Om Prakash Rao returns as "Phoenix": Three heroines in the female lead film

“ಫೀನಿಕ್ಸ್” ನಂತೆ ಮತ್ತೆ ಬಂದ ಓಂಪ್ರಕಾಶ್ ರಾವ್ : ಮಹಿಳಾ ಪ್ರಧಾನ ಚಿತ್ರದಲ್ಲಿ ಮೂವರು ನಾಯಕಿಯರು - CineNewsKannada.com

“ಫೀನಿಕ್ಸ್” ನಂತೆ ಮತ್ತೆ ಬಂದ ಓಂಪ್ರಕಾಶ್ ರಾವ್ : ಮಹಿಳಾ ಪ್ರಧಾನ ಚಿತ್ರದಲ್ಲಿ ಮೂವರು ನಾಯಕಿಯರು

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರ ನೀಡಿರುವವರು ನಿರ್ದೇಶಕ ಓಂಪ್ರಕಾಶ್ ರಾವ್. ಚಿತ್ರರಂಗದಿಂದ ಬಿಡುಗಡೆ ಪಡೆದಿದ್ದ ಓಂ ಪ್ರಕಾಶ್ ರಾವ್ ಇದೀಗ “ಫೀನಿಕ್ಸ್” ನಂತೆ ಎದ್ದು ಬಂದಿದ್ದಾರೆ. ಈ ಮೂಲಕ ಅಭಿಮಾನಿಗಳ ನಿರಾಸೆ ದೂರ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

Actress Nimika Ratnakar

ಇತ್ತೀಚಿಗೆ ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರಗಳು ಯಾವುದು ಬಂದಿಲ್ಲ ಎಂಬ ನಿರಾಸೆ ಅವರ ಅಭಿಮಾನಿ ವಲಯದಲ್ಲಿತ್ತು.ಪ್ರಸ್ತುತ ಅವರು ನಿರ್ದೇಶಿಸುತ್ತಿರುವ “ಫೀನಿಕ್ಸ್” ಎಂಬ ಚಿತ್ರದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗಲಿದೆ. ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್, “ಫೀನಿಕ್ಸ್” ನನ್ನ ನಿರ್ದೇಶನದ 49 ನೇ ಚಿತ್ರ. ನಮ್ಮ ಸಂಸ್ಥೆಯ ನಿರ್ಮಾಣದ 4ನೇ ಚಿತ್ರ. ಇದೊಂದು ಮಹಿಳಾ ಪ್ರಾಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಮರ್ಷಿಯಲ್ ಚಿತ್ರವೊಂದಕ್ಕೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿಮಿಕಾ ರತ್ನಾಕರ್, ಶಿಲ್ಪ ಶೆಟ್ಟಿ ಹಾಗೂ ಕೃತಿಕಾ ಲೋಬೊ ಮೂವರು ನಾಯಕಿಯರು.

Actress Shilpa Shetty

ಉಳಿದಂತೆ ಚಿತ್ರದಲ್ಲಿ ಜಗದೀಶ್, ಭಾಸ್ಕರ್ ಶೆಟ್ಟಿ ಮತ್ತು ಪ್ರತಾಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿನ್ನಿ ವಿನೋದ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರದೀಪ್ ರಾಹುತ್ ಮುಖ್ಯ ಖಳನಟನಾಗಿ ನಟುಸುತ್ತಿದ್ದಾರೆ. ಸ್ವಸ್ತಿಕ್ ಶಂಕರ್, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರು, ಜರ್ಮನ್ ಹಾಗೂ ಆಸ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.

Actress Kritika lobo

ಸುಬ್ರಹ್ಮಣಿ ಅವರು ಬರೆದಿರುವ ಕಥೆಗೆ ನಿರ್ದೇಶಕರೆ ಚಿತ್ರಕಥೆ ಬರೆದಿದ್ದಾರೆ. ಸಾಧುಕೋಕಿಲ ಸಂಗೀತ ನಿರ್ದೇಶನ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ ಹಾಗೂ ವಿಜಯನ್ ಅವರ ಸಾಹಸ ನಿರ್ದೇಶನವಿರುವ ಈ “ಫೀನಿಕ್ಸ್” ಚಿತ್ರಕ್ಕೆ ಎಂ.ಎಸ್ ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ.

ಇತ್ತೀಚಿಗೆ ಓಂಪ್ರಕಾಶ್ ರಾವ್ ಅವರ ಹುಟ್ಟುಹಬ್ಬದಂದು ಈ ಚಿತ್ರದ ಮೊದಲ ಪೋಸ್ಟರ್ ಸಹ ಬಿಡುಗಡೆಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin