ಯುವ ರಾಜ್ ಕುಮಾರ್ ಎರಡನೇ ಸಿನಿಮಾ: ಕನ್ನಡದ ಮೂರು ಪ್ರತಿಷ್ಠಿತ ಸಂಸ್ಥೆಗಳ ನಿರ್ಮಾಣ

“ಯುವ ” ಚಿತ್ರದ ಬಳಿಕ ದೊಡ್ಮನೆ ಕುಟುಂಬದ ಕುಡಿ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರಕ್ಕೆ ಕನ್ನಡ ಚಿತ್ರರಂಗದ ಮೂರು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಜೊತೆಯಾಗಿವೆ. ಹೀಗಾಗಿ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್- ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್, ಜಯಣ್ಣ- ಭೋಗೇಂದ್ರ ಅವರ ಜಯಣ್ಣ ಫಿಲ್ಮ್ , ಮತ್ತು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್ ಜಿ ನಿರ್ಮಾಣ ಸಂಸ್ಥೆಗಳು ಜೊತೆಗೂಡಿ ಯುವ ರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿವೆ
ಆಯುಧ ಪೂಜೆಯ ಶುಭ ಸಂದರ್ಭದಲ್ಲಿ #ಯುವ -2 ಚಿತ್ರ ಕೈಗೆತ್ತಿಕೊಂಡಿರುವ ವಿಷಯವನ್ನು ಪಿಆರ್ ಕೆ, ಜಯಣ್ಣ ಪಿಲ್ಲ್ನ್ ಮತ್ತು ಕೆಆರ್ ಜಿ ಸಂಸ್ಥೆಗಳು ಅಧಿಕೃತವಾಗಿ ಪ್ರಕಟಿಸಿವೆ.

ಹೊಸ ಚಿತ್ರವನ್ನು ರಕ್ತಸಿಕ್ತ ಕೈನಲ್ಲಿ ಲಾಂಗ್ ಹಿಡಿದಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವಂಬರ್ 1 ರಂದು ಅಧಿಕೃತವಾಗಿ ಚಿತ್ರದ ಶೀರ್ಷಿಕೆ ಮತ್ತು ಮೊದಲ ನೋಟ ಹಾಗು ಇನ್ನಿತರೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಮುಂದಾಗಿದೆ.
ರೋಹಿತ್ ಪದಕಿ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ Sing aren’t Always Red ಎನ್ನುವ ಅಡಿ ಬರಹ ನೀಡಿರುವುದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಮೂರು ನಿರ್ಮಾಣ ಸಂಸ್ಥೆಗಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಶಕ್ತಿ ಸಾಮರ್ಥ್ಯ ಮತ್ತು ನಿರ್ಮಾಣ ತಾಕತ್ತು ತೋರಿಸಿದ ನಿರ್ಮಾಣ ಸಂಸ್ಥೆಗಳು. ಇಂತಹ ಮೂರು ಸಂಸ್ಥೆಗಳು ಜೊತೆಗೂಡಿರುವುದು ಯುವ ರಾಜ್ ಕುಮಾರ್ ನಟನೆಯ ಚಿತ್ರದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹೆಚ್ಚು ಮಾಡಿದೆ.