್ಯಾನರ್‍ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಈ ಹಿಂದೆ “ಶಾಲಿನಿ ಎ ಕ್ಯೂಟ್ ಡೆವಿಲ್” ಮತ್ತು “ಕೆಎಸ್ 100” ಸಿನಿಮಾ ನಿರ್ದೇಶನ ಮಾಡಿದ್ದ ಶೆರಝ್ ಮೆಹ್ದಿ ಇದೀಗ ಓ ಅಂದಾಲಾ ರಾಕ್ಷಸಿ ಚಿತ್ರ ನಿರ್ದೇಶಿಸಿದ್ದಾರೆ. ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಅಡ್ವೆಂಚರ್ ಶೈಲಿಯ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ಶೆರಝ್ ಮೆಹ್ದಿ ನಟಿಸಿದ್ದಾರೆ. ಈ ಹಿಂದೆಯೂ ಹಲವು ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ವಿಹಾಂಶಿ ಹೆಗೆಡೆ, ಶೆರಝ್ ಮೆಹ್ದಿ, ಕೃತಿ ವರ್ಮಾ, ನೇಹಾ ದೇಶಪಾಂಡೆ ಸುಮನ್ ತಲ್ವಾರ್, ತಮ್ಮಾ ರೆಡ್ಡಿ ಭಾರದ್ವಾಜ್, ಅನಂತ್ ಬಾಬು, ಪ್ರಿಯಾ, ಕೃಷ್ಣ ಮುಂತಾದವರು “ಓ ಸುಂದರ ರಾಕ್ಷಸಿ” ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಇನ್ನು ತಾಂತ್ರಿಕ ಬಳಗದಲ್ಲಿ ಈ ಚಿತ್ರಕ್ಕೆ ಶೇರ್ ಎಂಬುವವರು ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಗೀತವೂ ಶೇರ್ ಅವರದ್ದೆ. ಕಾವೇಟಿ ಪ್ರವೀಣ್ ಛಾಯಾಗ್ರಹಣವಿದೆ. ಸಾಯಿ ರಾಜ್ ನೃತ್ಯ ನಿರ್ದೇಶನ, ಮುತ್ತು, ನಾಣಿ, ನಾಗು ಬಾಬು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಶಾಲಿಯಾನ್ ಮಲ್ಲೆ ಸಾಹಸ ನಿರ್ದೇಶನ ಹಾಗೂ ಡಿ.ವಿ ಪ್ರಭು ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ.

“ಓ ಸುಂದರ ರಾಕ್ಷಸಿ” ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಹೈದರಾಬಾದ್, ಗೋವಾದಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ. ಈಗಾಗಲೇ ಪೆÇೀಸ್ಟ್ ಪೆÇ್ರಡಕ್ಷನ್ ಹಂತದಲ್ಲಿದ್ದು, ಇದೇ ಡಿಸೆಂಬರ್ ವೇಳೆಗೆ ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin