Only a few days left for the release of "Ekka" movie: Team blessed by Goddess

“ಎಕ್ಕ” ಚಿತ್ರ ಬಿಡುಗಡೆಗೆ ಮೂರೇ ದಿನ ಬಾಕಿ : ದೇವಿಯ ಆಶೀರ್ವಾದ ಪಡೆದ ತಂಡ - CineNewsKannada.com

“ಎಕ್ಕ” ಚಿತ್ರ ಬಿಡುಗಡೆಗೆ ಮೂರೇ ದಿನ ಬಾಕಿ : ದೇವಿಯ ಆಶೀರ್ವಾದ ಪಡೆದ ತಂಡ

ಯುವ” ಚಿತ್ರದ ಬಳಿಕ ನಟ ಯುವ ರಾಜ್ ಕುಮಾರ್ ಅಭಿನಯದ ಮತ್ತೊಂದು ಬಹು ನಿರೀಕ್ಷೆಯ ಚಿತ್ರ ” ಎಕ್ಕ” ಜುಲೈ 18 ಕ್ಕೆ ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಬೆಂಗಳೂರಿನ ಬಂಡಿ ಮಹಾಕಾಳಿ ಅಮ್ಮನಿಗೆ ಪೂಜೆ ಸಲ್ಲಿಸಿ ಚಿತ್ರ ತಂಡ ದೇವಿಯ ಆಶೀರ್ವಾದ ಪಡೆದುಕೊಂಡಿದೆ

ಕನ್ನಡ ಸೇರಿದಂತೆ ಇದೇ ಜುಲೈ 18ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಯುವ ರಾಜಕುಮಾರ್, ಸಂಜನಾ ಆನಂದ್, ಸಂಪದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್.

ಚಿತ್ರವನ್ನು ಕನ್ನಡ ಚಿತ್ರರಂಗದ ಮೂರು ಪ್ರತಿಷ್ಠಿತ ಸಂಸ್ಥೆಗಳಾದ ಪಿ ಆರ್ ಕೆ ಪ್ರೊಡಕ್ಷನ್, ಜಯಣ್ಣ ಫಿಲ್ಮ್‌ ಮತ್ತು ಕೆಆರ್ ಜಿ ಸ್ಟುಡಿಯೋಸ್ ನಿರ್ಮಾಣ ಮಾಡಿದೆ .

ಚಿತ್ರಮಂದರಿರಕ್ಕೆ ಜನರನ್ನು ಕರೆ ತರಲು ಹಾಡುಗಳು ಆಹ್ವಾನ ಪತ್ರಿ ಇದ್ದಂತೆ .ಈಗಾಗಲೇ ಎಕ್ಕಾ ಮಾರ್ ಮಾರ್, ಬ್ಯಾಂಗ್ ಬಂಗಾರಿ ಹಾಡು ಸಿನಿ ಪ್ರೇಕ್ಷಕರ ಸೂರೆಗೊಂಡಿದ್ದು ಚಿತ್ರದ ಸೂಪರ್ ಡೂಪರ್ ಹಿಟ್ ಆಗುವ ಎಲ್ಲಾ ಮುನ್ಸೂಚನೆ ನೀಡಿದೆ.

ಜೊತೆಗೆ ನಟ ಯುವ ರಾಜ್ ಕುಮಾರ್ ವಿಭಿನ್ನ ಗೆಟಪ್ ಮತ್ತು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಯುವ ರಾಜ್ ಕುಮಾರ್ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿರುವ ರೀತಿ ಪುನೀತ್ ರಾಜ್ ಕುಮಾರ್ ನಟಿಸಿದ್ದಾರೆಯೋ ಎನ್ನುವ ಮಟ್ಟಿಗೆ ಭಾಸವಾಗಿದ್ದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ರಂಜನೆಯ ರಸದೌತಣ ನೀಡುವುದು ಬಹುತೇಕ ಪಕ್ಕಾ ಎನ್ನುವ ಮಾತುಗಳು ಗಾಂಧಿನಗರರಿಂದ‌ ಕೇಳಿ ಬಂದಿದೆ.

ಜೊತೆಗೆ ಕನ್ನಡ ಚಿತ್ರರಂಗದ ಮೂರು ಪ್ರತಿಷ್ಠಿತ ಸಂಸ್ಥೆಗಳು ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೀಗಾಗಿ ಕನ್ನಡ ಸಿನಿಮಾ‌ ಪ್ರೇಕ್ಷಕರನ್ನು ಎಕ್ಕ ಚಿತ್ರ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿರುವುದು ಸುಳ್ಳಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin