Martin Film Review ; ಮದವೇರಿದ ಮದಗಜಗಳ ಕಾಳಗ ” ಮಾರ್ಟಿನ್ ” : ದೃಶ್ಯ ವೈಭವದ ಅನಾವರಣ

ಚಿತ್ರ : ಮಾರ್ಟಿನ್
ಅವಧಿ : 147.40 ನಿಮಿಷ
ನಿರ್ದೇಶನ : ಎ.ಪಿ ಅರ್ಜುನ್
ತಾರಾಗಣ: ದೃವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್,
ದೀಪಕ್, ಚಿಕ್ಕಣ್ಣ , ಸಿದ್ಲಿಂಗ್ ಶೀಧರ್, ಸುಕೃತ ವಾಗ್ಲೆ, ಅಚ್ಯುತ್ ಕುಮಾರ್ ಮತ್ತಿತರರು
ರೇಟಿಂಗ್ : *** 3.5 / 5
ನೀರಲ್ಲಿ ಸ್ನಾನ ಮಾಡಬೇಕೆನ್ನೋರು ಸೈಡ್ ಗೆ ಹೋಗಿ.. ರಕ್ತದಲ್ಲಿ ಸ್ನಾನ ಮಾಡಬೇಕು ಎನ್ನುವವರು ಬನ್ನಿ…. ಹೀಗಂತ ಖಡಕ್ ಡೈಲಾಗ್ ಹೊಡೆದ ಮರುಕ್ಷಣವೇ .. ನಾನ್ ಯಾರ್ ಎನ್ನುವ ಆತನಿಗೆ ತನ್ನ ಗುರುತು ಯಾವುದು ಎನ್ನುವುದೇ ಗೊಂದಲ.
ಎಂತಾ ಬಲಾಡ್ಯರೇ ಎದುರು ಬಂದರೂ ಅವರಿಗೆ ಮಣ್ಣು ಮುಕ್ಕುಸಿ ವಿಚಿತ್ರ ನಗೆ ಬೀರಿ ಕಣ್ಣಲ್ಲೇ ಮಾತನಾಡುವ ಆತ ಯಾರು. ಯಾಕೆ ಹೀಗ್ಯಾದ ..ಪಾಕಿಸ್ತಾನದ ಇಸ್ಲಾಬಾಬಾದ್ ,ನ್ಯೂಯಾರ್ಕ್, ಮುಂಬೈ ಮತ್ತು ಮಂಗಳೂರಿಗೂ ಇರುವ ಸಂಬಂಧವಾದರೂ ಏನು.. ಈ ನಡುವೆ ಕಸ್ಟಮ್ ಅಧಿಕಾರಿಗೂ ಆ ಗ್ಯಾಂಗ್ ಸ್ಟರ್ ಮತ್ತು ಮಾಫಿಯಾದ ಮಾಸ್ಟರ್ ಮೈಂಡ್ ಗೂ ಏನು ಲಿಂಕ್.. ಇದೆಲ್ಲದವರ ಮಿಶ್ರಣವೇ ” ಮಾರ್ಟಿನ್” .
ನಿರ್ದೇಶಕ ಎ.ಪಿ ಅರ್ಜುನ್ ಮತ್ತು ನಟ ದೃವ ಸರ್ಜಾ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಅದ್ದೂರಿ, ಬಹದ್ದೂರು ಚಿತ್ರಗಳಿಗಿಂತ ” ಮಾರ್ಟಿನ್” ವಿಭಿನ್ನವಾಗಿ ಮೂಡಿ ಬಂದಿದೆ. ಈ ಮೂಲಕ ಕನ್ನಡದ ಪ್ರೇಕ್ಷಕರಿಗೆ ನಿರ್ದೇಶಕ ಎ.ಪಿ ಅರ್ಜುನ್ ದೃಶ್ಯ ವೈಭವದ ತಾಂತ್ರಿಕ ಕೈಚಳಕವನ್ನು ತೆರೆಯ ಮೇಲೆ ಅನಾವರಣ ಮಾಡಿದ್ದಾರೆ. ಪ್ರತಿ ಪ್ರೇಮ್ ನಲ್ಲಿ ನಿರ್ದೇಶಕ ಎಪಿ ಅರ್ಜುನ್ ಕುಸುರಿ ಮತ್ತು ನಟ ದೃವ ಸರ್ಜಾ ಶ್ರಮ ಎದ್ದು ಕಾಣುತ್ತದೆ.
ವಿದೇಶದಿಂದ ಅವಧಿ ಮೀರಿದ ಔಷಧಿಯನ್ನು ಭಾರತಕ್ಕೆ ತಂದು ಅದಕ್ಕೆ ಹೊಸ ಬ್ರಾಂಡ್ ಬಣ್ಣ ಕಟ್ಟಿ ಅಮಾಯಕ ಜನರ ಜೀವದ ಜೊತೆ ಚಲ್ಲಾಟ ಆಡುವ ವೈದ್ಯಕೀಯ ಲೋಕದ ಮಾಫಿಯಾ ಒಂದೆಡೆಯಾದರೆ ಜಗತ್ತಿನಲ್ಲಿ ತನ್ನದೇ ಹವಾ ನಡೆಯಬೇಕು ಎಂದ ಸಾಮ್ರಾಜ್ಯ ಕಟ್ಟಿಕೊಂಡ ಧೈತ್ಯ ಗ್ಯಾಂಗ್ ಸ್ಟರ್ ಮತ್ತೊಂದು ಕಡೆ ತಾಯ್ನಾಡಿನ ವಿಷಯದಲ್ಲಿ ಎಂದಿಗೂ ರಾಜಿಯಾದ ಪ್ರಾಮಾಣಿಕ ಕಸ್ಟಮ್ ಅಧಿಕಾರಿ ನಡುವೆ ನಡೆಯುವ ಕಥನ.
ಪಾಕಿಸ್ತಾನದ ನೆಲದಿಂದ ಆರಂಭವಾಗುವ ಕಥನ ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚು ಮಾಡಿದೆ. ಮುಂದೇನು ಎನ್ನುವುದು ಮತ್ತಷ್ಟು ಕುತೂಹಲ ಹೆಚ್ಚಿಸುತ್ತದೆ. ಮಾರ್ಟಿನ್ , ಅರ್ಜುನ್ .. ಮಾಫಿಯಾ ಡಾನ್, ಹೀಗೆ ಎಲ್ಲರ ನಡುವೆ ಸಾಗಿದೆ.
ಮಂಗಳೂರು ಬಂದರಿನ ಕಸ್ಟಮ್ ಅಧಿಕಾರಿ ಅರ್ಜುನ್ (ದೃವ ಸರ್ಜಾ) ಪ್ರಾಮಾಣಿಕ ಅಧಿಕಾರಿ ,ಅನಿರೀಕ್ಷಿತವಾಗಿ ಭೇಟಿಯಾದ ಹುಡುಗಿ ಪ್ರೀತಿ( ವೈಭವಿ ಶಾಂಡಿಲ್ಯ) ಮೇಲೆ ಪ್ರೀತಿ ಚಿಗುರೊಡೆಯುತ್ತೆ. ಮದುವೆಯೂ ನಿಶ್ಚಿತವಾಗಿರುತ್ತದೆ. ಜಗತ್ತಿನ ಯಶಸ್ವಿ ಗ್ಯಾಂಗ್ ಮಾರ್ಟಿನ್ ( ದೃವ ಸರ್ಜಾ) ದೈತ್ಯ ಯಾವುದೇ ಕೆಲಸವಾದರೂ ನೀರು ಕುಡಿದಷ್ಟು ಸಲೀಸು. ಮಾಫಿಯಾ ಡಾನ್ ನಿಂದ ಸುಫಾರಿ ಪಡೆದ ಮಾರ್ಟಿನ್ ಹಾಗು ಅರ್ಜುನ್ ನೋಡಲು ಒಂದೇ ರೀತಿ ಇರುವವರು.
ಇಂತಹ ಮಾರ್ಟಿನ್, ಅರ್ಜುನ್ ಮುಖಾಮುಖಿಯಾದಾಗ ಆಗುವುದಾದರು ಏನು, ಮಾರ್ಟಿನ್ ಹುಡುಕಿಕೊಂಡು ಅರ್ಜುನ್ ಪಾಕಿಸ್ತಾನಕ್ಕೆ ಹೋಗುವುದಾದರೂ ಯಾತಕ್ಕೆ ಎನ್ನುವುದು ಮಾರ್ಟಿನ್ ಕುತೂಹಲದ ಆಗರ.ಅದನ್ನು ಚಿತ್ರಮಂದಿರದಲ್ಲಿ ನೋಡಿದರೆ ಚೆನ್ನ
ನಿರ್ದೇಶಕ ಎ.ಪಿ ಅರ್ಕುನ್,ಭರಪೂರ ಆಕ್ಷನ್ ಜೊತೆಗೆ ಪ್ರೀತಿಯ ಲೇಪನ ಹಚ್ಚಿ ಪ್ರೇಕ್ಷಕರ ಮುಂದೆ ವಿಶ್ಯುವಲ್ ವೈಭವ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಪ್ರತಿ ಪ್ರೇಮ್ ನಲ್ಲಿ ದೃಶ್ಯ ವೈಭವದ ಅದ್ದೂರಿ ತನದ ಎದ್ದು ಕಾಣುತ್ತದೆ.
ಮದ್ಯಂತರ ಅವಧಿಯ ತನಕ ಮಾರ್ಟಿನ್ ಯಾರು, ಅರ್ಜುನ್ ಯಾರು ಎನ್ನುವ ಗೊಂದಲದಲ್ಲಿಯೇ ಸಾಗಿದೆ. ದ್ವಿತೀಯಾರ್ಧದಲ್ಲಿ ಅದಕ್ಕೆ ಉತ್ತರ ಸಿಕ್ಕಿದೆ.
ನಟ ದೃವ ಸರ್ಜಾ ನಟನೆಯ ಮೂಲಕ ಬಹುಪರಾಕ್ ಹಾಕಿಸಿಕೊಂಡಿದ್ದಾರೆ. ಎರಡು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರ. ಮನ ಸೂರೆಗೊಂಡಿದ್ದಾರೆ. ಕಸ್ಟಮ್ ಅಧಿಕಾರಿ ಮತ್ತು ಗ್ಯಾಂಗ್ ಸ್ಟರ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇಬ್ಬರ ಹೋರಾಟ ಮದವೇರಿದ ಮದಗಜಗಳ ಕಾದಾಟದಂತಿದೆ.
ವೈಭವಿ ಶಾಂಡಿಲ್ಯ,ಅನ್ವೇಷಿ ಜೈನ್, ಚಿಕ್ಕಣ್ಣ, ಅಚ್ಯುತ್ ಕುಮಾರ್, ದೀಪಕ್, ಸುಕೃತಾ ವಾಗ್ಲೆ ಮತ್ತಿತರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.
ಈ ನಡುವೆ ರೈನೋ ಆಗಮನ ಭಾಗ ಎರಡರ ಮುನ್ಸೂಚನೆಯೇ ಕುತೂಹಲಕ್ಕೆ ಚಿತ್ರತಂಡವೇ ಉತ್ತರಿಸಬೇಕು
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****