ನವಂಬರ್ 19ಕ್ಕೆ “ನಾ ನಿನ್ನ ಬಿಡಲಾರೆ” ಚಿತ್ರ ಬಿಡುಗಡೆ
“ನಾನಿನ್ನ ಬಿಡಲಾರೆ…” ಅಂದು ಅನಂತ್‍ನಾಗ್ ಮತ್ತು ಜೂಲಿ ಲಕ್ಷ್ಮೀ ಕಾಂಬಿನೇಷನ್‍ನಲ್ಲಿ ಬಂದ ಎವರ್ ಗ್ರೀನ್ ಚಿತ್ರ. ಇದೀಗ ಅದೇ ಟೈಟಲ್ ಇಟ್ಟೊಂಡು, ಈ ಕಾಲಕ್ಕೆ ತಕ್ಕ, ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್‍ನ ಹೊಸ ತಂಡ ಹೊಸ ಆಯಾಮದಲ್ಲಿ ಕನ್ನಡ ಪ್ರೇಕ್ಷಕರೆದುರಿಗೆ ಬರಲು ಸಜ್ಜಾಗಿದೆ.
ಈಗಾಗಲೇ ಟೀಸರ್ ನಿಂದ ಕುತೂಹಲ ಮೂಡಿಸಿದ್ದ, ಈ ಚಿತ್ರತಂಡ ಸಿಂಗಲ್ ಟೀಸರ್ ನಿಂದ್ಲೇ ನಿರೀಕ್ಷೆ ಹುಟ್ಟಿಸಿದೆ. ಇದೀಗ ಪ್ರೇಕ್ಷಕರೆದುರಿಗೆ ಬರೋದಕ್ಕೆ ದಿನಾಂಕ ನಿಗದಿ ಮಾಡಿದೆ. ನವೆಂಬರ್ 29 ಕ್ಕೆ ನಾನಿನ್ನ ಬಿಡಲಾರೆ ಚಿತ್ರ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್‍ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದಾರೆ..
ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರೋ ‘ನಾ ನಿನ್ನ ಬಿಡಲಾರೆ ಚಿತ್ರವನ್ನು ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ.
ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ..
ಟೈಟಲ್, ಪೆÇೀಸ್ಟರ್ ಟೀಸರ್ ನಿಂದ್ಲೇ ಕನ್ನಡ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ನಾನಿನ್ನ ಬಿಡಲಾರೆ ಚಿತ್ರತಂಡ ಇಲ್ಲಿಂದ ಪ್ರಚಾರ ಕಾರ್ಯ ಶುರು ಮಾಡಿದ್ದು, ಸದ್ಯದಲ್ಲೇ ಎರಡು ಹಾಡು ಹಾಗೂ ಚಿತ್ರ ಥಿಯೇಟರಿಕಲ್ ಟ್ರೈಲರ್ ನ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ.