October 18 is a magical curtain that revolves around faith and disbelief

ಅಕ್ಡೋಬರ್ 18ಕ್ಕೆ ನಂಬಿಕೆ ಅಪನಂಬಿಕೆಗಳ ಸುತ್ತ ಸಾಗುವ “ಮಾಂತ್ರಿಕ” ತೆರೆಗೆ - CineNewsKannada.com

ಅಕ್ಡೋಬರ್ 18ಕ್ಕೆ ನಂಬಿಕೆ ಅಪನಂಬಿಕೆಗಳ ಸುತ್ತ ಸಾಗುವ “ಮಾಂತ್ರಿಕ” ತೆರೆಗೆ

ನಕಾರಾತ್ಮಕ ಶಕ್ತಿಗಳ ಸತ್ಯಾಸತ್ಯತೆಯ ಬಗ್ಗೆ ಹುಡುಕಾಟ ನಡೆಸುವ ಘೋಸ್ಟ್ ಹಂಟರ್ ಒಬ್ಬನ ಕಥೆ ಇಟ್ಟುಕೊಂಡು ತಯಾರಾದ ಚಿತ್ರ “ಮಾಂತ್ರಿಕ”. ಅಕ್ಟೋಬರ್ 18 ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಐಟಿ ಹಿನ್ನೆಲೆಯಿಂದ ಬಂದ ವ್ಯಾನವರ್ಣ ಜಮ್ಮುಲ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಘೋಸ್ಟ್ ಹಂಟರ್ ಪಾತ್ರ ನಿರ್ವಹಿಸಿದ್ದಾರೆ,
ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ ವ್ಯಾನ ವರ್ಣ ಜಮ್ಮುಲ ಕೆಲಸ ಮಾಡಿದ್ದಾರೆ

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ವ್ಯಾನ ವರ್ಣ ಜಮ್ಮುಲ ಮಾತನಾಡಿ ಆಪನಂಬಿಕೆ ಮತ್ತು ಅಪನಂಬಿಕೆಗಳ ಸುತ್ತ ಸಾಗುವ ಕಥೆಯಿದು. ಭ್ರಮೆ ಬಿಟ್ಟು ವಾಸ್ತವಕ್ಕೆ ಬನ್ನಿ ಎನ್ನುತ್ತಾ,ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಟೈಂ ಟ್ರಾವೆಲ್ ಕಥೆಯಿದು. ವ್ಯಾಸ ವಾನ್ ಕೃಷ್ಟ ಎಂಬ ಪಾತ್ರ ನಿರ್ವಹಿಸಿದ್ದೇನೆ. ಕರ್ನಾಟಕ – ಮಹಾರಾಷ್ಟ್ರದ ಗಡಿ ಮಾರ್ನುಡಿ ಎಂಬ ಸ್ಥಳದಲ್ಲಿ ನಡೆಯುವ ಕಥೆ. ಮಾರ್ನುಡಿ ಎಂದರೆ ಸಂಸ್ಕೃತ ದಲ್ಲಿ ಶಬ್ದ ಎನ್ನುವ ಅರ್ಥವಿದೆ .ಮಾನವ ದಿನದ 24 ಘಂಟೆಯೂ ಮಾನವ ಭಯದಲ್ಲೇ ಬದುಕುತ್ತಿದ್ದಾನೆ. ಮೊದಲು ಅ ಭಯವನ್ನು ನಮ್ಮ‌ ಮನಸಿನಿಂದ ತೆಗೆದುಹಾಕಿ, ಕಮ್ ಟು ರಿಯಾಲಿಟಿ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದರು

ಮೂಡನಂಬಿಕೆಯಿಂದ ಆಚೆ ಬನ್ನಿ ಎನ್ನುವ ಸಂದೇಶವನ್ನು ಚಿತ್ರದ ಮೂಲಕ ಹೇಳ ಹೊರಟಿದ್ದೇವೆ. ಹಾರರ್ ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನ ಮಾಡಲಾಗಿದೆ. ನಂಬಿಕೆ ಮತ್ತು ಮೂಡ ನಂಬಿಕೆ ಯಾವುದು ಎನ್ನುವುದು ಅರ್ಥ ಮಾಡಿಕೊಳ್ಳಿ ಎಂದು ಹೇಳುವ ಜೊತೆಗೆ ಮಾಟ ಮಂತ್ರದ ಕುರಿತು ಕೂಡ ಚಿತ್ರದಲ್ಲಿ ಹೇಳಲಾಗಿದೆ ಎಂದು ಹೇಳಿದರು.

ವಿತರಕ ವಿಜಯ್ ಕುಮಾರ್ ಮಾತನಾಡಿ 40 ರಿಂದ 50 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ದೆವ್ವ ಅನ್ನೋದು ಇದೆಯೋ, ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎನ್ನುವುದರ ಸುತ್ತ ಸಾಗುವ ಕಥೆ ಈ ಚಿತ್ರದಲ್ಲಿದ್ದು, ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ನಾಯಕಿಯರಾಗಿ ನಟಿಸಿದ್ದಾರೆ.

ಕಾರ್ಯಕಾರಿ ನಿರ್ಮಾಪಕಿ, ನಿರ್ದೇಶನದಲ್ಲೂ ಸಾಥ್ ನೀಡಿದ ವ್ಯಾನವರ್ಣ ಅವರ ಪತ್ನಿ ಆಯನ ಮಾತನಾಡಿ ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ಈಗಾಗಲೇ ಸಿನಿಮಾ ನೋಡಿದ್ದೇನೆ. ಜಗತ್ತಿನಲ್ಲಿ ಮಾಟ, ಮಂತ್ರ ಅನ್ನೋದು ಇದೆಯಾ ಎಂಬುದರ ರಿಯಾಲಿಟಿ ಬಗ್ಗೆ ಹೇಳುವ ಚಿತ್ರವಿದು. ಅದೇ ಕಾರಣಕ್ಕೆ ಈ ಸಿನಿಮಾ ನಿರ್ಮಾಣದಲ್ಲಿ ನಾನೂ ಜೊತೆಯಾದೆ ಎಂದರು.

ಮೂಢನಂಬಿಕೆಗಳಿಂದ ಮೂಢರಾಗಬೇಡಿ, ಅದರ ಹಿಂದಿನ ಸತ್ಯಾಂಶ ಬೇರೇನೇ ಇರುತ್ತೆ, ಅದನ್ನು ನೋಡಿದ ಮೇಲೆ ನಿರ್ಧರಿಸಿ ಅಂತ ಇದರಲ್ಲಿ ಹೇಳಿದ್ದೇವೆ. ಬೆಂಗಳೂರು, ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಖಾಲಿ ಇದ್ದ ಮಾಲ್‌ವೊಂದರಲ್ಲಿ ಪ್ರಮುಖ ಭಾಗದ ಚಿತ್ರೀಕರಣ ಮಾಡಿದ್ದೇವೆ. ಮಾಲ್‌ನಲ್ಲಿ ಶೂಟ್ ಮಾಡುವಾಗ ಚಿತ್ರತಂಡಕ್ಕೆ ಸಾಕಷ್ಟು ವಿಚಿತ್ರ ಅನುಭವಗಳಾಗಿವೆ ಎಂದು ಹೇಳಿದರು,

ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಸಂಕಲನ ಮಾಡಿದ್ದು, ಸ್ಟಾಲಿನ್ ಸಂಗೀತ ಸಂಯೋಜನೆ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಛಾಯಾಗ್ರಹಣ, ಲಯನ್ ಜಿ.ಗಂಗರಾಜು ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin